ನವದೆಹಲಿ:ಕರೊನಾಕ್ಕೆಂದೇ ಸದ್ಯ ಯಾವುದೇ ಔಷಧಿ ತಯಾರಾಗಿಲ್ಲ. ಹೀಗಾಗಿ ಸದ್ಯ ಕೊವಿಡ್​-19 ಸೋಂಕಿತರಿಗೆ ಮಲೇರಿಯಾ ನಿಯಂತ್ರಣ ಮಾಡುವ ಹೈಡ್ರಾಕ್ಸಿಕ್ಲೋರೋಕ್ವಿನ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ.
ಈ ಹೈಡ್ರಾಕ್ಸಿಕ್ಲೋರೋಕ್ವಿನ್​ನಿಂದ್​ ಸೈಡ್​ ಎಫೆಕ್ಟ್​ಗಳು ತುಂಬ ಆಗುತ್ತಿವೆ ಎಂದು ಅಲ್ಲಲ್ಲಿ ಕೆಲವರು ಹೇಳಿದ್ದರು. ಆದರೆ ಈಗ ಇಂಗ್ಲೆಂಡ್​ನ ವೈದ್ಯಕೀಯ ಜರ್ನಲ್​ ಲಾನ್ಸೆಂಟ್​ ವರದಿಯೊಂದನ್ನು ಪ್ರಕಟಿಸಿದ್ದು, ಅದರಲ್ಲಿ, ಕ್ಲೋರೊಕ್ವಿನ್ ಅಥವಾ ಹೈಡ್ರಾಕ್ಸಿಕ್ಲೋರೋಕ್ವಿನ್​​ ಬಳಸುತ್ತಿರುವ ಕೊವಿಡ್​-19 ಸೋಂಕಿತರು ಇರುವ ಆಸ್ಪತ್ರೆಗಳಲ್ಲಿ ಮರಣದ ದರ ಮತ್ತು ಹೃದಯ ಬಡಿತದಲ್ಲಿ ಏರುಪೇರು ಉಂಟಾಗುವ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದು ಹೇಳಿದೆ.
ಇದನ್ನೂ ಓದಿ:ಕರೊನಾ ಸೋಂಕಿತರ ಸಂಖ್ಯೆ ಲಕ್ಷ ದಾಟಿದ ಬೆನ್ನಲ್ಲೇ ಕೇಂದ್ರದಿಂದ ಹೊರಬಿತ್ತು ಸಮಾಧಾನಕರ ಸಂಗತಿ
ಹೈಡ್ರಾಕ್ಸಿಕ್ಲೋರೋಕ್ವಿನ್ನು ಕ್ಲಿನಿಕಲ್​ ಟೆಸ್ಟ್ ಮಾಡಬೇಕು. ಅಲ್ಲಿಯವರೆಗೂ ಸೋಂಕಿತರಿಗೆ ಇದರಿಂದ ಚಿಕಿತ್ಸೆ ನೀಡಬಾರದು. ಕೊವಿಡ್​-19ರ ವಿರುದ್ಧ ಈ ಔಷಧಿ ಹೇಗೆ ಹೋರಾಡುತ್ತದೆ ಎಂಬುದನ್ನು ತುರ್ತಾಗಿ ದೃಢೀಕರಣ ಮಾಡಿಕೊಳ್ಳಬೇಕು. ಅದಕ್ಕಾಗಿ ಯಾದೃಚ್ಛೀಕರಣವಾದ ಕ್ಲಿನಿಕಲ್​ ಟೆಸ್ಟ್​​ ಅಗತ್ಯವಿದೆ ಎಂದು ಅಧ್ಯಯನವನ್ನು ಬರೆದ ಲೇಖಕರು ತಿಳಿಸಿದ್ದಾರೆ.
