ನವದೆಹಲಿ:ಅವನಿಗಿದ್ದದ್ದು ಆಕೆಯೊಬ್ಬಳೇ ತಂಗಿ. ತನ್ನ ಜತೆಗಿದ್ದವನೇ ಇಂಥದ್ದೊಂದು ಕೃತ್ಯ ಎಸಗುತ್ತಾನೆ ಎಂದು ಅವನಿಗೆ ತಿಳಿದಿರಲಿಲ್ಲ. ಆದರೆ, ಅವನ ವಿರುದ್ಧ ಸೇಡು ತೀರಿಸಿಕೊಳ್ಳಲು ವರ್ಷಗಟ್ಟಲೇ ಕಾದು ಅದರಲ್ಲಿ ಯಶಸ್ವಿಯಾದ.
ಎರಡು ದಿನಗಳ ಹಿಂದಷ್ಟೇ ತಿಹಾರ್​ ಜೈಲಿನಲ್ಲಿ ಕೈದಿಯೊಬ್ಬನ ಹತ್ಯೆ ನಡೆದಿತ್ತು. ಕೊಲೆಗೈದವನ ಹಾಗೂ ಜೈಲಿನಲ್ಲಿದ್ದವನ ಇತಿಹಾಸ ಕೆದಕಿದಾಗ ಇದೊಂದು ಪ್ರತೀಕಾರದ ಕ್ರಮವಾಗಿತ್ತು ಎಂಬುದು ಪೊಲೀಸರಿಗೆ ಗೊತ್ತಾಗಿದೆ.
ಇದನ್ನೂ ಓದಿ;ಬೆಳಗ್ಗೆ ಸೆಕ್ಷನ್​ 144, ರಾತ್ರಿ ಕರ್ಫ್ಯೂ; ಹೊರಗೆ ಬಂದ್ರೆ ಕರೊನಾನೂ ಬಿಡಲ್ಲ, ಪೊಲೀಸರು ಸುಮ್ಮನಿರಲ್ಲ
ಮೆಹ್ತಾಬ್​ (27) ಕೊಲೆಯಾದ ಕೈದಿ. ಈತನನ್ನು ಕೊಂದವನು ಜಾಕೀರ್​(21). 2014ರಲ್ಲಿ ಅಂಬೇಡ್ಕರ್​ನಗರದಲ್ಲಿ ಜಾಕೀರ್​ ತಂಗಿ ಮೇಲೆ ಮೆಹ್ತಾಬ್​ ಅತ್ಯಾಚಾರ ಎಸಗಿದ್ದ. ಇದೇ ನೋವಿನಲ್ಲಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಪ್ರಕರಣದಲ್ಲಿ ಮೆಹ್ತಾಬ್​ ಜೈಲು ಸೇರಿದ್ದ. ಈತನ ವಿರುದ್ಧ ಸೇಡು ತೀರಿಸಿಕೊಳ್ಳಬೇಕೆಂದು ಜಾಕೀರ್​ ಕಾಯುತ್ತಿದ್ದ.
2018ರಲ್ಲಿ ಜಾಕೀರ್​ ಕೊಲೆ ಮಾಡಿ ಜೈಲು ಸೇರಿದ. ಆದರೆ, ಆತನ ವಯಸ್ಸು 20ಕ್ಕಿಂತ ಕಡಿಮೆಯಾಗಿದ್ದರಿಂದ ಬೇರೆ ವಿಭಾಗದಲ್ಲಿ ಇಡಲಾಗಿತ್ತು. ಇತ್ತೀಚೆಗಷ್ಟೇ ಆತನಿಗೆ 21 ವರ್ಷ ತುಂಬಿದ್ದರಿಂದ ಸಾಮಾನ್ಯ ಕೈದಿಗಳಿರುವ ಜಾಗಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ, ಮೆಹ್ತಾಬ್​ ಅಲ್ಲಿರಲಿಲ್ಲ. ಹೀಗಾಗಿ ತನ್ನ ಜತೆಗಿದ್ದವರೊಂದಿಗೆ ಜಗಳ ಮಾಡಿಕೊಂಡ ಜಾಕೀರ್​ ಮತ್ತೊಂದು ಕಡೆ ಸ್ಥಳಾಂತರಿಸುವಂತೆ ಕೇಳಿಕೊಂಡಿದ್ದ. ಮೆಹ್ತಾಬ್​ ಇರುವ ಜಾಗಕ್ಕೆ ಬಂದಿದ್ದ.
ಇದನ್ನೂ ಓದಿ;ಒಂದೂವರೆ ದಿನದಲ್ಲಿ ಒಂದೂವರೆ ಕೋಟಿ ಜನರು ಫಿದಾ ಆದ್ರು; ಜಗದಗಲ ಬೆಳಗಿದ ಬೆಂಗಳೂರಿನ ಕೀರ್ತಿ
ಕೆಲ ದಿನಗಳಿಂದ ಮೆಹ್ತಾಬ್​ನ ಚಲನವಲನಗಳನ್ನು ಗಮನಿಸಿದ್ದ. ಜುಲೈ 29ರಂದು ಬೆಳಗ್ಗೆ ಎಲ್ಲರನ್ನೂ ಸಾಮೂಹಿಕ ಪ್ರಾರ್ಥನೆಗೆ ಕರೆದಾಗ ಆ ಸಮಯಕ್ಕಾಗಿಯೇ ಕಾದು ಕುಳಿತಿದ್ದ. ಆತನ ಜತೆಗಿದ್ದರು ಹೊರ ಹೋದ ಬಳಿಕ ಒಂಟಿಯಾಗಿದ್ದ ಮೆಹ್ತಾಬ್​ ಬ್ಯಾರಕ್​ಗೆ ನುಗ್ಗಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ತಂಗಿ ಸಾವಿನ ವಿರುದ್ಧ ಸೇಡು ತೀರಿಸಕೊಳ್ಳಲೆಂದೇ ಕೊಲೆ ಮಾಡಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ.
ಅಮೆಜಾನ್​ ಹಿಂದಿಕ್ಕಿ ಬಿಗ್​ ಬಜಾರ್​ ತೆಕ್ಕೆಗೆ ಪಡೆದ ಅಂಬಾನಿ…?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 15 =
Remember me
