ನವದೆಹಲಿ:ಪೊಲೀಸರೆಂದರೆ ಭಯ ಮತ್ತು ಗೌರವ ಎರಡೂ ಇರುತ್ತದೆ. ಏಕೆಂದರೆ, ನಾಗರಿಕರನ್ನು ರಕ್ಷಿಸಲು ಹಗಲಿರುಳು ಶ್ರಮಿಸುತ್ತಾರೆ. ಅಲ್ಲದೆ ಕೆಟ್ಟವರ ಪಾಲಿಗೆ ದುಸ್ವಪ್ನವಾಗಿ ಕಾಡುತ್ತಾರೆ. ಪ್ರಾಮಾಣಿಕ ಪೊಲೀಸರ ಬಗ್ಗೆ ಮಾತ್ರ ಜನರಿಗೆ ಯಾವಾಗಲೂ ಗೌರವವಿದೆ. ಏಕೆಂದರೆ, ಭ್ರಷ್ಟ ಅಧಿಕಾರಿಗಳು ಕೂಡ ನಮ್ಮ ನಡುವೆ ಇದ್ದಾರೆ. ಸಿಗುವ ಸಂಬಳಕ್ಕೆ ಸರಿಯಾಗಿ ಕೆಲಸ ಮಾಡದೆ ಹಣಕ್ಕಾಗಿ ನೀಚ ಕೆಲಸ ಮಾಡಿ ಜೈಲಿಗೆ ಹೋಗಿರುವಂತಹ ಪೊಲೀಸರು ಸಹ ಇದ್ದಾರೆ.
ಒಂದಷ್ಟು ಪೊಲೀಸರು ಇರುತ್ತಾರೆ. ಅವರು ಇಡೀ ಪೊಲೀಸ್ ವ್ಯವಸ್ಥೆಗೆ ಕಳಂಕ ತರುವ ರೀತಿಯಲ್ಲಿ ವರ್ತಿಸುತ್ತಾರೆ. ಭ್ರಷ್ಟಾಚಾರ ಮಾಡುತ್ತಾರೆ, ಅಕ್ರಮ ಎಸಗುತ್ತಾರೆ, ಲಂಚ ಪಡೆದು ದೌರ್ಜನ್ಯ ಮಾಡುತ್ತಾರೆ. ಇತ್ತೀಚೆಗಷ್ಟೇ ಕಾನ್ಸ್​ಟೆಬಲ್​ ಒಬ್ಬರು ಪೊಲೀಸ್ ಠಾಣೆಯನ್ನು ಮಸಾಜ್ ಸೆಂಟರ್ ಆಗಿ ಪರಿವರ್ತಿಸಿದ್ದರು. ಅಲ್ಲದೆ, ಚಿಕ್ಕ ಮಕ್ಕಳಿಂದಲೇ ಮಸಾಜ್​ ಮಾಡಿಸಿಕೊಂಡಿದ್ದಾರೆ.
ಈ ಘಟನೆ ಉತ್ತರ ಪ್ರದೇಶದ ಮಿರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಭಾನು ಪ್ರತಾಪ್ ಸಿಂಗ್ ಹೆಸರಿನ ಹೆಡ್ ಕಾನ್‌ಸ್ಟೆಬಲ್, ಮೂವರು ಮಕ್ಕಳನ್ನು ನೇಮಿಸಿಕೊಂಡು, ಅವರಿಂದ ಪ್ರತಿದಿನ ಮಸಾಜ್ ಮಾಡಿಸಿಕೊಳ್ಳುತ್ತಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
#मिर्जापुरके इस हेड कांस्टेबल का नाम भानुप्रताप सिंह है
सिंह साहब मसाज के शौकीन है. थाने में इन सेवाओं के लिए तीन-तीन नाबालिगों को मसाज के लिए लगाया गया है
सिंह साहब की मूंछें यूपी के डीजीपी साहब जैसी है
(पहले वीडियो देखिए और फिर सिंह साहब का फोटो)pic.twitter.com/t3SpxNNNCb
— Narendra Pratap (@hindipatrakar)June 10, 2024

ಒಂದು ಮಗು ತಲೆಗೆ ಮಸಾಜ್ ಮಾಡುತ್ತಿದ್ದರೆ, ಇನ್ನೆರಡು ಮಕ್ಕಳು ಪಕ್ಕದಲ್ಲೇ ನಿಂತು ಕೈ ಒತ್ತುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಇತ್ತೀಚೆಗಷ್ಟೇ ವಿಡಿಯೋ ಹೊರಬಿದ್ದಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಕ್ಕಳನ್ನು ಇಂತಹ ಕೆಲಸಕ್ಕೆ ಬಳಸಿಕೊಳ್ಳುವುದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಡ್‌ ಕಾನ್ಸ್‌ಟೆಬಲ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಉನ್ನತಾಧಿಕಾರಿಗಳು ಏರಿಯಾ ಅಧಿಕಾರಿಗೆ ಸೂಚನೆ ನೀಡಿದ್ದಾರೆ.(ಏಜೆನ್ಸೀಸ್​)
ಅಂಬಾನಿ ಕುಟುಂಬ ಕುಡಿಯುವ ಈ ಹಾಲಿನ ವಿಶೇಷ ಕೇಳಿದ್ರೆ ಬೆರಗಾಗ್ತೀರಿ! ಇದರ ಬೆಲೆ ಕೂಡ ದುಬಾರಿ

ಸಂಪಾದಕೀಯ: ಹೇಡಿ ಕೃತ್ಯಕ್ಕೆ ತಕ್ಕ ಶಾಸ್ತಿ ಆಗಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − six =
Remember me
