ನವದೆಹಲಿ:ಟ್ವಿಟರ್​ ಬಳಕೆದಾರರೊಬ್ಬರು ಇತ್ತೀಚೆಗಷ್ಟೇ ತಮಗಾದ ವಿಚಿತ್ರ ಆನ್​ಲೈನ್​ ಶಾಪಿಂಗ್​ ಅನುಭವವನ್ನು ಟ್ವೀಟ್​ ಮೂಲಕ ಹಂಚಿಕೊಂಡಿದ್ದು, ಎಲ್ಲರನ್ನೂ ಚಕಿತಗೊಳಿಸಿದ್ದಾರೆ.
ಜೋಶ್​ ಸಾಫ್ಟ್​ವೇರ್​ನ ಸಹ ಸಂಸ್ಥಾಪಕ ಹಾಗೂ ನಿರ್ದೇಶಕರಾಗಿರುವ ಗೌತಮ್​ ರೇಜ್ ಇತ್ತೀಚೆಗಷ್ಟೇ ಅಮೇಜಾನ್​ ಆನ್​ಲೈನ್​ ಶಾಪಿಂಗ್​ನಲ್ಲಿ 300 ರೂ. ಬೆಲೆಯ ಸ್ಕಿನ್​ ಲೋಷನ್​ ಅನ್ನು ಆರ್ಡರ್​ ಮಾಡಿದ್ದರು. ಆದರೆ, ಅವರು ಪಡೆದಿದ್ದು 19 ಸಾವಿರ ರೂ. ಮೌಲ್ಯದ ಬೋಸ್​ ಕಂಪನಿಯ ಹೆಡ್​ಫೋನ್.​
ಈ ಬಗ್ಗೆ ತಿಳಿಯಲು ಹಾಗೂ ವಾಪಸ್​ ನೀಡಲು ರೇಜ್​ ಅವರು ಅಮೇಜಾನ್​ ಕಸ್ಟಮರ್​ ಕೇರ್​ ಸಂಪರ್ಕಿಸಿದಾಗ, ಐಟಮ್​ ಅನ್ನು ಮರುಪಡೆಯಲು ಸಾಧ್ಯವಿಲ್ಲ, ನೀವೆ ಇಟ್ಟುಕೊಳ್ಳಿ ಎಂದು ಹೇಳಿದ್ದಾರೆ. ಈ ವಿಚಾರವನ್ನು ರೇಜ್​ ಅವರು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದು ನೆಟ್ಟಿಗರು ಹುಬ್ಬೇರಿಸುವಂತೆ ಮಾಡಿದೆ.ಇದನ್ನೂ ಓದಿ:ಚಿರು ಮೇಲಿನ ಮೇಘನಾ ಪ್ರೀತಿ ಎಂಥದ್ದು ಎಂಬುದಕ್ಕೆ ಆ ಒಂದು ಇನ್​ಸ್ಟಾಗ್ರಾಂ ಪೋಸ್ಟ್​ನಲ್ಲಿದೆ ಉತ್ತರ
Bose wireless earbuds (₹19k) delivered instead of skin lotion (₹300).@amazonINsupport asked to keep it as order was non-returnable! 🤪🤦‍♂️🥳pic.twitter.com/nCMw9z80pW
— Gautam Rege (@gautamrege)June 10, 2020

ರೇಜ್​ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಟ್ವಿಟ್ಟಿಗರೊಬ್ಬರು ಸ್ಕಿನ್​ ಲೋಷನ್​​ ಇನ್ನು ಸ್ಟಾಕ್​ನಲ್ಲೇ ಉಳಿದಿದೆಯೇ? ನನಗೊಂದು ಲಿಂಕ್​ ಕಳುಹಿಸಿ ಎಂದು ಕೇಳಿದ್ದಾರೆ. ನಾನು ಸ್ಕಿನ್​ ಲೋಷನ್​​ ಪಡೆದಿದ್ದೇನೆ ಎಕ್ಸ್​ಚೇಂಜ್​ ಮಾಡಿಕೊಳ್ಳೋಣವಾ ಎಂದು ಮತ್ತೋರ್ವ ನೆಟ್ಟಿಗ ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಸದ್ಯ ರೇಜ್​ ಅವರ ಟ್ವೀಟ್​ ವೈರಲ್​ ಆಗಿದ್ದು, 6 ಸಾವಿರಕ್ಕೂ ಹೆಚ್ಚು ಲೈಕ್ಸ್​ ಹಾಗೂ 1500ಕ್ಕೂ ಹೆಚ್ಚು ರೀಟ್ವೀಟ್​ ಪಡೆದುಕೊಂಡಿದೆ. ಅನೇಕರು ಎಂಥಾ ಅದೃಷ್ಟ ಎಂದು ಹುಬ್ಬೇರಿಸಿದ್ದಾರೆ. ಮತ್ತೆ ಕೆಲವರು ಆರ್ಡರ್​ ಅದಲುಬದಲಾಗಿರಬಹುದು ಎಂದು ಕಮೆಂಟ್​ ಮಾಡಿದ್ದಾರೆ.(ಏಜೆನ್ಸೀಸ್​)
ಕಣ್ಣೀರು ತರಿಸುವಂತಿದೆ ಪ್ರಜ್ವಲ್​ ಜತೆಗಿನ ಕೊನೇ ವಾಟ್ಸ್​ಆ್ಯಪ್​ ಚಾಟ್​: ಈಡೇರಲೇ ಇಲ್ಲ ಚಿರು ಬಯಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three − two =
Remember me
