ತಿರುಪತಿ:​ಪ್ರಭಾಸ್, ಕೃತಿ ಸನೊನ್, ಸೈಫ್​ ಅಲಿ ಖಾನ್​​​ ನಟನೆಯ ಬಹು ನಿರೀಕ್ಷಿತ ಆದಿ ಪುರುಷ್​ ಸಿನಿಮಾದ ಪ್ರೀ ರಿಲೀಸ್​ ಇವೆಂಟ್​ಗೆ ಭರ್ಜರಿ ರೆಸ್ಪಾನ್ಸ್​ ದೊರೆತ್ತಿದ್ದು, ಚಿತ್ರತಂಡವು ಅಂತಿಮ ಟ್ರೈಲರ್​​ ರಿಲೀಸ್​ ಮಾಡುವ ಮೂಲಕ ಅಭಿಮಾನಿಗಳನ್ನು ಖುಷಿ ಪಡಿಸಿದೆ.
ತಿರುಪತಿಯ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ನಡೆದ ಅದ್ಧೂರಿ ಸಮಾರಂಭಕ್ಕೆ ಸುಮಾರು 2.5 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಉಚಿತ ವಿದ್ಯುತ್​ ಪಡೆಯಲು ಷರತ್ತುಗಳು ಅನ್ವಯ: ಸಚಿವ ಜಾರ್ಜ್​
ಮಂಗಳವಾರ ನಡೆದ ಟ್ರೈಲರ್ ಲಾಂಚ್​ ಮಾಡಿದ ವೇಳೆ ಚಿತ್ರತಂಡ ಸುಮಾರು 50 ಲಕ್ಷ ರೂ. ಮೌಲ್ಯದ ಪಟಾಕಿಯನ್ನು ಸಿಡಿಸಿ ಸಂಭ್ರಮಿಸಿದೆ ಎಂದು ವರದಿಯಾಗಿದೆ. ಕಾರ್ಯಕ್ರಮದಲ್ಲಿ ತಿರುಮಲ ದೇವಸ್ಥಾನದ ಅರ್ಚಕರು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಚಿತ್ರವು ಜೂನ್​ 16ರಂದು ಜಾಗತಿಕವಾಗಿ ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂನಲ್ಲಿ ತೆರೆ ಕಾಣಲಿದೆ. ಇದಕ್ಕೂ ಮುನ್ನ ಚಿತ್ರವು ಜೂನ್​ 13ರಂದು ನ್ಯೂಯಾರ್ಕ್​ನಲ್ಲಿ ನಡೆಯಲಿರುವ ಟ್ರಿಬೆಕಾ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ.

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:thirteen + thirteen =
Remember me
