ನವದೆಹಲಿ:ಪಾರ್ಟಿ ಮಾಡಿದ ನಂತರ ಬಿಲ್ ಪಾವತಿಸುವ ಸಲುವಾಗಿ ನಡುವೆ ವಾಗ್ವಾದದಲ್ಲಿ ಅಪ್ರಾಪ್ತ ವಯಸ್ಕನೊಬ್ಬ ಮಂಗಳವಾರ ತನ್ನ ಸ್ನೇಹಿತನನ್ನೇ ಕೊಲೆಗೈದಿದ್ದಾನೆ.ಸೋಮವಾರ ರಾತ್ರಿ ಇಬ್ಬರು ಹುಡುಗರು ಮತ್ತೊಬ್ಬ ಸ್ನೇಹಿತನೊಡನೆ ಸೇರಿ ಜಹಾಂಗೀರ್‌ಪುರಿಯಲ್ಲಿ ಗೆಟ್ ಟುಗೆದರ್ ಪಾರ್ಟಿ ಮಾಡುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಪಾರ್ಟಿ ಬಿಲ್ ಸಂದಾಯ ಮಾಡುವ ಸಲುವಾಗಿ ಕೊಲೆಗೀಡಾದ ಸಂತ್ರಸ್ತ ಮತ್ತು ಶಂಕಿತನ ನಡುವೆ ಜಗಳ ನಡೆದಿದೆ ಎಂದು ಘಟನೆಗೆ ಸಾಕ್ಷಿಯಾಗಿದ್ದ ಅವರ ಸ್ನೇಹಿತ ಪೊಲೀಸರಿಗೆ ತಿಳಿಸಿದ್ದಾನೆ.
ಇದನ್ನೂ ಓದಿ:ಬೆಂಗಳೂರು : ಬಿಇ ಪದವೀಧರರಿಗೆ ಜಿಟಿಟಿಸಿಯಲ್ಲಿ ಪ್ರಾಂಶುಪಾಲರಾಗುವ ಅವಕಾಶ
ವಾಗ್ವಾದ ನಡೆದು 17 ವರ್ಷದ ಹುಡುಗ ತನ್ನ ಸ್ನೇಹಿತನ ಮೇಲೆ ಒಂದು ಸುತ್ತಿನ ಗುಂಡು ಹಾರಿಸಿದ. ಗುಂಡು ಆತನ ಎದೆಗೆ ಬಡಿದು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಅಲ್ಲಿ ಆತ ಸಾವಿಗೀಡಾಗಿರುವುದು ತಿಳಿದುಬಂದಿತು. ಅವರಲ್ಲಿ ಯಾರೂ ಮಧ್ಯ ಸೇವಿಸಿರುವುದು ಕಂಡುಬಂದಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. ಬಾಲಾಪರಾಧಿಯನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋವಿಡ್ ಪರೀಕ್ಷೆಗೆಂದು ಬಂದರು.. ಲಕ್ಷಾಂತರ ರೂ.ನಗದು, ಆಭರಣ ದೋಚಿ ಪರಾರಿಯಾದರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