ಲಾನ್ಸೆಂಟ್​​ನಲ್ಲಿ ಪ್ರಕಟವಾದ ಹೈಡ್ರಾಕ್ಸಿಕ್ಲೋರೋಕ್ವಿನ್ ವರದಿಗೆ ಸಂಬಂಧಪಟ್ಟಂತೆ ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಜುರಿಚ್​​ನಲ್ಲಿರುವ ಯೂನಿವರ್ಸಿಟಿ ಹಾಸ್ಪಿಟಲ್​ನ ಹಾರ್ಟ್​ ಸೆಂಟರ್​ ನಿರ್ದೇಶಕರಾದ ಡಾ. ಫ್ರಾಂಕ್​ ರುಸ್ಚಿಟ್ಜ್ಕಾಅವರು ಈ ಬಗ್ಗೆ ರಾಷ್ಟ್ರೀಯ ಮಾಧ್ಯಮವೊಂದರ ಜತೆ ಮಾತನಾಡಿದ್ದಾರೆ. ಕ್ಲೋರೊಕ್ವಿನ್ ಅಥವಾ ಹೈಡ್ರಾಕ್ಸಿಕ್ಲೋರೋಕ್ವಿನ್​​ ನಿಂದ ಕೊವಿಡ್​-19 ರೋಗಿಗಳಿಗೆ ಯಾವುದೇ ಪ್ರಯೋಜನವೂ ಇಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಮಹಾಮಾರಿ ಕರೊನಾ ವ್ಯಾಪಕತೆಗೆ ನಲುಗಿದ ಸ್ಪೇನ್
ನಾವು ಆಳವಾಗಿ ಅಧ್ಯಯನ ಮಾಡಿದ್ದೇವೆ. ಮಲೇರಿಯಾಕ್ಕೆ ಚಿಕಿತ್ಸೆ ನೀಡಲು ಬಳಸುವ ಕ್ಲೋರೊಕ್ವಿನ್ ಅಥವಾ ಹೈಡ್ರಾಕ್ಸಿಕ್ಲೋರೋಕ್ವಿನ್​​ನಿಂದ ಕೊವಿಡ್​-19 ರೋಗಿಗಳಿಗೆ ತೊಂದರೆಯಾಗುತ್ತಿದೆ. ಆದರೆ ಈಗ ಎಲ್ಲ ಕಡೆ ಇದೇ ಮಾತ್ರೆಯನ್ನು ಕೊಟ್ಟು ಚಿಕಿತ್ಸೆ ನೀಡುತ್ತಿರುವ ಬಗ್ಗೆ ಆತಂಕ ಉಂಟಾಗುತ್ತಿದೆ. ನಾವು ಪ್ರಪಂಚದಾದ್ಯಂತ ಹಲವು ರೋಗಿಗಳನ್ನು ಅಧ್ಯಯನಕ್ಕೆ ಬಳಸಿಕೊಂಡಿದ್ದೇವೆ. ಹಾಗಾಗಿ ಭಾರತದಲ್ಲಿ ಮತ್ತೆ ರೋಗಿಗಳಿಗೆ ಏನೂ ತೊಂದರೆಯಾಗುವುದಿಲ್ಲ ಎಂದು ಊಹಿಸುವುದು ಬೇಡ ಎಂದಿದ್ದಾರೆ.
ಈ ಮಧ್ಯೆ ಭಾರತದಲ್ಲಿ ಕೊವಿಡ್​-19 ಪ್ರಸರಣ ತಡೆಗಟ್ಟಲು ಕರೊನಾ ಚಿಕಿತ್ಸೆ ನೀಡುತ್ತಿರುವ, ಸೋಂಕಿತರನ್ನು ಆರೈಕೆ ಮಾಡುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಸೋಂಕಿನ ಲಕ್ಷಣಗಳು ಕಾಣದೆ ಇದ್ದರೂ ತೆಗೆದುಕೊಳ್ಳಲು ಅನುಮತಿ ನೀಡಬೇಕು. ಹಾಗೇ ಕಂಟೇನ್​ಮೆಂಟ್​ ವಲಯಗಳಲ್ಲಿ ನಿಯೋಜಿತರಾದ ಪೊಲೀಸ್​, ಪ್ಯಾರಾಮಿಲಿಟರಿ ಸಿಬ್ಬಂದಿಗೂ ಎಚ್​ಸಿಕ್ಯೂ ಬಳಕೆ ಮಾಡಲು ತಿಳಿಸಬೇಕು ಎಂದು ಜಂಟಿ ಮಾನಿಟರಿಂಗ್ ಗ್ರೂಪ್ ಮತ್ತು ರಾಷ್ಟ್ರೀಯ ಕಾರ್ಯಪಡೆ ಶಿಫಾರಸ್ಸು ಮಾಡಿದೆ. (ಏಜೆನ್ಸೀಸ್​)
ಇದನ್ನೂ ಓದಿ:67 ಸ್ಯಾಂಪಲ್ಸ್ ಪರೀಕ್ಷೆಗೆ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen − nine =
Remember me
