ನವದೆಹಲಿ:ಈಗ ಏನಿದ್ದರೂ ಸಾಮಾಜಿಕ ಜಾಲತಾಣಗಳ ಯುಗ. ಪ್ರತಿನಿತ್ಯವು ಹಲವಾರು ರೀತಿಯ ವಿಡಿಯೋಗಳು ಮತ್ತು ಫೋಟೋಗಳು ವೈರಲ್ ಆಗುತ್ತಿರುತ್ತವೆ. ಇವುಗಳಲ್ಲಿ ಕೆಲವು ವಿಶೇಷ ಕಾರಣದಿಂದ ಜಾಲತಾಣದಲ್ಲಿ ದಿಢೀರನೇ ವೈರಲ್​ ಆಗಿಬಿಡುತ್ತವೆ. ಈ ಹಿಂದೆ ಹೋಟೆಲ್‌ಗಳಲ್ಲಿನ ಆಹಾರ ಪದಾರ್ಥಗಳ ಬೆಲೆ, ಜನರು ಬಳಸುತ್ತಿದ್ದ ವಿವಿಧ ರೀತಿಯ ವಸ್ತುಗಳ ಬಿಲ್​ ಜಾಲತಾಣಗಳಲ್ಲಿ ವೈರಲ್ ಆಗಿರುವುದನ್ನು ನೋಡಿ ಎಲ್ಲರೂ ಅಚ್ಚರಿ ವ್ಯಕ್ತಪಡಿಸುತ್ತಾರೆ. ನೀವು ಕೂಡ ಹಳೆಯ ಬಿಲ್​ ನೋಡಿ ಆಶ್ಚರ್ಯ ಚಕಿತರಾಗಿರುತ್ತೀರಿ ಎಂದು ಭಾವಿಸಿದ್ದೇವೆ.
ನಮ್ಮ ಕಾಲದಲ್ಲಿ 1 ರೂಪಾಯಿ ಕೊಟ್ಟರೆ ಏನೆಲ್ಲಾ ಬರ್ತಿತ್ತು ಗೊತ್ತಾ? ಆದರೆ, ಈ ಕಾಲದಲ್ಲಿ 100 ರೂಪಾಯಿಗೂ ಬೆಲೆಯಿಲ್ಲ ಎಂದು ಹಿರಿಯರು ಆಡುವ ಮಾತಗಳನ್ನು ಆಗಾಗ ನೀವು ಕೇಳಿರುತ್ತಿರಿ. ಏಕೆಂದರೆ, ಇಂದು ಎಲ್ಲ ವಸ್ತುಗಳ ಬೆಲೆ ದುಬಾರಿಯಾಗಿದೆ. ಬೆಳಗ್ಗಿನ ತಿಂಡಿ ಮಾಡಬೇಕೆಂದರೂ ನೂರು ಬಾರಿ ಯೋಚಿಸಬೇಕಾದ ಕಾಲ ಇದಾಗಿದೆ. ಪ್ರಸ್ತುತ ಬೆಲೆ ಏರಿಕೆಯ ಬಗ್ಗೆ ದೇಶದಲ್ಲಿ ಭಾರಿ ಚರ್ಚೆಯಾಗುತ್ತಿರುವುದರ ನಡುವೆಯೇ 1963ನೇ ಇಸವಿಗೆ ಸಂಬಂಧಿಸಿದ ಪೆಟ್ರೋಲ್​ ಬಿಲ್ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.
