ಮುಂಬೈ:ಅಪ್ಪನ ದಿನಾಚರಣೆಯಂದೇ ತಮ್ಮ ಮಗನ ಹೆಸರನ್ನು ಮಾಜಿ ಕ್ರಿಕೆಟಿಗ ಯುವರಾಜ್​ ಸಿಂಗ್​ ಬಹಿರಂಗಪಡಿಸಿದ್ದಾರೆ. ಜನವರಿಯಲ್ಲಿ ತಮ್ಮ ಮಗುವನ್ನು ಬರಮಾಡಿಕೊಂಡಿದ್ದ ಯುವರಾಜ್​ ಸಿಂಗ್​ ಹಾಗೂ ಹೇಜಲ್ ಕೀಚ್​​​ ದಂಪತಿ ಇದೇ ಮೊದಲ ಬಾರಿಗೆ ಮಗುವಿನ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ.
ತನ್ನ ಪತ್ನಿ ಹಾಗೂ ಮಗುವಿನೊಂದಿಗೆ ಇರುವ ಫೋಟೋವನ್ನು ಹಂಚಿಕೊಂಡಿರುವ ಯುವರಾಜ್​ ಸಿಂಗ್​ ತಮ್ಮ ಮಗನ ಹೆಸರು ಓರಿಯನ್​ ಕೀಚ್​ ಸಿಂಗ್​ ಎಂದು ಹೆಸರಿಟ್ಟಿದ್ದೇವೆ ಎಂದಿದ್ದಾರೆ.ಈ ಹೆಸರು ಸ್ವಲ್ವ ವಿಭಿನ್ನ ಎನಿಸಿದರೂ, ಓರಿಯನ್​ ಎಂಬ ಪದ ಗ್ರೀಕ್​ ಭಾಷೆಯದ್ದಾಗಿದ್ದು, ಬೇಟೆಗಾರ ಹಾಗೂ ನಕ್ಷತ್ರಪುಂಜ ಎಂಬರ್ಥವನ್ನು ನೀಡುತ್ತದೆ ಎಂದು ಅದರ ವಿವರವನ್ನೂ ಯುವರಾಜ್​ ಸಿಂಗ್​ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಈ ಚಿತ್ರಕ್ಕೆ ಬಾಲಿವುಡ್​​ ನಟರಾದ ಆಯುಷ್ಮಾನ್​ ಖುರಾನಾ, ಬಿಪಾಶಾ ಬಸು, ಟೆನಿಸ್​ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಮಾಜಿ ಕ್ರಿಕೆಟಿಗ ಇರ್ಫಾನ್​ ಪಠಾಣ್​ ಶುಭಕೋರಿದ್ದಾರೆ.(ಏಜೆನ್ಸೀಸ್​)
VIDEO: ಮತ್ತೆ ಜನರ ಮನಗೆದ್ದ ಪ್ರಧಾನಿ ಮೋದಿ! ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + seventeen =
Remember me
