ಹರಿಯಾಣ:ಸಂಸಾರ ಎಂಬ ನೌಕೆಯಲ್ಲಿ ಹೊಂದಾಣಿಕೆ ಬಹು ಮುಖ್ಯ ಪಾತ್ರ ವಹಿಸಲಿದ್ದು, ಸದಾ ಕಷ್ಟುಸುಖದಲ್ಲಿ ನಿಲ್ಲುವ ಸಂಗಾತಿಯನ್ನು ಅನೇಕರು ತಪ್ಪಾಗಿ ಅರ್ಥೈಸಿಕೊಳ್ತಾರೆ. ಅನೇಕ ಬಾರಿ ಪರಸ್ಪರ ಅರ್ಥವಾಗದಿರುವುದೇ ದೂರವಾಗಲು ಕಾರಣವಾಗುತ್ತದೆ. ಈಗಿನ ದಿನಗಳಲ್ಲಿ ವಿಚ್ಛೇದನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ವಿವಾಹೇತರ ಸಂಬಂಧ ಸೇರಿದಂತೆ ಇನ್ನಿತರ ಕಾರಣಗಳು ಡಿವೋರ್ಸ್​ಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಆದರೆ, ಇಲ್ಲೊಬ್ಬ ವ್ಯಕ್ತಿ ತನ್ನ ಪತ್ನಿ ಸಂಬಂಧಿಕರಿಗೆ ಟೀ ಮಾಡುವುದಿಲ್ಲ ಎಂಬ ವಿಚಾರಕ್ಕೆ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿರುವ ಘಟನೆ ಬೆಳಕಿಗೆ ಬಂದಿದೆ.
ಪಂಜಾಬ್-ಹರಿಯಾಣ ಹೈಕೋರ್ಟ್​ನಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಲಾಗಿದ್ದು, ವಾದ-ಪ್ರತಿವಾದವನ್ನು ಆಲಿಸಿದ ಬಳಿಕ ನ್ಯಾಯಾಲಯ ನೀಡಿರುವ ತೀರ್ಪು ಎಲ್ಲರ ಹುಬ್ಬೇರುವಂತೆ ಮಾಡಿದೆ.
ಮನೆಗೆ ಸಂಬಂಧಿಕರು ಬಂದಾಗಲೆಲ್ಲಾ ನನ್ನ ಹೆಂಡತಿ ಚೆನ್ನಾಗಿ ನೋಡಿಕೊಳ್ಳುವುದಿಲ್ಲ. ಅವರಿಗೆ ತಿಂಡಿ ಮಾಡಿಕೊಡುವುದನ್ನು ಮರೆತುಬಿಡಿ, ಚಹಾವನ್ನು ಸಹ ಕೇಳುವುದಿಲ್ಲ.ಈ ಕಾರಣದಿಂದಾಗಿ, ನನ್ನ ಸ್ನೇಹಿತರು ಹಾಗೂ ಸಂಬಂಧಿಕರ ನಡುವೆ ಇದ್ದ ಬಂಧವು ಹದಗೆಟ್ಟಿದೆ. ನಮ್ಮ ಮನೆಗೆ ಯಾರೂ ಬರುವುದಿಲ್ಲ ಎಂದು ಹೇಳುತ್ತಿದ್ದಾರೆ. ನನಗೆ ನ್ಯಾಯ ಕೊಡಿಸಿ ಎಂದು ಪತಿ ಪಂಜಾಬ್​-ಹರಿಯಾಣ ಹೈಕೋರ್ಟ್​ ಮೆಟ್ಟಿಲೇರಿದ್ದಾನೆ.
ಇದನ್ನೂ ಓದಿ:ಜೂನ್ 24ರಿಂದ 18ನೇ ಲೋಕಸಭೆಯ ಮೊದಲ ಅಧಿವೇಶನ
ಪತಿ ಮಾಡುವ ಎಲ್ಲ ಆರೋಪಗಳು ಸುಳ್ಳು ಎಂದು ಪತ್ನಿ ಹೇಳಿದ್ದಾರೆ. ನಾನು ಆ ರೀತಿಯಾಗಿ ಎಂದೂ ನಡೆದುಕೊಂಡಿಲ್ಲ. ಇತ್ತೀಚೆಗೆ ಗಂಡನ ವರ್ತನೆ ಬದಲಾಗಿದೆ. ಸಣ್ಣಪುಟ್ಟ ವಿಷಯಗಳಿಗೂ ಜಗಳವಾಡುತ್ತಲೇ ಇರುತ್ತಾನೆ. ಆದರೂ ನನಗೆ ಅವನನ್ನು ಬಿಡಲು ಇಷ್ಟವಿಲ್ಲ. ಗಂಡನ ಈ ವರ್ತನೆಯಿಂದ ನಾನು ಖಿನ್ನತೆಗೆ ಒಳಗಾಗಿದ್ದೇನೆ ಎಂದು ಆಕೆಯ ಪತ್ನಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಇತ್ತ ಅರ್ಜಿ ವಿಚಾರಣೆ ನಡೆಸಿದ ನ್ಯಾಯಧೀಶರು ಇಂತಹ ಸಣ್ಣ ವಿಚಾರಕ್ಕೆ ನಾವು ಅರ್ಜಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾ ಮಾಡುವ ಮುನ್ನ ನ್ಯಾಯಾಧೀಶರು ಆಡಿದ ಮಾತುಗಳನ್ನು ಕೇಳಿ ಪತಿಗೆ ಶಾಕ್​ ಆಗಿದೆ. ಪತಿ-ಪತ್ನಿ ನಡುವಿನ ಸಣ್ಣ ಜಗಳ ವಿಚ್ಛೇದನಕ್ಕೆ ಆಧಾರವಾಗುವುದಿಲ್ಲ. ಪತ್ನಿ ಪತಿಯ ಸಂಬಂಧಿಕರು ಅಥವಾ ಸ್ನೇಹಿತರಿಗೆ ಚಹಾ ನೀಡದಿದ್ದರೆ ಅದನ್ನು ಕ್ರೌರ್ಯ ಎಂದು ಕರೆಯಲಾಗುವುದಿಲ್ಲ. ಇಂತಹ ವಿಷಯಗಳು ದಾಂಪತ್ಯದ ಭಾಗವಾಗಿದ್ದು, ಇದಕ್ಕಾಗಿ ಪತಿ-ಪತ್ನಿ ಸಿದ್ಧರಾಗಿರಬೇಕು ಎಂದು ಹೇಳಿ ಅರ್ಜಿಯನ್ನು ವಜಾ ಮಾಡಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:5 × five =
Remember me
