ನವದೆಹಲಿ:ಕೆಲವರು ಸೀನುವುದನ್ನು ತಡೆಯುವ ಪ್ರಯತ್ನ ಮಾಡುತ್ತಾರೆ. ಆದರೆ, ತಮಾಷೆಗೂ ಸೀನುವುದನ್ನು ತಡೆಯಲು ಪ್ರಯತ್ನಿಸಬಾರದು ಎಂದು ವೈದ್ಯಕೀಯ ಪರಿಣಿತರು ಎಚ್ಚರಿಸಿದ್ದಾರೆ. ಸೀನುವಾಗ ನಮಗೆ ಗೊತ್ತಿಲ್ಲದಂತೆ ಕಣ್ಣನ್ನು ಮುಚ್ಚುತ್ತೇವೆ. ಅಲ್ಲದೆ, ಹೃದಯ ಕೂಡ ಮಿಲಿಸೆಕೆಂಡ್​ಗಳ ಕಾಲ ಸೀನುವಾಗ ಸ್ತಬ್ಧವಾಗುತ್ತದೆಯಂತೆ.
ಹೀಗಾಗಿ ಉತ್ತಮ ಆರೋಗ್ಯಕ್ಕಾಗಿ ಯಾವುದೇ ವಿಷಮ ಪರಿಸ್ಥಿತಿಯಲ್ಲು ಸೀನುವುದನ್ನು ತಡೆಯಬಾರದು. ಅದರಲ್ಲೂ ಪ್ರಕೃತಿಗೆ ವಿರುದ್ಧವಾಗಿ ನಡೆದುಕೊಳ್ಳಬಾರದು ಎಂಬುದಕ್ಕೆ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ. 34 ವರ್ಷದ ವ್ಯಕ್ತಿಯೊಬ್ಬ ಕಣ್ಣು ಬಿಟ್ಟುಕೊಂಡು ಸೀನಿದರೆ ಏನಾಗುತ್ತದೆ ಎಂದು ತಿಳಿಯುವ ಕುತೂಹಲದಿಂದ ಬೇಕೆಂತಲೇ ಕಣ್ಣುಬಿಟ್ಟು ಸೀನಿದವನ ಪರಿಸ್ಥಿತಿ ಇಂದು ಹೀನಾಯವಾಗಿದೆ.
ಇದನ್ನೂ ಓದಿ:ಲಿವ್ ಇನ್ ರಿಲೇಷನ್​ಶಿಪ್ ಬ್ರೇಕ್​ಅಪ್ : ನಂತರ ದಾಖಲಾಯಿತು ರೇಪ್ ಕೇಸ್
ಸಾಮಾನ್ಯವಾಗಿ ಸೀನುವಾಗ ಮೂಗು ಮತ್ತು ಬಾಯನ್ನು ಸಡಿಲವಾಗಿ ಮುಚ್ಚಿಕೊಳ್ಳುತ್ತಾರೆ. ಕಣ್ಣು ಅದಾಗಿಯೇ ಮುಚ್ಚಿಕೊಳ್ಳುತ್ತದೆ. ಆದರೆ, ಕಣ್ಣು ಬಿಟ್ಟುಕೊಂಡು ಗಟ್ಟಿಯಾಗಿ ಮೂಗು ಮತ್ತು ಬಾಯಿ ಮುಚ್ಚಿಕೊಂಡು ಸೀನಿದವನ ಕತೆ ಏನಾಗಿದೆಯೆಂದರೆ, ಆತನ ಕುತ್ತಿಗೆಯ ಮೂಳೆಯೇ ಮುರಿದಿದೆ. ಎಲ್ಲವನ್ನು ಮುಚ್ಚಿಕೊಂಡು ಸೀನುವಾಗ ಕುತ್ತಿಗೆಯ ಭಾಗದಲ್ಲಿ ಮುರಿದ ಶಬ್ದದೊಂದಿಗೆ ನೋವು ಕಾಣಿಸಿಕೊಂಡಿದೆ. ಅಲ್ಲದೆ, ಊಟವನ್ನು ಜಗಿದು ನುಂಗುವುದು ಸಹ ಕಷ್ಟವಾಗಿದೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಾಗಿದ್ದು, ಎಕ್ಸ್​ರೇ ತೆಗೆದು ನೋಡಿದಾಗ ಆತನ ಕುತ್ತಿಗೆಯ ಕೆಳಭಾಗ ಮುರಿದಿರುವುದು ಪತ್ತೆಯಾಗಿದೆ.
Em caso raro, homem rompe garganta e tem dificuldade para falar após segurar espirrohttps://t.co/KyYpmX91A0#G1pic.twitter.com/7h9ApBJUvW
— g1 (@g1)January 16, 2018

