ಅಹಮದಾಬಾದ್:ವರದಕ್ಷಿಣೆ ಹಾಗೂ ಇತರ ಕಿರುಕುಳ ಎದುರಿಸುತ್ತಿರುವ ಮಹಿಳೆಯೋರ್ವಳು ತನ್ನ ಗಂಡ ಹಾಗೂ ಮನೆಯವರ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾಳೆ.ಅನುಪಮಾ (ಹೆಸರು ಬದಲಾಯಿಸಲಾಗಿದೆ) ಮತ್ತು ಪಾರ್ಥ (ಹೆಸರು ಬದಲಾಯಿಸಲಾಗಿದೆ) 2002 ರಲ್ಲಿ ಮದುವೆಯಾದರು. ಆಕೆಯ ಕುಟುಂಬದವರು ಪಾರ್ಥನಿಗೆ ವರದಕ್ಷಿಣೆ ರೂಪದಲ್ಲಿ 50 ತೊಲೆ ಚಿನ್ನವನ್ನು ನೀಡಿದರು.ಪಾರ್ಥ ಎಂಬಿಎ ಪದವೀಧರ ಮತ್ತು ಸ್ವಂತ ಜವಳಿ ಉದ್ಯಮ ಹೊಂದಿರುವುದಾಗಿ ಆತನ ಕುಟುಂಬದವರು ತಿಳಿಸಿದ್ದರು. ಮದುವೆ ಬಳಿಕ ಆತನ ಕುಟುಂಬದವರು ಕಾರು ಮತ್ತು ಹೆಚ್ಚಿನ ವರದಕ್ಷಿಣೆ ತರಲು ಒತ್ತಾಯಿಸಲಾರಂಭಿಸಿದರು. ನಂತರ, ಪಾರ್ಥ ತನ್ನ ವರದಕ್ಷಿಣೆ ಬೇಡಿಕೆ ಈಡೇರಿಸಲು ತನ್ನ ಕುಟುಂಬವನ್ನು ಕೇಳಲು ನಿರಾಕರಿಸಿದಾಗ ಆಕೆಗೆ ಮನಬಂದಂತೆ ಥಳಿಸಿದ್ದಾನೆ. ಮುಂದೊಂದು ದಿನ ಪಾರ್ಥ ಎಂಬಿಎ ಪದವೀಧರನಲ್ಲ ಎಂದು ಆಕೆಗೆ ಗೊತ್ತಾಗಿದೆ.
ಇದನ್ನೂ ಓದಿ:ವೈರಲ್​ ಆಯ್ತು ಕಸದ ವಾಹನದಲ್ಲಿ ಕೊವಿಡ್​-19 ಸೋಂಕಿತರನ್ನು ಕರೆದುಕೊಂಡು ಹೋಗುತ್ತಿರುವ ದೃಶ್ಯ…!
ತನ್ನ ಗಂಡನ ವ್ಯವಹಾರ ನಡೆಯದ ಕಾರಣ ಆಕೆ ಸಾಲ ಪಡೆದು ಟ್ರಾವೆಲ್ ಏಜೆನ್ಸಿಯನ್ನು ಪ್ರಾರಂಭಿಸಿದ್ದಾಳೆ. ಅದೇ ಸಮಯದಲ್ಲಿ ಆತ ಕುಡಿತ ಮತ್ತು ಜೂಜಾಟ ಚಟಕ್ಕೆ ಬಿದ್ದಿದ್ದಾನೆ. ತನ್ನ ಸ್ನೇಹಿತರ ಹೆಂಡತಿಯರೊಂದಿಗೆ ಚಕ್ಕಂದವಾಡಲು ಸೂಕ್ತ ಮಾರ್ಗ ಕಲ್ಪಿಸಿಕೊಳ್ಳುವ ಸಲುವಾಗಿ ಆತ ತನ್ನ ಹೆಂಡತಿಗೆ ತನ್ನ ಸ್ನೇಹಿತರೊಂದಿಗೆ ಚೆಕ್ಕಂದವಾಡಲು ಒತ್ತಾಯಿಸಿದ್ದ. 2019ರಲ್ಲಿ ಆತ ಅಮೆರಿಕಕ್ಕೆ ತೆರಳಿದ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ.ದೇಶವ್ಯಾಪಿ ಲಾಕ್​ಡೌನ್ ಜಾರಿಯಾದ ನಂತರ ಆಕೆಯ ಟ್ರಾವೆಲ್ ವ್ಯವಹಾರ ಕುಸಿದಾಗ ತನ್ನ ಆಭರಣ ಮರಳಿಕೊಡುವಂತೆ ಗಂಡನ ಮನೆಯವರಿಗೆ ಕೇಳಿದ್ದಾಳೆ. ಆದರೆ ಅವರು ಕೊಡಲು ನಿರಾಕರಿಸಿದರಲ್ಲದೆ ಮನೆಯಿಂದ ಹೊರಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಆಕೆ ಪೊಲೀಸರಿಗೆ ಗಂಡ ಹಾಗೂ ಮನೆಯವರ ವಿರುದ್ಧ ದೂರು ದಾಖಲಿಸಿದ್ದಾಳೆ. ‘
ಮನೆಮನೆಗಳಲ್ಲಿ ದೀಪ ಬೆಳಗಿ, ದೇಗುಲಗಳನ್ನು ಅಲಂಕರಿಸಿ; ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಕರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − ten =
Remember me
