ನವದೆಹಲಿ:ಸಿಬಿಎಸ್​​ಇ ಪಿಯು ರಿಸಲ್ಟ್​ ಘೋಷಣೆಯಾದ ದಿನದ ಬೆನ್ನಲ್ಲೇ ಬೋರ್ಡ್​ ಎಕ್ಸಾಮ್​ ಫಲಿತಾಂಶಕ್ಕಿಂತ ನಮ್ಮ ಜೀವನವೇ ಮುಖ್ಯವೆಂದು ಟ್ವೀಟ್​ ಮಾಡಿರುವ ಐಎಎಸ್​ ಅಧಿಕಾರಿ ನಿತಿನ್​ ಸಂಗ್ವಾನ್​, ತಮ್ಮ ಪಿಯು ಮಾರ್ಕ್ಸ್​ ಕಾರ್ಡ್​ ಶೇರ್​ ಮಾಡಿಕೊಂಡು ವಿದ್ಯಾರ್ಥಿ ಹಾಗೂ ಪಾಲಕರಿಗೆ ಸ್ಪೂರ್ತಿದಾಯಕ ಸಂದೇಶವೊಂದನ್ನು ರವಾನಿಸಿದ್ದಾರೆ.
ತಮ್ಮ ಶೈಕ್ಷಣಿಕ ಅವಧಿಯಲ್ಲಿ ಕೆಮಿಸ್ಟ್ರಿಯಲ್ಲಿ 70ಕ್ಕೆ ಕೇವಲ 24 ಅಂಕ ಪಡೆದಿರುವ ಸಂಗ್ವಾನ್​ ಪಾಸ್​ ಆಗಲು ಬೇಕಾಗಿದ್ದ ಕನಿಷ್ಠ ಅಂಕಕ್ಕಿಂತ ಕೇವಲ ಒಂದು ಅಂಕ ಮಾತ್ರ ಹೆಚ್ಚಿಗೆ ಪಡೆದಿದ್ದಾರೆ.
ಇದನ್ನೂ ಓದಿ:ಗಣಿತದಲ್ಲಿ ನೂರಕ್ಕೆ ನೂರು, ಉಳಿದ ವಿಷಯದಲ್ಲೂ ಉತ್ತಮ ಅಂಕ: ಆದ್ರೆ ಸಂಭ್ರಮಿಸಲು ವಿದ್ಯಾರ್ಥಿನಿಯೇ ಇಲ್ಲ
ತಮ್ಮ ಮಾರ್ಕ್ಸ್​ ಕಾರ್ಡ್​ ಶೇರ್​ ಮಾಡಿಕೊಂಡಿರುವ ಸಂಗ್ವಾನ್​ ಮಾಧ್ಯಮದೊಂದಿಗೆ ಮಾತನಾಡಿ, ಕಡಿಮೆ ಅಂಕ ಬಂದಿದ್ದಕ್ಕೆ ನನ್ನ ಸ್ನೇಹಿತರು ಹಾಗೂ ಕುಟುಂಬದವರು ಬೇಸರ ಮಾಡಿಕೊಂಡಿದ್ದನ್ನು ನೋಡಿ, ಅವರಿಗಿಂತ ನನ್ನ ಸ್ಥಿತಿಯೇ ಕೆಟ್ಟದ್ದು ಎಂದು ಭಾಸವಾಯಿತು. ಜಾಲತಾಣದಲ್ಲಿ ನನ್ನ ಅಂಕಪಟ್ಟಿ ಶೇರ್​ ಮಾಡಿಕೊಂಡಿದ್ದರ ಉದ್ದೇಶವೇನೆಂದರೆ ನಾನು ನನ್ನ ಜೀವನದಲ್ಲಿ ಇದಕ್ಕಿಂತ ಹೆಚ್ಚು ಮಾಡಲು ಇಂದು ಸಾಧ್ಯವಾಗಿದ್ದರೆ, ಅವರು ಕೂಡ ಹಾಗೇ ಮಾಡಬಹುದು ಎಂದು ತಿಳಿಸುವುದಕ್ಕಾಗಿ ಎಂದರು.