ಇನ್ನು ಸೀನುವಾಗ ದೊಡ್ಡ ಪ್ರಮಾಣದ ಗ್ಯಾಸ್​​​ ಒತ್ತಡ ಇರುತ್ತದೆ. ಗಾಳಿ ಹೋಗುವ ಜಾಗ ಸಡಿಲವಾಗಿದ್ದರೆ ಮೂಗು ಮತ್ತು ಬಾಯಿಯ ಮೂಲಕ ಗ್ಯಾಸ್​ ಹೊರ ಹೋಗುತ್ತದೆ. ಆದರೆ, ಅದೇ ಗ್ಯಾಸ್​ ಹೊರ ಹೋಗಲು ಆಗದೇ ಹಿಮ್ಮುಖ ಒತ್ತಡ ಹೆಚ್ಚಾದರೆ ಕುತ್ತಿಗೆ ಮೂಳೆ ಮುರಿಯುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
ಇದನ್ನೂ ಓದಿ:ಅಮ್ಮನನ್ನು ಕೊಂದು, ಅಂಗಳದಲ್ಲಿ ಬೆಂಕಿ ಹಚ್ಚಿ ಮಂತ್ರ ಪಠಿಸಿದ ಮಗ! ಕೊಲೆಗೆ ಕಾರಣ ಕೇಳಿ ಶಾಕ್​ ಆದ ಸಹೋದರಿ
ಅದೃಷ್ಟವಶಾತ್ ಸಂತ್ರಸ್ತ ವ್ಯಕ್ತಿಯ ಸ್ಥಿತಿ ಗಂಭೀರವಾಗಿಲ್ಲ. ಸದ್ಯ ಆತ ಚೇತರಿಸಿಕೊಳ್ಳುತ್ತಿದ್ದಾನೆ. ಟ್ಯೂಬ್​ ಮೂಲಕ ಆತನಿಗೆ ಆ್ಯಂಟಿಬಯಾಟಿಕ್ಸ್​ ನೀಡಲಾಗುತ್ತಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್​ ಸಹ ಮಾಡಲಾಗಿದೆ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಇಂತಹ ದುಸ್ಸಾಹಸಕ್ಕೆ ಕೈಹಾಕಬೇಡ ಎಂದು ವೈದ್ಯರು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.(ಏಜೆನ್ಸೀಸ್​)
ಗ್ರಾಮ ಪಂಚಾಯಿತಿ ಫೈಟ್​: ಬಿಜೆಪಿಗೆ ಭರ್ಜರಿ ಮುನ್ನಡೆ

ಹುಡುಗನಿಗೆ ಮದುವೆ ವಯಸ್ಸು ಆಗದಿದ್ದರೂ ವಯಸ್ಕರಿಬ್ಬರು ಒಟ್ಟಿಗೇ ಇರಬಹುದು ಎಂದ ಹೈಕೋರ್ಟ್​

VIDEO: ಟಿ.ವಿ ನೇರಪ್ರಸಾರದ ಮೂಲಕ ಕರೊನಾ ಲಸಿಕೆ ಪಡೆದ ಅಮೆರಿಕ ಉಪಾಧ್ಯಕ್ಷೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 19 =
Remember me
