ಬೆಂಗಳೂರು:ಕೆಲವೇ ಸಮಯದ ಹಿಂದೆ ಕರೊನಾಗೆ ಬಲಿಯಾಗಿರುವ ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ, ಸಂಸದ ಸುರೇಶ್ ಅಂಗಡಿ ಅವರಿಗೆ ಕರೊನಾ ಸೋಂಕು ತಗುಲಿರುವುದು ಸೆ. 11ರಂದು ದೃಢಪಟ್ಟಿತ್ತು.
“ಕರೊನಾ ಪರೀಕ್ಷೆ ವರದಿ ಪಾಸಿಟಿವ್​ ಎಂದು ಬಂದಿದೆ. ಯಾವುದೇ ರೋಗ ಲಕ್ಷಣಗಳಿಲ್ಲದಿದ್ದರೂ ವೈದ್ಯರ ಸಲಹೆ ಪಡೆಯುತ್ತಿದ್ದೇನೆ. ಇತ್ತೀಚೆಗೆ ನನ್ನ ಸಂಪರ್ಕದಲ್ಲಿದ್ದವರು ಕೋವಿಡ್ ಪರೀಕ್ಷೆ ಮಾಡಿಸಿಕೊಂಡು, ನಿಮ್ಮ ಆರೋಗ್ಯದ ಬಗ್ಗೆ ನಿಗಾ ವಹಿಸಲು ವಿನಂತಿಸಿಕೊಳ್ಳುತ್ತೇನೆ” ಎಂದು ಎಲ್ಲರ ಬಗ್ಗೆ ಕಾಳಜಿ ವಹಿಸಿ ಅವರು ಟ್ವೀಟ್​ ಮಾಡಿದ್ದರು.
ಮಾತ್ರವಲ್ಲ, ಆ ಬಳಿಕ ಕರೊನಾ ಸೋಂಕು ದೃಢಪಟ್ಟ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೇಮಾ ಖಂಡು, ಕೇಂದ್ರ ಸಚಿವ ನಿತಿನ್​ ಗಡ್ಕರಿ, ಮಣಿಪುರದ ಸಂಸದ ಪ್ರಹ್ಲಾದ್ ಸಿಂಗ್ ಪಟೇಲ್​, ಕರ್ನಾಟಕದ ಉಪ ಮುಖ್ಯಮಂತ್ರಿಗಳಾದ ಡಾ.ಸಿ.ಎನ್​. ಅಶ್ವತ್ಥನಾರಾಯಣ, ಎಂ.ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ರಾಯಬಾಗದ ಶಾಸಕ ದುರ್ಯೋಧನ ಐಹೊಳೆ ಎಲ್ಲರಿಗೂ ಸಂಸದ ಅಂಗಡಿಯವರು ಟ್ವೀಟ್​ ಮಾಡಿ ಬೇಗ ಚೇತರಿಸಿಕೊಳ್ಳಿ ಎಂಬುದಾಗಿ ಹಾರೈಸಿದ್ದರು.
ತನ್ನ ನಂತರ ಸೋಂಕಿಗೆ ಒಳಗಾದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜನಪ್ರತಿನಿಧಿ ಸ್ನೇಹಿತರೆಲ್ಲರಿಗೂ ಬೇಗ ಗುಣವಾಗಿ ಮತ್ತೆ ಜನಸೇವೆಗೆ ಮರಳಿ ಎಂಬಂತೆ ಪ್ರಾರ್ಥಿಸಿದ್ದ ಸುರೇಶ್ ಅಂಗಡಿಯವರೇ ಈಗ ಮರಳಿ ಬಾರದ ಲೋಕಕ್ಕೆ ತೆರಳಿರುವುದು ಬಹಳಷ್ಟು ಮಂದಿಗೆ ಅಪಾರ ದುಃಖ ಉಂಟು ಮಾಡಿದೆ.
ನಾನು#Covid19ಪರೀಕ್ಷೆಗೆ ಒಳಗಾಗಿದ್ದು, ವರದಿಯಲ್ಲಿ ಪಾಸಿಟಿವ್ ಎಂದು ಬಂದಿದೆ. ಯಾವುದೇ ರೋಗ ಲಕ್ಷಣಗಳಿಲ್ಲದಿದ್ದರೂ ವೈದ್ಯರ ಸಲಹೆ ಪಡೆಯುತ್ತಿದ್ದೇನೆ.
ಇತ್ತೀಚೆಗೆ ನನ್ನ ಸಂಪರ್ಕದಲ್ಲಿದ್ದವರು ಕೋವಿಡ್ ಪರೀಕ್ಷೆ ಮಾಡಿಸಿಕೊಂಡು, ನಿಮ್ಮ ಆರೋಗ್ಯದ ಬಗ್ಗೆ ನಿಗಾ ವಹಿಸಲು ವಿನಂತಿಸಿಕೊಳ್ಳುತ್ತೇನೆ.@PMOIndia
— Mangal Suresh Angadi (@MangalSAngadi)September 11, 2020