In my 12th exams, I got 24 marks in Chemistry – just 1 mark above passing marks. But that didn't decide what I wanted from my life
Don't bog down kids with burden of marks
Life is much more than board results
Let results be an opportunity for introspection & not for criticismpic.twitter.com/wPNoh9A616
— Nitin Sangwan (@nitinsangwan)July 13, 2020

ಇದೀಗ ಸಂಗ್ವಾನ್​ ಟ್ವೀಟ್​ ವೈರಲ್​ ಆಗಿದ್ದು, ಸಾವಿರಾರು ರೀಟ್ವೀಟ್​ಗಳನ್ನು ಪಡೆದುಕೊಂಡಿದೆ. ಅಲ್ಲದೆ, ವಿದ್ಯಾರ್ಥಿಗಳನ್ನು ಹುರಿದುಂಬಿಸಿದ್ದಕ್ಕೆ ಅನೇಕರು ಸಂಗ್ವಾನ್​ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಪಿಯು ಪರೀಕ್ಷೆಯಲ್ಲಿ ನಾನು ಕೆಮೆಸ್ಟ್ರಿಯಲ್ಲಿ 24 ಅಂಕ ಗಳಿಸಿದೆ. ಪಾಸ್​ ಮಾರ್ಕ್ಸ್​ಗಿಂತ ಕೇವಲ ಒಂದು ಅಂಕ ಮಾತ್ರ ಹೆಚ್ಚು ಗಳಿಸಿದೆ. ಆದರೆ, ನಾನು ನನ್ನ ಜೀವನದಲ್ಲಿ ಏನಾಗಬೇಕು ಎಂಬುದನ್ನು ಇದು ನಿರ್ಧರಿಸಲಿಲ್ಲ. ಮಾರ್ಕ್ಸ್​ ಎಂಬ ಭಾರದಿಂದ ಮಕ್ಕಳ ಮನಸ್ಸು ಕುಂದುವಂತೆ ಮಾಡಬೇಡಿ ಎಂದು ಮಾರ್ಕ್ಸ್​ ಕಾರ್ಡ್​ ಶೇರ್​ ಮಾಡಿಕೊಂಡು ಸಂಗ್ವಾನ್​ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಜನಿವಾರ ತೋರಿಸಿ ದುಬೆಯಿಂದ ಬಚಾವಾದೆ: ರೋಚಕ ಮಾಹಿತಿ ಬಿಚ್ಚಿಟ್ಟ ದೂರುದಾರ ತಿವಾರಿ!
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ನಿಮ್ಮ ಜೀವನದ ಒಂದು ಮೈಲುಗಲ್ಲಷ್ಟೇ, ಆದರೆ ನೀವು ಏನಾಗಬೇಕು ಎಂಬುದನ್ನು ಅವು ನಿರ್ಧರಿಸಲಾರವು. ಇದೇ ಸಂದೇಶವನ್ನು ನಾನು ನನ್ನ ಟ್ವೀಟ್​ ಮೂಲಕ ತಿಳಿಸಿದ್ದೇನೆಂದು ಸಂಗ್ವಾನ್​ ಹೇಳಿದರು. ಇದೇ ವೇಳೆ ಬಿಲ್​ಗೇಟ್ಸ್​, ಸ್ಟೀವ್​ ಜಾಬ್ಸ್​ ಅವರ ಹೆಸರನ್ನು ಉಲ್ಲೇಖಿಸಿ ಯಶಸ್ಸು ಎಂಬುದು ನಿಮ್ಮ ಪದವಿ ಅಂಕಪಟ್ಟಿಯ ಮೇಲೆ ನಿರ್ಧಾರವಾಗಿರುವುದಿಲ್ಲ ಎಂದರು.
ಅಂದಹಾಗೆ ಸಂಗ್ವಾನ್​ ಅವರು ಐಐಟಿ ಮದ್ರಾಸ್ಸಿನ ಹಳೆಯ ವಿದ್ಯಾರ್ಥಿ. 2015ರಲ್ಲಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಎಎಸ್​ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.(ಏಜೆನ್ಸೀಸ್​)
ಟೆಕ್ಕಿ ಪತಿಯ ಕಿರುಕುಳ ಬಗ್ಗೆ ವಿಡಿಯೋ ಮಾಡಿಟ್ಟು ಕೊನೆ ಆಸೆ ತಿಳಿಸಿ ಮಹಿಳೆ ಆತ್ಮಹತ್ಯೆಗೆ ಶರಣು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
