ಅಯೋಧ್ಯೆ:ಅಯೋಧ್ಯೆಯಲ್ಲಿ ರಾಮಲಲ್ಲಾ ‘ಪ್ರಾಣ ಪ್ರತಿಷ್ಠಾ’ ಸಮಾರಂಭವು ಮಧ್ಯಾಹ್ನ 12:20ಕ್ಕೆ ಪ್ರಾರಂಭವಾಗಲಿದ್ದು, ಮಧ್ಯಾಹ್ನ 1 ಗಂಟೆಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. ಐತಿಹಾಸಿಕ ಆಚರಣೆಗಳಿಗೆ ಅಂತಿಮ ಕ್ಷಣಗಣನೆ ಶುರುವಾಗಿದ್ದು, ಉತ್ತರಪ್ರದೇಶದ ದೇವಾಲಯ ಪಟ್ಟಣದ ಧಾರ್ಮಿಕ ಸ್ಥಳದಲ್ಲಿ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ. ಇದರ ನಡುವೆ ಶ್ರೀರಾಮನ ಅತಿದೊಡ್ಡ ರಂಗೋಲಿ ದೇಶದ ಜನರ ಗಮನ ಸೆಳೆದಿದೆ.
ಇದನ್ನೂ ಓದಿ:ಬೆಂಗಳೂರಲ್ಲಿ ಅಂಬಿಗರ ಚೌಡಯ್ಯ ಪ್ರತಿಮೆ ನಿರ್ಮಾಣ: ಸಚಿವ ಶಿವರಾಜ ತಂಗಡಗಿ ಭರವಸೆ
ಶ್ರೀಮತಿ ದರ್ಶನಾಬೆನ್ ಜರ್ದೋಶ್ ಅವರ ಮಾರ್ಗದರ್ಶನದಲ್ಲಿ ಗುಜರಾತಿನ ಸೂರತ್‌ನಲ್ಲಿ, ಅಯೋಧ್ಯೆಯ ರಾಮಮಂದಿರಕ್ಕೆ ಸಮರ್ಪಿತವಾದ 11,111 ಚದರ ಅಡಿಯ ಬೃಹತ್ ರಂಗೋಲಿಯನ್ನು ರಚಿಸಲಾಗಿದೆ. ಮೋಟಾ ಮಂದಿರ್ ಯುವಕ ಮಂಡಲ್ ಮತ್ತು ಅಮಿ ಚಾರಿಟೇಬಲ್ ಟ್ರಸ್ಟ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ನೈಜ ಶ್ರೀರಾಮ ರಂಗೋಲಿಯನ್ನು ಒಳಗೊಂಡಿದ. 1400 ಕೆಜಿ ಬಣ್ಣವನ್ನು ಬಳಸಲಾಗಿದ್ದು, ಮೆಹಂದಿ ಕಲಾವಿದೆ ನಿಮಿಷಾಬೆನ್ ಪರೇಖ್ ವಿನ್ಯಾಸಗೊಳಿಸಿದ್ದಾರೆ.
A massive 11,111 square feet rangoli, dedicated to the upcoming Ram temple in Ayodhya, is created in Surat under Mrs. Darshanaben Jardosh's guidance. Organized by Mota Mandir Yuvak Mandal and Ami Charitable Trust, it features a realistic Shri Ram Rangoli, utilizing 1400 kg of…pic.twitter.com/JMs96zHr58
— DD News (@DDNewslive)January 20, 2024

ಇದಿಷ್ಟೇ ಅಲ್ಲದೆ ಸುಮಾರು 1,000 ವಿಐಪಿಗಳಿಗೆ ಪ್ರಸಾದವನ್ನು ಸಿದ್ಧಪಡಿಸುವ ಅಡುಗೆಮನೆಯಲ್ಲಿ ಭಾರಿ ಸಡಗರ ತುಂಬಿದೆ. ಅಯೋಧ್ಯೆ ಪ್ರವೇಶಿಸುತ್ತಿದ್ದಂತೆ ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳು ಮಿರ ಮಿರ ಮಿಂಚುವಂತೆ ಅಲಂಕರಿಸಿರುವ ಆಡಳಿತ ಮಂಡಳಿ, ಭಕ್ತಾಧಿಗಳ ಕಣ್ಮನ ಸೆಳೆಯಲು ಹಲವು ವಿಶೇಷತೆಗಳನ್ನು ಸಿದ್ಧಪಡಿಸಿದೆ.
ನಾಳೆ ನಡೆಯಲಿರುವ ವಿಜೃಂಭಣೆಯ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ, ದೇಶದ ಜನತೆ ಮತ್ತು ಗಣ್ಯರು ಸಾಕ್ಷಿಯಾಗಲಿದ್ದಾರೆ. ಅಯೋಧ್ಯೆಗೆ ತೆರಳಿ ಸಂಪೂರ್ಣ ಕಾರ್ಯಕ್ರವನ್ನು ವೀಕ್ಷಿಸಲು ಆಗಲಿಲ್ಲ ಎಂದು ಜನರು ಬೇಸರಗೊಳ್ಳುವ ಅವಶ್ಯಕತೆಯಿಲ್ಲ. ಭಕ್ತರು ತಮ್ಮ ಮನೆಯಲ್ಲೇ ದೂರದರ್ಶನ ಮತ್ತು ಇತರ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲೈವ್ ಕಾರ್ಯಕ್ರವನ್ನು ವೀಕ್ಷಿಸಬಹುದಾಗಿದೆ,(ಏಜೆನ್ಸೀಸ್).
BBKS10: ಫಿನಾಲೆಯಲ್ಲಿ ಈ ಇಬ್ಬರು ಕಿಚ್ಚನ ಪಕ್ಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 3 =
Remember me
