ನವದೆಹಲಿ:ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ವಿಡಿಯೋ ವೈರಲ್​ ಆಗುತ್ತಲೇ ಇರುತ್ತದೆ. ಅದರಲ್ಲೂ ಹಾವಿನ ವಿಡಿಯೋಗಳು ಅಂದರೆ ನೋಡುಗರನ್ನು ಬಹುಬೇಗ ಸೆಳೆದುಬಿಡುತ್ತವೆ ಮತ್ತು ಕ್ಷಣಾರ್ಧದಲ್ಲಿ ಸಾವಿರಾರು ವೀಕ್ಷಣೆಗಳನ್ನು ಪಡೆದುಕೊಳ್ಳುತ್ತವೆ. ಇದೀಗ ಅಂಥದ್ದೇ ವಿಡಿಯೋವೊಂದು ವೈರಲ್​ ಆಗಿದೆ.
ಹಾವು ಎಂದಾಕ್ಷಣ ಮಾರುದ್ದ ಓಡುತ್ತೇವೆ. ಈ ಪದ ಕೇಳಿದರೆ ಸಾಕು ಎಲ್ಲಿಲ್ಲದ ಭಯ. ಆದರೆ ಇಲ್ಲೊಬ್ಬ ವ್ಯಕ್ತಿ ಮಾತ್ರ ಹಾವಿಗೆ ಸ್ನಾನ ಮಾಡಿಸುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಹಾವಿಗೆ ಸ್ನಾನ ಮಾಡಿಸೋದು ಅಂದ್ರೆ ಸುಮ್ನೇನಾ? ಇದನ್ನು ನಂಬೋಕೆ ಸಾಧ್ಯಾನಾ? ಎಂಬ ಪ್ರಶ್ನೆಗಳು ನಿಮ್ಮಲ್ಲಿ ಮೂಡಬಹುದು. ಆದರೆ, ಈ ವಿಡಿಯೋ ನೋಡಿದರೆ ನಿಮ್ಮ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.
ವೈರಲ್​ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಸ್ನಾನದ ಕೋಣೆಯಲ್ಲಿ ಜಗತ್ತಿನ ಅತ್ಯಂತ ಅಪಾಯಕಾರಿ ಹಾವುಗಳಲ್ಲಿ ಒಂದಾದ ಕಾಳಿಂಗ ಸರ್ಪಕ್ಕೆ ಸ್ನಾನ ಮಾಡಿಸಿದ್ದಾನೆ. ಅದೂ ಕೂಡ ಸೋಪು ಹಾಕಿ. ಜಗ್​ ತೆಗೆದುಕೊಂಡು ಸಾಕಷ್ಟು ಬಾರಿ ಹಾವಿನ ಮೇಲೆ ನೀರು ಸುರಿಯುತ್ತಾನೆ. ಇದರಿಂದ ಹಾವಿಗೆ ಏನಾಯಿತೋ ಏನೋ? ಒಂದು ಬಾರಿ ಜಗ್​ ಅನ್ನೇ ಬಾಯಿಯಿಂದ ಕಚ್ಚಿಕೊಳ್ಳುತ್ತದೆ. ಬಳಿಕ ಹಾವಿನಿಂದ ಜಗ್​ ಬಿಡಿಸಿಕೊಳ್ಳುವ ವ್ಯಕ್ತಿ ಮತ್ತೆ ನೀರು ಹಾಕಿ ಸ್ನಾನ ಮಾಡಿಸುತ್ತಾನೆ. ಈ ವೇಳೆ ಒಮ್ಮೆಯು ಸ್ನಾನ ಮಾಡಿಸುವ ವ್ಯಕ್ತಿಯ ಮೇಲೆ ಹಾವು ದಾಳಿ ಮಾಡುವುದೇ ಇಲ್ಲ!
ಇನ್ನು ಈ ವಿಡಿಯೋವನ್ನು sakhtlogg ಹೆಸರಿನ ಇನ್​​ಸ್ಟಾಗ್ರಾಂನಲ್ಲಿ ಅಪ್​ಲೋಡ್​ ಮಾಡಲಾಗಿದ್ದು, ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಸಾವಿರಾರು ಲೈಕ್ಸ್​ ಮತ್ತು ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಿಡಿಯೋಗೆ ಮಹಿಳೆಯರು ಪುರುಷರಿಗಿಂತ ಹೆಚ್ಚು ಕಾಲ ಯಾಕೆ ಬದುಕುತ್ತಾರೆ ಎಂಬುದಕ್ಕೆ ಇದೇ ಕಾರಣ ಎಂದು ವಿಡಿಯೋಗೆ ಅಡಿಬರಹ ನೀಡಲಾಗಿದೆ. ಅದದರ್ಥ ಪುರುಷರು ಅಪಾಯಕಾರಿ ಸಾಹಸಗಳನ್ನು ಮಾಡುವುದರಿಂದ ಅವರು ಹೆಚ್ಚು ಕಾಲ ಬದುಕುಳಿಯುದಿಲ್ಲ ಎಂದು.

A post shared by SAKHT LOGG 🔥 (@sakhtlogg)

ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸುವುದನ್ನು ಮರೆಯಬೇಡಿ.(ಏಜೆನ್ಸೀಸ್​)
ಶಾಸಕ ಎಸ್.ಆರ್.ವಿಶ್ವನಾಥ್ ವಿಚಾರಕ್ಕೆ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತೆಯರ ನಡುವೆ ಜಡೆ ಜಗಳ!

ಬಾಲ್ಯಕ್ಕೆ ಸ್ಮಾರ್ಟ್​ಫೋನ್ ಕೊಳ್ಳಿ: ವಿಡಿಯೋ, ಗೇಮಿಂಗ್, ಸೋಷಿಯಲ್ ಮೀಡಿಯಾ ವ್ಯಸನ; ಶೇ.47 ಮಕ್ಕಳಲ್ಲಿ ಗೀಳು

ಇಂಧನ ಭದ್ರತೆಗೆ ಉತ್ಪಾದನೆ ಹೆಚ್ಚಳ ಅವಶ್ಯ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆ; ವಾಣಿಜ್ಯ ಕಲ್ಲಿದ್ದಲು ಗಣಿ ಹೂಡಿಕೆದಾರರ ಸಮಾವೇಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 14 =
Remember me
