ನವದೆಹಲಿ:ಬೆಣ್ಣೆ ಮಸಾಲೆದೋಸೆಯನ್ನು ಬಹುತೇಕ ಎಲ್ಲರೂ ಕೇಳಿರುತ್ತೀರಿ, ತಿಂದಿರುತ್ತೀರಿ ಕೂಡ. ಆದರೆ ಬೆಣ್ಣೆ ಕಾಫಿ ಎಂದರೆ ಎಲ್ಲರೂ ಒಮ್ಮೆ ಹುಬ್ಬೇರಿಸಿದರೂ ಅಚ್ಚರಿ ಏನಲ್ಲ. ಅದಾಗ್ಯೂ ಇಲ್ಲೊಂದು ಕಡೆ ಬೆಣ್ಣೆಯನ್ನೂ ಹಾಕಿ ಕಾಫಿ ಮಾಡಿಕೊಡಲಾಗುತ್ತಿದೆ. ಹಾಗಂತ ಇದೇನೂ ನಿನ್ನೆ ಮೊನ್ನೆಯಿಂದಲ್ಲ, ಸುಮಾರು ಇಪ್ಪತ್ತು ವರ್ಷಗಳಿಂದ ಇಲ್ಲೊಂದು ಕಡೆ ಬೆಣ್ಣೆ ಕಾಫಿ ಮಾಡಿಕೊಡಲಾಗುತ್ತಿದೆ.
ಇಲ್ಲೊಬ್ಬರು ಈ ಬೆಣ್ಣೆ ಕಾಫಿಯನ್ನು ಮಾಡಿಕೊಡುತ್ತಿದ್ದಾರೆ. ಮೊದಲಿಗೆ ಲೋಟಕ್ಕೆ ಹಾಲು ಹಾಕಿ, ಕಾಫಿ ಪುಡಿ ಹಾಕಿ ನಂತರ ಒಂದಷ್ಟು ಬೆಣ್ಣೆಯನ್ನೂ ಹಾಕಿ, ಸಕ್ಕರೆ ಬೆರೆಸುತ್ತಾರೆ. ಬಳಿಕ ಈ ಕಾಫಿ ಮೇಲೆ ಕೊಕೊವಾ ಪುಡಿ ಸಿಂಪಡಿಸಿ ಕುಡಿಯಲು ಕೊಡುತ್ತಾರೆ. ಇಂಥದ್ದೊಂದು ಕಾಫಿಯನ್ನು ಅಮರ್ ಸಿರೋಹಿ ಎಂಬವರು ಕುಡಿದಿದ್ದು, ಅದರ ಅನುಭವ, ಆ ಕಾಫಿ ಮಾಡುವ ದೃಶ್ಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ನಿಮ್ಮೂರಿನ ಇನ್​ಸ್ಪೆಕ್ಟರ್​ ಬದಲಾಗಿದ್ದಾರಾ ನೋಡಿಕೊಳ್ಳಿ: 18 ಡಿವೈಎಸ್‌ಪಿ, 100 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ; ಇಲ್ಲಿದೆ ಪೂರ್ತಿ ಪಟ್ಟಿ
ಹಳೇ ದೆಹಲಿಯ ಹವೇಲಿ ಭಕ್ತಾವರ್​ ಲೇನ್​ನ ಜಾಮಾ ಮಸೀದಿ ಬಳಿ ಇರುವ ಬೀದಿಬದಿಯ ಅಂಗಡಿಯೊಂದರಲ್ಲಿ ಇಪ್ಪತ್ತು ವರ್ಷಗಳಿಂದ ಬೆಣ್ಣೆಯ ಕಾಫಿ ಮಾಡಿ ಮಾರುತ್ತಿದ್ದಾರೆ. ಅಮರ್​ ಸಿರೋಹಿ ಈ ಕಾಫಿಯ ರುಚಿ ನೋಡಿದ್ದು, ಇದು ನಾನು ಅಂದುಕೊಂಡಷ್ಟು ಭಯಂಕರವಾಗಿಲ್ಲ. ಹಾಗೆಯೇ ಹೇಳಿಕೊಳ್ಳುವಷ್ಟು ಅದ್ಭುತ ರುಚಿಯದ್ದಾಗಿಯೂ ಇಲ್ಲ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಬಹಳಷ್ಟು ಜನ ಪ್ರತಿಕ್ರಿಯಿಸಿದ್ದಾರೆ. ಅಂದಹಾಗೆ ಈ ಕಾಫಿಯ ಬೆಲೆ ಮೂವತ್ತು ರೂಪಾಯಿ. (ಏಜೆನ್ಸೀಸ್)


A post shared by Amar Sirohi (@foodie_incarnate)

ಇದನ್ನೂ ಓದಿ:ಬಿಎಂಟಿಸಿ ಖಾಸಗೀಕರಣಕ್ಕೆ ಮೊದಲ ಹೆಜ್ಜೆ?; ಒಂದೇ ಕಲ್ಲಿನಿಂದ ಎರಡು ಹಕ್ಕಿ ಹೊಡೆಯುವ ತಂತ್ರ!
‘ನೋಡಿ.. ನಾನು ಒಂದು ದಿನ ನಿಮ್ಮ ಬಾಡಿಗಾರ್ಡ್​ ಆಗ್ತೀನಿ..’; ನಟಿ ರಶ್ಮಿಕಾ ಮಂದಣ್ಣ

ಕರ್ತವ್ಯನಿರತ ಪೊಲೀಸ್​ ಅಧಿಕಾರಿ ಮೇಲೆ ಕಾರು ಹತ್ತಿಸಲು ಯತ್ನ! ವಿಡಿಯೋ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 20 =
Remember me
