ಹೊಸದಿಲ್ಲಿ:ಭಾರತೀಯ ಕುಸ್ತಿ ಒಕ್ಕೂಟದ (WFI) ಮಾಜಿ ಮುಖ್ಯಸ್ಥ ಬ್ರಿಜ್​ ಭೂಷಣ್​ ಶರಣ್​ ಸಿಂಗ್​ ಆಪ್ತ ಸಂಜಯ್ ಸಿಂಗ್ ಡಬ್ಲ್ಯುಎಫ್​ಐನ ಉನ್ನತ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿ, ನೂತನ ಅಧ್ಯಕ್ಷರಾಗಿ ಆಯ್ಕೆಯಾದರು. ಈ ವಿಷಯ ತಿಳಿಯುತ್ತಿದ್ದಂತೆ ತೀವ್ರ ಅಸಮಾಧಾನಗೊಂಡ ಒಲಿಂಪಿಕ್​ ಪದಕ ವಿಜೇತೆ, ಕುಸ್ತಿಪಟು ಸಾಕ್ಷಿ ಮಲಿಕ್​ ತಮ್ಮ ಕುಸ್ತಿ ಜಗತ್ತಿಗೆ ಇದೀಗ ಗುಡ್​ಬೈ ಹೇಳಿದ್ದಾರೆ.
ಇದನ್ನೂ ಓದಿ:ಮುಂದಿನ ಐದು ವರ್ಷಗಳಲ್ಲಿ 744 ದಶಲಕ್ಷ ಯೂನಿಟ್ ಇಂಧನ ಉಳಿತಾಯದ ಗುರಿ
ಸಂಜಯ್ ಸಿಂಗ್ ಡಬ್ಲ್ಯುಎಫ್‌ಐ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಕುಸ್ತಿಯನ್ನು ತ್ಯಜಿಸುವ ನಿರ್ಧಾರಕ್ಕೆ ಬಂದ ಸಾಕ್ಷಿ ಮಲಿಕ್, “ಡಬ್ಲ್ಯುಎಫ್​ಐ ಅಧ್ಯಕ್ಷರಾಗಿ ಇದೀಗ ಸಂಜಯ್​ ಸಿಂಗ್​ ಆಯ್ಕೆಯಾಗಿದ್ದು, ಮಹಿಳಾ ಕುಸ್ತಿಪಟಿಗಳ ಮೇಲಿನ ಲೈಂಗಿಕ ಕಿರುಕುಳ ಮುಂದುವರಿಯಲಿದೆ” ಎಂದರು.
“ಅಲ್ಲದೆ, ದೇಶದಲ್ಲಿ ಹೇಗೆ ನ್ಯಾಯವನ್ನು ಹುಡುಕಿಕೊಳ್ಳಬೇಕು ಎಂಬುದರ ಸುಳಿವು ಇಲ್ಲ. ನಮ್ಮ ಕುಸ್ತಿ ವೃತ್ತಿಯ ಭವಿಷ್ಯದ ಕತ್ತಲಲ್ಲಿದೆ. ನಾವು ಎಲ್ಲಿಗೆ ಹೋಗಬೇಕು ಎಂಬುದು ತಿಳಿಯುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ:ಧೋನಿ ಸರ್​ ಕಪ್​ ಗೆಲ್ಲಲು RCBಗೆ ಸಹಾಯ ಮಾಡಿ: ಯುವಕನ ಮನವಿಗೆ ಮಾಹಿ ಕೊಟ್ಟ ಉತ್ತರ ವೈರಲ್​
ಸಾಕ್ಷಿ ಮಲಿಕ್ ಕುಸ್ತಿ ತ್ಯಜಿಸಿದ ಸುದ್ದಿ ತಿಳಿಯುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಬ್ರಿಜ್ ಭೂಷಣ್, “ಅವರ ನಿರ್ಧಾರಕ್ಕೂ ನನಗೂ ಯಾವುದೇ ಸಂಬಂಧವಿಲ್ಲ” ಎಂದು ಹೇಳಿದರು,(ಏಜೆನ್ಸೀಸ್).
ಸಹೋದರನಿಗೆ ಕಿಡ್ನಿ ದಾನ ಮಾಡಿದ ಮಹಿಳೆ; ವಾಟ್ಸ್​​ಆ್ಯಪ್​​ ಮೂಲಕ ತ್ರಿವಳಿ ತಲಾಖ್ ಕೊಟ್ಟ ಪತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
