ನವದೆಹಲಿ:ಯುವ ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವಿನಿಂದ ಬಾಲಿವುಡ್​ ಕಲಾವಿದರು ತೀವ್ರ ಶಾಕ್​ಗೆ ಒಳಗಾಗಿದ್ದಾರೆ.
ಸುಶಾಂತ್​ ಸಾವಿಗೆ ಸಹ ಕಲಾವಿದರು, ಅಭಿಮಾನಿಗಳು, ರಾಜಕೀಯ ಗಣ್ಯರು ಕಂಬನಿ ಮಿಡಿಯುತ್ತಿದ್ದಾರೆ. ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.
ಬಾಲಿವುಡ್​ ಸೆಲೆಬ್ರಿಟಿಗಳಾದ ಕರಣ್ ಜೋಹರ್​, ಏಕ್ತಾ ಕಪೂರ್​, ಅಜಯ್​ ದೇವಗನ್​, ಅಕ್ಷಯ್​ ಕುಮಾರ್​, ಲತಾ ಮಂಗೇಶ್ಕರ್​ ಸೇರಿ ಹಲವರು ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ನೋವು ಹೊರಹಾಕಿದ್ದಾರೆ. ಸುಶಾಂತ್​ ಕುಟುಂಬಕ್ಕೆ ನೋವು ಭರಿಸುವ ಶಕ್ತಿಯನ್ನು ದೇವರಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.ಇದನ್ನೂ ಓದಿ:ಖಿನ್ನತೆಗೆ ಬಲಿಯಾದರೆ ಸುಶಾಂತ್​? ಇವರ ಟ್ವಿಟರ್​ ಕವರ್​ ಪೇಜ್​ನ ವರ್ಣಚಿತ್ರಕಾರನೂ ಗುಂಡಿಕ್ಕಿಕೊಂಡು ಸತ್ತಿದ್ದ!
ಹಾಗೇ ಶಾರುಖ್​ ಖಾನ್ ಕೂಡ ಟ್ವಿಟರ್​ನಲ್ಲಿ ಸುಶಾಂತ್​ ಸಾವಿನಿಂದ ತಮಗಾದ ನೋವನ್ನು ತೋಡಿಕೊಂಡಿದ್ದಾರೆ.ಸುಶಾಂತ್​ ನನ್ನನ್ನು ತುಂಬ ಪ್ರೀತಿಸುತ್ತಿದ್ದರು. ನಾನು ಅವರನ್ನು ಮಿಸ್​ ಮಾಡಿಕೊಳ್ಳುತ್ತೇನೆ. ಅವರ ಬಲ, ಸಾಮರ್ಥ್ಯ, ಉತ್ಸಾಹ, ಅವರ ಮುಖದ ಮೇಲೆ ಸದಾ ಇರುತ್ತಿದ್ದ ನಗು…ಎಲ್ಲವನ್ನೂ ನಾನು ತುಂಬ ಮಿಸ್​ ಮಾಡಿಕೊಳ್ಳುತ್ತೇನೆ. ಅವನ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಅಲ್ಲಾನ ಬಳಿ ಪ್ರಾರ್ಥಿಸುತ್ತೇನೆ. ಹಾಗೇ ಅವರ ಕುಟುಂಬಕ್ಕೆ, ಸ್ನೇಹಿತರಿಗೆ, ಬಂಧುಗಳಿಗೆ ನೋವು ಭರಿಸುವ ಶಕ್ತಿಯನ್ನು ನೀಡಲಿ. ನನ್ನ ಪಾಲಿಗಂತೂ ಅತ್ಯಂತ ದುಃಖಕರ, ಶಾಕಿಂಗ್​ ವಿಷಯ ಇದು ಎಂದು ಶಾರುಖ್​ ಖಾನ್ ಟ್ವೀಟ್ ಮಾಡಿದ್ದಾರೆ.ಇದನ್ನೂ ಓದಿ:ಚಿರು ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ರಾಘವೇಂದ್ರ ರಾಜ​ಕುಮಾರ್​ ಕುಟುಂಬ
ನಾನು ಶಾರುಖ್​ ಖಾನ್ ಅವರ ದೊಡ್ಡ ಅಭಿಮಾನಿ ಎಂದು ಸುಶಾಂತ್ ಸಿಂಗ್​ ಸದಾ ಹೇಳುತ್ತಿದ್ದರು. ಶಾರುಖ್​ ನನಗೆ ಸ್ಫೂರ್ತಿ ಎನ್ನುತ್ತಿದ್ದರೂ. ಇವರಿಬ್ಬರಲ್ಲೂ ಸಾಮ್ಯತೆ ಕೂಡ ಇದೆ. ಶಾರುಖ್​ ಖಾನ್​ ಹಾಗೂ ಸುಶಾಂತ್ ಸಿಂಗ್​ ಇಬ್ಬರೂ ಬರಿಗೈಯಲ್ಲಿ ಮುಂಬೈಗೆ ಬಂದು ಯಶಸ್ಸು ಕಂಡವರು. ಯಾವುದೇ ಗಾಡ್​ಫಾದರ್​ ಇಲ್ಲದೆ ಚಿತ್ರರಂಗದಲ್ಲಿ ಬದುಕು ಕಟ್ಟಿಕೊಂಡವರು. ಹಾಗೇ ಇಬ್ಬರ ಸಿನಿ ಜರ್ನಿ ಶುರುವಾಗಿದ್ದೂ ಟಿವಿ ಶೋ ಮೂಲಕವೇ. (ಏಜೆನ್ಸೀಸ್​)
He loved me so much…I will miss him so much. His energy, enthusiasm and his full happy smile. May Allah bless his soul and my condolences to his near and dear ones. This is extremely sad….and so shocking!!pic.twitter.com/skIhYEQxeO
— Shah Rukh Khan (@iamsrk)June 14, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 14 =
Remember me