Praying for your good health and speedy recovery@PemaKhanduBJPJi!!https://t.co/6os2ExVIao
— Mangal Suresh Angadi (@MangalSAngadi)September 15, 2020

ರಾಜ್ಯದ ಮಾನ್ಯ ಗೃಹ ಸಚಿವರು ಹಾಗೂ ಆತ್ಮೀಯರಾದ ಶ್ರೀ@BSBommaiಅವರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಅವರು ಆದಷ್ಟು ಬೇಗ ಸಂಪೂರ್ಣ ಗುಣಮುಖರಾಗಿ ಮತ್ತೆ ಎಂದಿನಂತೆ ನಾಡಿನ ಜನರ ಸೇವೆಯಲ್ಲಿ ನಿರತರಾಗಲಿ ಎಂದು ಪ್ರಾರ್ಥಿಸುತ್ತೇನೆ.https://t.co/eXLg8icu1n
— Mangal Suresh Angadi (@MangalSAngadi)September 16, 2020

ईश्वर से आपके जल्द स्वस्थ होने की कामना करता हूँ।@nitin_gadkariजीhttps://t.co/YY51AcBUeC
— Mangal Suresh Angadi (@MangalSAngadi)September 16, 2020

ईश्वर से आपके जल्द स्वस्थ होने की कामना करता हूँ।@prahladspatelJihttps://t.co/ipJy90Nw0i
— Mangal Suresh Angadi (@MangalSAngadi)September 17, 2020

ಮಾನ್ಯ ಉಪಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರಾದ ಶ್ರೀ@drashwathcnಅವರು ಶೀಘ್ರ ಗುಣಮುಖರಾಗಲೆಂದು ಹಾರೈಸುತ್ತೇನೆ.https://t.co/3HW1OHgmVr
— Mangal Suresh Angadi (@MangalSAngadi)September 19, 2020

ರಾಯಭಾಗ ಕ್ಷೇತ್ರದ ಶಾಸಕರು ಹಾಗೂ ಆತ್ಮೀಯರಾದ ಶ್ರೀ ದುರ್ಯೋಧನ ಐಹೊಳೆ ಅವರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಅವರು ಶೀಘ್ರ ಸೋಂಕಿನಿಂದ ಗುಣಮುಖರಾಗಿ, ಎಂದಿನಂತೆ ಜನ ಸೇವೆಯಲ್ಲಿ ನಿರತರಾಗಲಿ ಎಂದು ಪ್ರಾರ್ಥಿಸುತ್ತೇನೆ.@BJP4Karnatakapic.twitter.com/3JqVVLY70x
— Mangal Suresh Angadi (@MangalSAngadi)September 21, 2020

ರಾಜ್ಯದ ಮಾನ್ಯ ಉಪಮುಖ್ಯಮಂತ್ರಿಗಳು, ಲೋಕೋಪಯೋಗಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀ@GovindKarjolಅವರು, ಕೊರೋನಾ ಸೋಂಕಿನಿಂದ ಆದಷ್ಟು ಬೇಗ ಸಂಪೂರ್ಣ ಗುಣಮುಖರಾಗಿ ಎಂದಿನಂತೆ ನಾಡಿನ ಜನರ ಸೇವೆಗೆ ಮರಳಲಿ ಎಂದು ಹಾರೈಸುತ್ತೇನೆ.https://t.co/JWXC5U90af
— Mangal Suresh Angadi (@MangalSAngadi)September 22, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − 2 =
Remember me
