ಜೈಪುರ:ರಾಜಸ್ಥಾನದಲ್ಲಿ ಕಾಂಗ್ರೆಸ್​ಗೆ ಅಧಿಕಾರ ಬಂದಿದ್ದು, ಬಹುಮತ ದಕ್ಕಿದ್ದು ಬಿಎಸ್​ಪಿ ಶಾಸಕರಿಂದ….!
ಒಟ್ಟು 200 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್​ 100 ಸ್ಥಾನಗಳನ್ನು ಗಳಿಸಿತ್ತು. ಅತ್ತ ಬಹುಮತಕ್ಕೆ ಇನ್ನೊಂದು ಸ್ಥಾನ ಹಾಗೂ ಸರ್ಕಾರದ ಸ್ಥಿರತೆಗೆ ಇನ್ನಷ್ಟು ಶಾಸಕರು ಬೇಕಾಗಿದ್ದರು. ಈ ಕಾರಣಕ್ಕಾಗಿಯೇ ಸಿಎಂ ಗೆಹ್ಲೋಟ್​ ಬಿಎಸ್​ಪಿಯ ಆರು ಶಾಸಕರನ್ನು ಕಾಂಗ್ರೆಸ್​ನಲ್ಲಿ ವಿಲೀನ ಮಾಡಿಸಿಕೊಂಡಿದ್ದರು. ಹೀಗಾಗಿ ಸರ್ಕಾರ ಬಹುಮತ ಪಡೆದಿತ್ತು.
ಇದನ್ನೂ ಓದಿ;ರಾಜ್ಯಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು 35 ಕೋಟಿ ರೂ. ಆಫರ್​..!
ಇದನ್ನು ಪ್ರಶ್ನಿಸಿ ಬಿಜೆಪಿ ಹೈಕೋರ್ಟ್​ಗೆ ಮೊರೆ ಹೋಗಿತ್ತು. ಶಾಸಕ ಮದನ್​ ದಿಲಾವರ್​ ಈ ವಿಲೀನವನ್ನು ರದ್ದುಗೊಳಿಸಬೇಕೆಂದು ಅರ್ಜಿ ಸಲ್ಲಿಸಿದ್ದರು. ಜತೆಗೆ, ವಿಲೀನವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ಬಗ್ಗೆ ಸ್ಪೀಕರ್​ ಯಾವುದೇ ನಿರ್ಣಯ ಕೈಗೊಂಡಿಲ್ಲ ಎಂದು ದೂರಲಾಗಿತ್ತು.
ಇದೀಗ ಹೈಕೋರ್ಟ್​ ಈ ಅರ್ಜಿಯನ್ನು ವಜಾಗೊಳಿಸಿದೆ. ಇದು ಸಿಎಂ ಅಶೋಕ್​ ಗೆಹ್ಲೋಟ್​ಗೆ ಭಾರಿ ನಿರಾಳತೆ ನೀಡಿದೆ. ಇದಕ್ಕೂ ಮುನ್ನ, ಅರ್ಜಿಗೆ ಸಂಬಂಧಿಸಿದಂತೆ ಸ್ಪೀಕರ್​ರಿಂದ ಎಲ್ಲ ಮಾಹಿತಿಯನ್ನು ಪಡೆಯುವಂತೆ ರಾಜ್ಯ ಸರ್ಕಾರದ ಪರ ವಕೀಲರಿಗೆ ಹೈಕೋರ್ಟ್​ ಸೂಚಿಸಿತ್ತು.
ಇದನ್ನೂ ಓದಿ;ತಾಕತ್ತಿದ್ದರೆ ಸರ್ಕಾರ ಉರುಳಿಸಿ; ಸವಾಲು ಹಾಕಿದ್ದೇಕೆ ಉದ್ಧವ್​ ಠಾಕ್ರೆ?
ಈ ನಡುವೆ ಈ ಅರ್ಜಿಯಲ್ಲಿ ತನ್ನನ್ನು ಪಕ್ಷಗಾರನಾಗಿ ಪರಿಗಣಿಸಬೇಕೆಂದು ಬಿಎಸ್​ಪಿ ಕೂಡ ಮನವಿ ಸಲ್ಲಿಸಿತ್ತು. ಇದೆಲ್ಲದರ ಬಳಿಕವೂ ಅರ್ಜಿ ವಜಾಗೊಳಿಸಿರುವುದು ರಾಜ್ಯ ಸರ್ಕಾರಕ್ಕೆ ನೆಮ್ಮದಿ ನೀಡಿದಂತಾಗಿದೆ.
ಮಕ್ಕಳು ಬೇಡ, ಪೊಲೀಸರೇ ಅಂತ್ಯಕ್ರಿಯೆ ನೆರವೇರಿಸಲಿ; ಡೆತ್​ನೋಟ್​ ಬರೆದಿಟ್ಟು ಪಯಣ ಮುಗಿಸಿದ ದಂಪತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − four =
Remember me
