ನವದೆಹಲಿ: ಕರೊನಾ ರೋಗಿಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ (ಎಚ್‌ಸಿಕ್ಯೂ) ಚಿಕಿತ್ಸೆಯ ಕ್ಲಿನಿಕಲ್ ಪ್ರಯೋಗಕ್ಕೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತಾತ್ಕಾಲಿಕ ತಡೆ ನೀಡಿದ್ದರೂ ಭಾರತದಲ್ಲಿ ಅದರ ಬಳಕೆ ಮುಂದುವರಿಯಲಿದೆ.
ಕರೊನಾಕ್ಕೆ ಎಚ್‌ಸಿಕ್ಯೂ ಔಷಧ ಬಳಕೆಯಿಂದ ಸಾವುಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಬಗ್ಗೆ ಲ್ಯಾನ್ಸೆಟ್ ನಿಯತಕಾಲಿಕದಲ್ಲಿ ಪ್ರಕಟವಾದ ಅಧ್ಯಯನ ವರದಿಯಿಂದ ಎಚ್ಚೆತ್ತ ವಿಶ್ವ ಆರೋಗ್ಯ ಸಂಸ್ಥೆ ಸೋಮವಾರ ಕರೊನಾ ಚಿಕಿತ್ಸೆಗೆ ಈ ಔಷಧದ ಬಳಕೆಯನ್ನು ತಾತ್ಕಾಲಿಕವಾಗಿ ನಿಷೇಧಿಸಿತ್ತು.
ಇದನ್ನೂ ಓದಿಕರೊನಾ ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೊಕ್ವಿನ್ ಬಳಕೆ ಸ್ಥಗಿತಕ್ಕೆ ಡಬ್ಲುೃಎಚ್‌ಒ ಆದೇಶ
ಮಂಗಳವಾರ ಈ ಕುರಿತು ಮಾತನಾಡಿದ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಮಹಾನಿರ್ದೇಶಕ ಡಾ. ಬಲರಾಮ್ ಭಾರ್ಗವ್, ‘‘ಎಚ್‌ಸಿಕ್ಯೂನಿಂದ ಯಾವುದೇ ಪ್ರಮುಖ ಅಡ್ಡಪರಿಣಾಮಗಳಿಲ್ಲ. ಮಲೇರಿಯಾಗೆ ಚಿಕಿತ್ಸೆ ನೀಡಲು ಬಳಸುವ ಔಷಧದ ಗುಣಲಕ್ಷಣಗಳು ಮತ್ತು ಸುರಕ್ಷತೆಯನ್ನು ಪರಿಗಣಿಸಿಯೇ ಕರೊನಾ ತಡೆಗಟ್ಟಲು ಇದನ್ನು ಪ್ರಾಯೋಗಿಕ ಚಿಕಿತ್ಸೆಯಾಗಿ ಬಳಸಲು ಶಿಾರಸು ಮಾಡಿದ್ದೇವೆ’’ ಎಂದರು.
‘‘ಈ ಬಗೆಗಿನ 6 ವಾರಗಳ ಅಧ್ಯಯನದ ಪ್ರಕಾರ, ಎಚ್‌ಸಿಕ್ಯೂ ಚಿಕಿತ್ಸೆ ಪಡೆದವರಲ್ಲಿ ವಾಕರಿಕೆ, ವಾಂತಿಯಂತಹ ಲಕ್ಷಣಗಳು ಬಿಟ್ಟರೆ ಯಾವುದೇ ಪ್ರಮುಖ ಅಡ್ಡಪರಿಣಾಮಗಳು ಕಂಡುಬಂದಿಲ್ಲ’’ ಎಂದು ಹೇಳಿದರು.
‘ಲಾಕ್​ಡೌನ್​ ಫೇಲ್​…ಮುಂದೇನು? ಏನಾಯಿತು ಮೋದಿಯವರ ನಿರೀಕ್ಷೆ?’: ರಾಹುಲ್​ ಗಾಂಧಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:16 + fourteen =
Remember me
