ಬೆಂಗಳೂರು:‘ಸಿ.ಟಿ. ರವಿ ಅಲ್ಲ, ಲೂಟಿ ರವಿ’; ‘ಡಿ.ಕೆ. ಶಿವಕುಮಾರ್ ಅಲ್ಲ ಕೆ.ಡಿ. ಶಿವಕುಮಾರ್’ ಎಂದು ಸಿ.ಟಿ. ರವಿ ಹಾಗೂ ಡಿ.ಕೆ. ಶಿವಕುಮಾರ್​ ಅವರು ರಾಜ್ಯದಲ್ಲಿ ಪರಸ್ಪರ ಆರೋಪ ಪ್ರತ್ಯಾಪರೋಪಗಳನ್ನು ಮಾಡಿಕೊಂಡ ಬೆನ್ನಿಗೆ ಕೇಂದ್ರದಲ್ಲಿ ಚಿದಂಬರಂ ಹೆಸರು ಕೂಡ ಈಗ ವಿನಾಶಕಾರಿಯಾಗಿ ಪರಿಣಮಿಸಿದೆ. ಅರ್ಥಾತ್, ಚಿದಂಬರಂ ಅವರನ್ನು ಡಿಸಾಸ್ಟ್ರಂ ಎಂಬುದಾಗಿ ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ ಜೋಶಿ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿನಾಶಕಾರಿ, ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಚುನಾವಣೆಗೆ ಹೆದರುತ್ತಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್​ ನಾಯಕ ಪಿ. ಚಿದಂಬರಂ ಮಾಡಿರುವ ಟೀಕೆ ಹಿನ್ನೆಲೆಯಲ್ಲಿ ಪ್ರಲ್ಹಾದ ಜೋಶಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ:ಅಂದು ಪೌರುಷ ಮೆರೆದಿದ್ದವರು ಇಂದು ಪರಾರಿ: ಯುವಕನ ಜತೆ ಕಂಬಕ್ಕೆ ಕಟ್ಟಿ ಥಳಿಸಿದ ಗಂಡ-ಮೈದುನನ ವಿರುದ್ಧ ಯುವತಿಯ ದೂರು
ಕಾಂಗ್ರೆಸ್ ಬೆಂಬಲಕ್ಕೆ ಡಿಎಂಕೆ ನಿಂತಾಗ ಚಿದಂಬರಂ ಸಂಸದರಾದರು. ಅವರು ಸ್ವಂತ ಶಕ್ತಿಯಿಂದಷ್ಟೇ ಸ್ಪರ್ಧಿಸಿದರೆ ಗ್ರಾಮ ಪಂಚಾಯತ್ ಚುನಾವಣೆಯಲ್ಲೂ ಸೋಲು ಕಾಣುತ್ತಾರೆ. ಅವರು ಒಂದೇ ಒಂದು ಚುನಾವಣೆಯನ್ನು ಸ್ವಂತ ಶಕ್ತಿಯಿಂದ ಗೆಲ್ಲಲಾರರು, ಅವರೇ ಖುದ್ದು ವಿನಾಶಕಾರಿ ಎಂದು ಜೋಶಿ ಹೇಳಿದ್ದಾರೆ.
ಇದನ್ನೂ ಓದಿ:ಅಂದು ನಿಧಿ ಸುಬ್ಬಯ್ಯ, ಇಂದು ಆವಂತಿಕಾ ಶೆಟ್ಟಿ; ಇಬ್ಬರದ್ದೂ ಬಹುತೇಕ ಒಂದೇ ಥರ ಬೇಸರ!
ಚಿದಂಬರಂ ಅವರು ತಾವು ವಿತ್ತ ಸಚಿವ ಹಾಗೂ ಗೃಹ ಸಚಿವರಾಗಿದ್ದಾಗಲೇ ನಮ್ಮ ದೇಶದ ಆರ್ಥಿಕ ಹಾಗೂ ರಕ್ಷಣಾ ವ್ಯವಸ್ಥೆಗೆ ವಿಪತ್ತು ಉಂಟು ಮಾಡಿದ್ದರು. ಅವರು ಚಿದಂಬರಂ ಅಲ್ಲ ಡಿಸಾಸ್ಟ್ರಂ ಎಂಬುದಾಗಿ ಪ್ರಲ್ಹಾದ ಜೋಶಿ ಮಾತಲ್ಲೇ ಎದಿರೇಟು ನೀಡಿದ್ದಾರೆ.
ಸರ್ಕಲ್​ವೊಂದಕ್ಕೆ ಸಿಡಿಸಿ ಬಿಪಿನ್​ ರಾವತ್ ಹೆಸರಿಡಲು ವಿರೋಧ; ನಾವು ಈಗಾಗಲೇ ಇಸ್ಲಾಂಪುರ ಎಂದಿಟ್ಟಿದ್ದೇವೆ ಎಂದು ತಗಾದೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + ten =
Remember me
