ನವದೆಹಲಿ:ದೆಹಲಿಯಲ್ಲಿ ಕರೊನಾ ವೈರಸ್ ಪ್ರಸರಣ ಮಿತಿಮೀರುತ್ತಿದೆ. ಅಲ್ಲಿ ಸೋಂಕು ನಿಯಂತ್ರಣ ಸದ್ಯದ ಆದ್ಯತೆಯಾಗಿದ್ದು, ಗೃಹ ಸಚಿವ ಅಮಿತ್​ ಷಾ ಅವರೇ ಫೀಲ್ಡ್​ಗೆ ಇಳಿದಿದ್ದಾರೆ.
ದೆಹಲಿಯಲ್ಲಿ ಕರೊನಾ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಇಂದು ಸರ್ವಪಕ್ಷಗಳ ಸಭೆ ನಡೆಸಿರುವ ಅಮಿತ್​ ಷಾ, ಈ ಹೊತ್ತಲ್ಲಿ ರಾಜಕೀಯ ಪಕ್ಷಗಳು ತಮ್ಮ ಭಿನ್ನಾಭಿಪ್ರಾಯ, ಭಿನ್ನಮತಗಳನ್ನು ಬದಿಗಿರಿಸಿ, ಒಗ್ಗಟ್ಟಾಗಿ ಕೊವಿಡ್​-19 ವಿರುದ್ಧ ಹೋರಾಡಬೇಕು ಎಂದು ಹೇಳಿದ್ದಾರೆ.
ಕರೊನಾ ಸೋಂಕು ಮಿತಿಮೀರುತ್ತಿರುವ ಈ ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಏಕತೆಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಜನರಿಗೂ ನಮ್ಮ ಮೇಲೆ ನಂಬಿಕೆ ಹೆಚ್ಚಾಗುತ್ತದೆ. ಹಾಗೇ ದೆಹಲಿ ಅತ್ಯಂತ ಶೀಘ್ರದಲ್ಲೇ ಸಹಜಸ್ಥಿತಿಗೆ ಮರಳುತ್ತದೆ ಎಂದಿದ್ದಾರೆ.ಇದನ್ನೂ ಓದಿ:ಸಿನಿಮಾ ಶೂಟಿಂಗ್‌ಗೆ ಮುಕ್ತ ಅವಕಾಶ ಕೊಟ್ಟ ರಾಜ್ಯ ಸರ್ಕಾರ
ಅಮಿತ್​ ಷಾ ಅವರು ನಡೆಸಿದ ಸಭೆಯಲ್ಲಿ ಬಿಜೆಪಿ, ಆಮ್​ ಆದ್ಮಿ ಪಾರ್ಟಿ, ಕಾಂಗ್ರೆಸ್​ ಮತ್ತು ಬಿಎಸ್​ಪಿ ಮುಖಂಡರು ಭಾಗವಹಿಸಿದ್ದರು.  ಈ ಎಲ್ಲ ಪಕ್ಷಗಳ ನಾಯಕರಿಗೂ ಅಮಿತ್​ ಷಾ ಸೂಚನೆಯೊಂದನ್ನು ನೀಡಿದ್ದಾರೆ. ಕರೊನಾ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ದೆಹಲಿ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯನ್ನು ತಳಮಟ್ಟದಿಂದ ಅನುಷ್ಠಾನಗೊಳಿಸಲು ಎಲ್ಲ ಪಕ್ಷಗಳ ಕಾರ್ಯಕರ್ತರೂ ಮುಂದಾಗಬೇಕು. ಇದಕ್ಕಾಗಿ ಆಯಾ ಪಕ್ಷಗಳ ಮುಖಂಡರು ಸರಿಯಾಗಿ ಸಲಹೆ, ಮಾರ್ಗದರ್ಶನ ನೀಡಬೇಕು ಎಂದು ಸೂಚಿಸಿದ್ದಾರೆ. ಪ್ರತಿಯೊಬ್ಬರೂ ನಿಯಮಗಳನ್ನು ಸರಿಯಾಗಿ ಪಾಲಿಸಿದಾಗ ದೆಹಲಿಯಲ್ಲಿ ಬಹುಬೇಗ ಕರೊನಾ ನಿಯಂತ್ರಣಕ್ಕೆ ಬರುತ್ತದೆ. ಸಹಜ ಸ್ಥಿತಿಗೆ ಮರಳುತ್ತದೆ ಎಂದು ಹೇಳಿದ್ದಾರೆ.
ಹಾಗೇ, ದೆಹಲಿಯಲ್ಲಿ ಕೊವಿಡ್​-19 ತಪಾಸಣೆಯ ಪ್ರಮಾಣವನ್ನು ಹೆಚ್ಚಿಸಬೇಕು. ಇದಕ್ಕಾಗಿ ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು ಎಂದು ಷಾ ತಿಳಿಸಿದ್ದಾರೆ. ಸಾಂಕ್ರಾಮಿಕ ಕೊವಿಡ್​-19 ಪರಿಸ್ಥಿತಿಯಲ್ಲಿ ಸಕ್ರಿಯರಾಗಿ ಹೋರಾಡುತ್ತಿರುವ ಮುಖಂಡರನ್ನು ಅವರು ಶ್ಲಾಘಿಸಿದ್ದಾರೆ.ಇದನ್ನೂ ಓದಿ:ಅಣ್ವಸ್ತ್ರದಲ್ಲಿ ಭಾರತಕ್ಕಿಂತಲೂ ಪಾಕ್, ಚೀನಾನೇ ಸ್ಟ್ರಾಂಗ್​ ಎಂದಿದೆ ವರದಿ!
ಸಭೆ ಮುಗಿಯುತ್ತಿದ್ದಂತೆ ಟ್ವೀಟ್​ ಮಾಡಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಅವರು, ದೆಹಲಿಯಲ್ಲಿ ಮತ್ತೊಮ್ಮೆ ಲಾಕ್​ಡೌನ್​ ಅನುಷ್ಠಾನಕ್ಕೆ ತರಲಾಗುತ್ತದೆ ಎಂಬಂಥ ಊಹಾಪೋಹಗಳು ಹರಿದಾಡುತ್ತಿವೆ. ಆದರೆ ಅಂತಹ ಯೋಜನೆಗಳು ಇಲ್ಲ. ಮತ್ತೆ ದೆಹಲಿ ಲಾಕ್​ಡೌನ್​ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್​)
ನಾಲ್ಕು ಜಿಲ್ಲೆಗಳು ಸಂಪೂರ್ಣ ಲಾಕ್​ಡೌನ್​: ತಮಿಳುನಾಡು ಸಿಎಂ ಘೋಷಣೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × two =
Remember me
