ರಾಯ್ಪುರ: ಆಘಾತಕಾರಿ ಘಟನೆಯೊಂದರಲ್ಲಿ, 17 ವರ್ಷದ ಹುಡುಗ ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ, ಬಾವಿಗೆ ಎಸೆದಿದ್ದು, ಆಕೆಯ ಸೋದರ ಸಂಬಂಧಿಯನ್ನು ಕೊಲೆ ಗೈದಿದ್ದಾನೆ.ಈ ದುರ್ಘಟನೆ ಛತ್ತೀಸಗಢದ ಕೊರಿಯಾ ಜಿಲ್ಲೆಯಲ್ಲಿ ನಡೆದಿದೆ. ಅದೃಷ್ಟವಶಾತ್, ಅತ್ಯಾಚಾರಕ್ಕೊಳಗಾದ ಬಾಲಕಿ ಗಾಯಗೊಂಡಿದ್ದರೂ ಬಾವಿಯಲ್ಲಿ ತೇಲುತ್ತಿದ್ದು, ಸಹಾಯಕ್ಕಾಗಿ ಕೂಗಿದ ನಂತರ ಸ್ಥಳೀಯರು ಆಕೆಯನ್ನು ರಕ್ಷಿಸಿದ್ದಾರೆ.ಆ ದೃಶ್ಯ ನೋಡಿದ, ಅತ್ಯಾಚಾರಕ್ಕೊಳಗಾದ ಬಾಲಕಿಯ 6 ವರ್ಷದ ಸೋದರಸಂಬಂಧಿಯನ್ನು ಸಹ ಆರೋಪಿ ಕತ್ತು ಹಿಸುಕಿದ್ದಾನೆ.ಬಾಲಕಿಯ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಪೊಕ್ಸೊ ಕಾಯ್ದೆಯಡಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಲಾಗಿದೆ.
ಇದನ್ನೂ ಓದಿ:ತಲೆ, ಕಣ್ಣು, ಮೂಗು ಇಲ್ಲದ ಮಾನವನ ಮೂತಿ? ಇದು ಪ್ರಕೃತಿಯ ವೈಚಿತ್ರ್ಯ ಹೌದು ಸ್ವಾಮಿ!
ಬಾಲಕಿಗೆ ದೇಹದಾದ್ಯಂತ ಆದ ಗಾಯ ಮತ್ತು ಕಚ್ಚಿದ ಗುರುತುಗಳನ್ನು ನೋಡಿದ ಪೊಲೀಸರೂ ಗಾಬರಿಗೊಂಡಿದ್ದಾರೆ.ಮಕ್ಕಳು ಹೊಲದಲ್ಲಿ ಆಟವಾಡುತ್ತಿದ್ದಾಗ ಪಕ್ಕದ ಗ್ರಾಮದ ಆರೋಪಿ ಪೂಜೆಗೆ ಎಲೆಗಳನ್ನು ಕಿತ್ತುಕೊಳ್ಳಲು ಸಹಾಯ ಮಾಡುವಂತೆ ಮಕ್ಕಳನ್ನು ಕೇಳಿದ್ದ. ಅವನು ಅವರಿಗೆ ಪರಿಚಿತನಾಗಿದ್ದರಿಂದ ಅವನೊಂದಿಗೆ ಹೋದರು.ಆರೋಪಿ ಅವರನ್ನು 2 ಕಿಲೋಮೀಟರ್ ದೂರದಲ್ಲಿರುವ ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು 6 ವರ್ಷದ ಬಾಲಕನನ್ನು ಸಹೋದರಿಯ ಕಣ್ಣ ಮುಂದೆ ಕತ್ತು ಹಿಸುಕಿ ಪೊದೆಗಳಲ್ಲಿ ಎಸೆದ.ನಂತರ, ಆಗಲೇ ಭಯಭೀತಳಾಗಿದ್ದ ಬಾಲಕಿಯನ್ನು ಆತ ಕಾಡಿನಲ್ಲಿ ಕರೆದೊಯ್ದು ಚಿತ್ರಹಿಂಸೆ ನೀಡಿ ಅತ್ಯಾಚಾರ ಎಸಗಿ ಆಳವಾದ ಬಾವಿಗೆ ಎಸೆದಿದ್ದಾನೆ. ಆದರೆ ಅದೃಷ್ಟವಶಾತ್, ಹುಡುಗಿ ಬಾವಿಯಲ್ಲಿ ತೇಲುತ್ತಿದ್ದು, ಸಹಾಯಕ್ಕಾಗಿ ಕೂಗುತ್ತಿದ್ದಳು.ನಂತರ, ದಾರಿಹೋಕನೊಬ್ಬ ಅವಳ ರೋದನವನ್ನು ಕೇಳಿ ಇತರ ಗ್ರಾಮಸ್ಥರ ಸಹಾಯದಿಂದ ಅವಳನ್ನು ರಕ್ಷಿಸಲು ಧಾವಿಸಿದ. ಬಾಲಕಿಯನ್ನು ಬಾವಿಯಿಂದ ಹೊರಗೆ ಕರೆತರಲಾಯಿತು.
ಇದನ್ನೂ ಓದಿ:ಕಾಠ್ಮಂಡು ಕಂಗೆಡಿಸುವ, ಶಿಮ್ಲಾ, ದೆಹಲಿ ನಡುಗಿಸುವ ವಿದ್ಯಮಾನ ಬಾಕಿಯಿದೆ…! ಯಾವುದೇ ಕ್ಷಣವೂ ಸಂಭವಿಸಬಹುದು
ಘಟನೆ ಕುರಿತು ಪೊಲೀಸರಿಗೆ ವಿವರಿಸಿ ಅತ್ಯಾಚಾರಿ ಹೆಸರು ಹೇಳಿದ್ದಾಳೆ. ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದು, ಬಾಲಕನ ಶವವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ, ಆಕೆಯ ಸೋದರಸಂಬಂಧಿಯನ್ನು ಕೊಂದಿದ್ದಾಗಿ ಬಾಲಾಪರಾಧಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಟ್ರ್ಯಾಕ್ ಮೈ ವೈಫ್​’ಸ್ ಫೋನ್ ಅಂತ ಗೂಗಲ್ ಸರ್ಚ್ ಮಾಡ್ತಿದ್ದೀರಾ?: ನಿಮಗೊಂದು ಶಾಕಿಂಗ್​ ಸುದ್ದಿ ಇಲ್ಲಿದೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
