ಥಾಣೆ:ಪರಸ್ಪರ ಕೂಡಿ ಬಾಳುವ ಪ್ರಸ್ತಾಪವನ್ನು ಯುವತಿಯೊಬ್ಬಳು ನಿರಾಕರಿಸಿದ ನಂತರ ಯುವಕನೊಬ್ಬ ಆಕೆಯನ್ನು ಮರಕ್ಕೆ ನೇಣು ಹಾಕಿ ನಂತರ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲೆತ್ನಿಸಿದ ಘಟನೆ ನಡೆದಿದೆ.ಆರೋಪಿ ಮತ್ತು ಸಂತ್ರಸ್ತೆ ಇಬ್ಬರೂ ವಿವಾಹವಾದರೂ ಪರಸ್ಪರ ಬೇರ್ಪಟ್ಟಿದ್ದಾರೆ.  24 ವರ್ಷದ ಆಕೆ ಕಲ್ಯಾಣ್ ನಿವಾಸಿ. ಆಗಸ್ಟ್ 9 ರಂದು ಇಲ್ಲಿನ ಭಿವಾಂಡಿ ಪ್ರದೇಶದ ನಾಸಿಕ್-ಮುಂಬೈ ಬೈಪಾಸ್ ರಸ್ತೆಯಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿರುವುದು ಕಂಡು ಬಂದಿತು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:13 ನಿಮಿಷಗಳಲ್ಲಿ 111 ಬಾಣ ಬಿಡುವ ಐದರ ಬಾಲೆಯಿಂದ ವಿಶ್ವದಾಖಲೆ
ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಶವಪರೀಕ್ಷೆಯ ವರದಿಯಲ್ಲಿ ಇದು ಸಹಜ ಸಾವು ಅಲ್ಲ ಮತ್ತು ಕತ್ತು ಹಿಸುಕಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ತನಿಖೆಯ ವೇಳೆ ಪೊಲೀಸರು ಸಂತ್ರಸ್ತೆಯ ಸಂಬಂಧಿಕರನ್ನು ವಿಚಾರಣೆ ನಡೆಸಿದ್ದು, ಚಾಲಕನಾಗಿ ಕೆಲಸ ಮಾಡುತ್ತಿದ್ದ ಗೋವಿಂದವಾಡಿ ನಿವಾಸಿ ದೀಪಕ್ ರೂಪವಾಟೆ ಎಂಬ ಆರೋಪಿಯ ಸಂಶಯ ವ್ಯಕ್ತವಾಯಿತು.
ಇದನ್ನೂ ಓದಿ :ಭೀಕರ ರಸ್ತೆ ಅಪಘಾತಕ್ಕೆ ಐವರು ಬಲಿ, ನಾಲ್ವರಿಗೆ ಗಾಯ
ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಆತ ಆಕೆಯನ್ನು ಪ್ರೀತಿಸುತ್ತಿದ್ದ ವಿಷಯ ಬಹಿರಂಗ ಪಡಿಸಿದ್ದಾನೆ. ಆದರೆ ಆಕೆ ಆತನೊಂದಿಗೆ ಕೂಡಿ ಬಾಳುವ ಪ್ರಸ್ತಾಪವನ್ನು ತಿರಸ್ಕರಿಸಿದ್ದಷ್ಟೇ ಅಲ್ಲದೆ ಮತ್ತು ಆತನ ಮೊಬೈಲ್ ಸಂಖ್ಯೆಯನ್ನು ಸಹ ಬ್ಲಾಕ್ ಮಾಡಿದ್ದಾಳೆ ಎಂದು ಆತ ವಿಚಾರಣೆ ವೇಳೆ ತಿಳಿಸಿರುವುದಾಗಿ ಅಧಿಕಾರಿ ಹೇಳಿದ್ದಾರೆ.ಆಗಸ್ಟ್ 9 ರಂದು ಆತ ಆಕೆಯನ್ನು ಮುಂಬೈ-ನಾಸಿಕ್ ಬೈಪಾಸ್ ರಸ್ತೆಗೆ ಕರೆದೊಯ್ದ. ಮತ್ತೊಂದು ಬಾರಿ ಕೂಡಿ ಬಾಳುವ ಪ್ರಸ್ತಾಪವನ್ನಿಟ್ಟ. ಆಕೆ ಅದನ್ನು ಮತ್ತೆ ತಿರಸ್ಕರಿಸಿದಾಗ, ಅವನು ಅವಳನ್ನು ದುಪಟ್ಟಾನಿಂದ ಕತ್ತು ಹಿಸುಕಿ ಕೊಲೆ ಮಾಡಿ ನಂತರ ಶವವನ್ನು ಮರಕ್ಕೆ ನೇತುಹಾಕಿ ಪರಾರಿಯಾಗಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.  ಆರೋಪಿಯನ್ನು ಪೊಲೀಸರು ಶನಿವಾರ ರಾತ್ರಿ ಬಂಧಿ ಪ್ರಕರಣ ದಾಖಲಿಸಿದ್ದಾರೆ.
ಮಾಲ್ಡೀವ್ಸ್​ ಹಡಗಿನಿಂದ ತೈಲ ಸೋರಿಕೆ ತಡೆಗೆ ಭಾರತ ನೆರವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 5 =
Remember me
