ಭೋಪಾಲ್​:ತಿಂದಿರುವ ಊಟ ಹೊಟ್ಟೆಯಲ್ಲಿ ಅರಗಿದ ಮೇಲೆ ಏನಾಗಬೇಕು? ಶೌಚವಾಗಿ ದೇಹದಿಂದ ಹೊರಹೋಗಲೇ ಬೇಕು. ಹಾಗೊಂದು ವೇಳೆ ಹೋಗದಿದ್ದರೆ ಮನುಷ್ಯ ಅನಾರೋಗ್ಯಕ್ಕೆ ತುತ್ತಾಗಿಬಿಡುತ್ತಾನೆ. ಆದರೆ ಇಲ್ಲೊಬ್ಬ ಹುಡುಗ ಬರೋಬ್ಬರಿ 18 ತಿಂಗಳಿನಿಂದ ಶೌಚಕ್ಕೆ ಹೋಗೇ ಇಲ್ಲವಂತೆ. ಏನಿರಬಹುದು ಇದರ ರಹಸ್ಯವೆಂದು ತಿಳಿಯಲು ಮುಂದೆ ಓದಿ.
ಇದನ್ನೂ ಓದಿ:ಚುನಾವಣಾ ಪ್ರಚಾರ ಸಭೆಯಲ್ಲೇ ಬಂಧನಕ್ಕೊಳಗಾದ ನಾಯಕ; ಕಾರಣವೇನು ಗೊತ್ತಾ?
ಮಧ್ಯಪ್ರದೇಶದ ಮೊರನಾ ಜಿಲ್ಲೆಯ ಸಣ್ಣ ಹಳ್ಳಿಯಲ್ಲಿನ ಬಡ ಕುಟುಂಬದಲ್ಲಿ ಜನಿಸಿರುವ ಅನೀಶ್​ ಛಾಂಡಿಲ್​ ಈ ವಿಸ್ಮಯಕಾರಿ ಬಾಲಕ. ಈತನಿಗೀಗ 16 ವರ್ಷ ವಯಸ್ಸು. ಪ್ರತಿ ದಿನ 18ರಿಂದ 20 ರೊಟ್ಟಿ ತಿನ್ನುತ್ತಾನಂತೆ. ಆದರೆ ಕಳೆದ 18 ತಿಂಗಳಿನಿಂದ ಈತ ಶೌಚಕ್ಕೆ ಹೋಗೇ ಇಲ್ಲ. ಹಾಗಿದ್ದರೂ ಈತನಿಗೆ ಏನೂ ಸಮಸ್ಯೆಯಾಗಿಲ್ಲವಂತೆ. 18 ತಿಂಗಳ ಮೊದಲು ಯಾವ ರೀತಿಯಲ್ಲಿದ್ದನೋ ಈಗಲೂ ಕೂಡ ಅದೇ ರೀತಿಯಲ್ಲಿದ್ದಾನಂತೆ.
ಇದೊಂದು ವಿಚಿತ್ರ ಕಾಯಿಲೆ ಎನ್ನುತ್ತಾರೆ ವೈದ್ಯಕೀಯ ವಲಯದವರು. ಆದರೆ ಈ ಕಾಯಿಲೆ ಹೆಸರೇನು? ಗುಣ ಪಡಿಸುವುದೇಗೆ ಎನ್ನುವುದಕ್ಕೆ ಯಾರ ಬಳಿಯೂ ಉತ್ತರವಿಲ್ಲ. ಹತ್ತಾರು ವೈದ್ಯರಿಗೆ ತೋರಿಸಿದರೂ ಯಾರೊಬ್ಬರೂ ಅನೀಶ್​ಗೆ ಚಿಕಿತ್ಸೆ ಕೊಡಲು ಸಾಧ್ಯವಾಗಿಲ್ಲವಂತೆ. ಇದರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಬೇಕಿದೆ ಎನ್ನುತ್ತಾರೆ ಹಲವರು.
ಇದನ್ನೂ ಓದಿ:ಮಮತಾ ಬ್ಯಾನರ್ಜಿಯವರನ್ನು ರಾಜಕೀಯವಾಗಿ ಮುಗಿಸಿಬಿಡುತ್ತೇವೆ ಎಂದ ಪ್ರಹ್ಲಾದ್​ ಜೋಶಿ
ಶೌಚಕ್ಕೇ ಹೋಗದ ಬಾಲಕ ಪ್ರತಿ ದಿನ ಊಟ ಮಾಡುವ ಆಹಾರ ಎಲ್ಲಿಗೆ ಹೋಗುತ್ತದೆ? ಏನಾಗುತ್ತದೆ ಎನ್ನುವುದು ಇಂದಿಗೂ ತಿಳಿಯದ ವಿಚಾರ. (ಏಜೆನ್ಸೀಸ್)
https://www.vijayavani.net/affair-with-a-bodyguard-for-a-princess-rs-12-crore-was-given-to-cover-the-matter/
ಬಿಜೆಪಿ & ಆರ್​ಎಸ್​ಎಸ್​ಗೆ ಸಂವಿಧಾನ ಪಾಠ ಮಾಡುತ್ತಾರಂತೆ ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − three =
Remember me
