ಪಟನಾ:ಸೋದರ ಮಾವನಿಂದ ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾದ ಹೆಂಡತಿಯನ್ನು ಪತಿಯೂ ಸ್ವೀಕರಿಸದೆ ಕೊನೆಗೆ ಆಕೆ ಮಾವನ ಮನೆಯಲ್ಲೇ ಉಳಿಯಬೇಕಾದ ಸ್ಥಿತಿ ಎದುರಾಗಿದೆ.ಫಾಲ್ಕಾ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. 20 ವರ್ಷದ ಸಂತ್ರಸ್ತೆ ತನ್ನ ಮಾವನ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ್ದಾಳೆ.ಅತ್ಯಾಚಾರಕ್ಕೊಳಗಾದ ಆಕೆ ಸದ್ಯ ಎಂಟು ತಿಂಗಳ ಗರ್ಭಿಣಿ. ಆಕೆಯನ್ನು ಥಳಿಸಿ ಮನೆಯಿಂದ ಹೊರಗೆ ಹಾಕಿದ್ದಕ್ಕಾಗಿ ಎಫ್‌ಐಆರ್‌ನಲ್ಲಿ ತನ್ನ ಅಜ್ಜ ಸೇರಿದಂತೆ ಇತರ ನಾಲ್ವರು ಕುಟುಂಬ ಸದಸ್ಯರ ಮೇಲೆ ದೂರು ದಾಖಲಿಸಿದ್ದಾಳೆ.
ಇದನ್ನೂ ಓದಿ :ಸುಖಾಂತ್ಯ ಕಂಡ ಮಗು ಮಾರಾಟ ಪ್ರಕರಣ
ಆಕೆಯ ಅಜ್ಜ ಪೂರ್ಣಿಯಾ ಜಿಲ್ಲೆಯ ಹುಡುಗನಿಗೆ ಆಕೆಯನ್ನು ಕೊಟ್ಟು ಆಕೆಯ ಮದುವೆ ಮಾಡಿದ್ದರು. ಆದರೆ ಹೆತ್ತವರು ಇಲ್ಲದ ಕಾರಣ ಆಕೆ ತನ್ನ ಅಜ್ಜನ ಮನೆಯಲ್ಲೇ ಇದ್ದಳು.ಸಂತ್ರಸ್ತೆಯ ಮಾವ ಇರುವ ಮನೆಗೆ ಹೋದಾಗ ಆತ ಅಲ್ಲಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.“ಆಕೆಯ ಹೇಳಿಕೆಯನ್ನು ದಾಖಲಿಸಲು ಆಕೆಯನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಫಾಲ್ಕಾ ಪೊಲೀಸ್ ಠಾಣಾಧಿಕಾರಿ ಸುನಿಲ್ ಕುಮಾರ್ ಮಂಡಲ್ ತಿಳಿಸಿದ್ದಾರೆ.ಆರೋಪಿ ಆಕೆಯ ಮೇಲೆ ಹಲವು ತಿಂಗಳು ಅತ್ಯಾಚಾರ ಎಸಗಿದ್ದು, ಈ ವಿಷಯವನ್ನು ಬಹಿರಂಗಪಡಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ:ಅಪಾಯದಲ್ಲಿದೆ 18 ಕೋಟಿ ಜನರ ಪ್ಯಾನ್‌ ಕಾರ್ಡ್‌- ಏಕೆ ಗೊತ್ತಾ?
ಆಕೆಯ ಗರ್ಭದಲ್ಲಿ ಯಾರ ಮಗು ಬೆಳೆಯುತ್ತಿದೆಯೋ ಅದೇ ವ್ಯಕ್ತಿಯೊಂದಿಗೆ ಆಕೆ ಇರಬೇಕೆಂದು ಹೇಳಿ ಗಂಡ ಅವಳನ್ನು ಸ್ವೀಕರಿಸಲು ನಿರಾಕರಿಸಿರುವುದಾಗಿ ತಿಳಿಸಿದ್ದಾಳೆ.ಪೊಲೀಸರನ್ನು ಸಂಪರ್ಕಿಸದಿರಲು ಹುಡುಗಿಯ ಮಾವ 2 ಲಕ್ಷ ರೂ.ನೀಡುವುದಾಗಿ ಗ್ರಾಮಸ್ಥರ ಸಮ್ಮುಖದಲ್ಲಿ ಒಪ್ಪಿಕೊಂಡಿದ್ದ. ಆದರೆ ನಂತರ ಹಣ ನೀಡದೆ ಕೈಚೆಲ್ಲಿದ, ಜತೆಗೆ ಈ ಪ್ರಕರಣವನ್ನು ತಾನು ಎದುರಿಸುವುದಾಗಿ ತಿಳಿಸಿದ್ದ.ಏತನ್ಮಧ್ಯೆ, ಆಕೆಯ ಪತಿಗೆ ಈಗಾಗಲೇ 2 ಲಕ್ಷ ರೂ. ನೀಡಲಾಗಿದ್ದು, ದೂರು ದಾಖಲಿಸದಂತೆ ಪೊಲೀಸರಿಗೆ ಅಜ್ಜ ಕೇಳಿಕೊಂಡಿದ್ದ. ಗರ್ಭಿಣಿ ಸದ್ಯ ಮಾವನ ಮನೆಯಲ್ಲೇ ವಾಸಿಸುತ್ತಿದ್ದಾಳೆ.
ಗೊರಕೆ ಹೊಡೆದನೆಂದು ಕೊಂದೇಬಿಡೋದಾ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × 4 =
Remember me