ಸದ್ಯ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಾಗಿದೆ ಎಂದು ವಿಶೇಷವಾಗಿ ಹೇಳಬೇಕಾಗಿಲ್ಲ. ಇಂಧನ ಬೆಲೆ ಮಾತ್ರವಲ್ಲ ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆಯೂ ಗ್ರಾಹಕರ ಜೇಬು ಸುಡುತ್ತಿದೆ. ಕೊಂಡುಕೊಳ್ಳಲು ನೂರು ಬಾರಿ ಯೋಚಿಸುವಂತಾಗಿದೆ. ದೇಶದಲ್ಲಿ ಪೆಟ್ರೋಲ್​-ಡೀಸೆಲ್​ ಬೆಲೆ ಗರಿಷ್ಠ ಮಟ್ಟದಲ್ಲೇ ಮುಂದುವರೆದಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್​ಗೆ 102 ರೂಪಾಯಿ 86 ಪೈಸೆ ಹಾಗೂ ಡೀಸೆಲ್ ಬೆಲೆ ಲೀಟರ್‌ಗೆ 88 ರೂಪಾಯಿ 94 ಪೈಸೆಯಲ್ಲಿ ಮಾರಾಟವಾಗುತ್ತಿದೆ. ಇದರ ನಡುವೆ ಸುಮಾರು 50 ವರ್ಷಗಳ ಹಿಂದಿನ ಪೆಟ್ರೋಲ್ ಬಿಲ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಲ್​ನಲ್ಲಿ ಪೆಟ್ರೋಲ್​ ಬೆಲೆ ನೋಡಿದವರು ಒಂದು ಕ್ಷಣ ಬೆರಗಾಗುತ್ತಿದ್ದಾರೆ.
ವೈರಲ್​ ಆಗಿರುವ ಬಿಲ್​ನಲ್ಲಿ ಏನಿದೆ ಎಂಬುದನ್ನು ನೋಡುವುದಾದರೆ, ಒಬ್ಬ ವ್ಯಕ್ತಿ ಭಾರತ್ ಪೆಟ್ರೋಲ್ ಬಂಕ್‌ನಿಂದ 5 ಲೀಟರ್ ಪೆಟ್ರೋಲ್ ಖರೀದಿಸಿದ್ದಾನೆ. 3 ರೂಪಾಯಿ 60 ಪೈಸೆ ಬಿಲ್​ ಮಾಡಲಾಗಿದೆ. ಇದು ಒಂದು ಲೀಟರ್ ಪೆಟ್ರೋಲ್ ಬೆಲೆಯಲ್ಲ ಬದಲಾಗಿ ಐದು ಲೀಟರ್ ಪೆಟ್ರೋಲ್​ ಬೆಲೆ. ಅಂದರೆ ಇಂದು ಲೀಟರ್ ಪೆಟ್ರೋಲ್ ದರ ಕೇವಲ 72 ಪೈಸೆ. ಕನಿಷ್ಠ ಒಂದು ರೂಪಾಯಿ ಕೂಡ ಇಲ್ಲ. ಆದರೀಗ ಪೆಟ್ರೋಲ್ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.

ಬಿಲ್​ ನೋಡಿದ ನೆಟ್ಟಿಗರು ತರಹೇವಾರಿ ಕಾಮೆಂಟ್​ಗಳನ್ನು ಹರಿಬಿಡುತ್ತಿದ್ದಾರೆ. ಕೇವಲ ಒಂದು ರೂಪಾಯಿಗೆ ಇಷ್ಟೊಂದು ಪೆಟ್ರೋಲ್ ಸಿಗ್ತಿತ್ತಾ? ಈಗ ಕೈಯಲ್ಲಿ 100 ರೂಪಾಯಿ ಇದ್ದರೂ ಅಷ್ಟೊಂದು ಲಾಭವಿಲ್ಲ ಎನ್ನುತ್ತಿದ್ದಾರೆ. ಈ ಬಿಲ್​ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ತಿಳಿಸಲು ನಮಗೆ ಕಾಮೆಂಟ್​ ಮಾಡಿ.(ಏಜೆನ್ಸೀಸ್​)
ವಿರಾಟ್​​ ಕೊಹ್ಲಿ SSLC ಮಾರ್ಕ್ಸ್​ ಕಾರ್ಡ್ ವೈರಲ್​!​ ರನ್​ ಮೆಷಿನ್​ ಪಡೆದ ಅಂಕ ಎಷ್ಟು? ಗಣಿತದ ಮೇಲೆ ಎಲ್ಲರ ಕಣ್ಣು

ಈ ಒಂದು ಭಯದಿಂದ ಟಿ20ಗೆ ಕೊಹ್ಲಿ ನಿವೃತ್ತಿ ಘೋಷಣೆ! ನಾಲಿಗೆ ಹರಿಬಿಟ್ಟ ಪಾಕ್​ ಮಾಜಿ ಕ್ರಿಕೆಟಿಗ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:19 − 5 =
Remember me
