ವಾಷಿಂಗ್ಟನ್‌:ಅಮೆರಿಕದಲ್ಲಿ ಜನಾಂಗೀಯ ಹಲ್ಲೆ ಮತ್ತು ವರ್ಣಬೇಧ ನೀತಿ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ಇಳಿದಿರುವ ನಡುವೆಯೇ ಮೆಸಾಚ್ಯುಸೆಟ್ಸ್‌ನ ಬೋಸ್ಟನ್‌ ನಗರದ ಹೃದಯ ಭಾಗದಲ್ಲಿರುವ ಕ್ರಿಸ್ಟೊಫರ್‌ ಕೊಲಂಬಸ್‌ನ ಪ್ರತಿಮೆಯ ತಲೆಯನ್ನು ಕೆಲವು ಕಿಡಿಗೇಡಿಗಳು ಕತ್ತರಿಸಿದ್ದಾರೆ. ಮಿಯಾಮಿಯಲ್ಲೂ ಕೊಲಂಬಸ್‌ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ.
ಆರು ಅಡಿ ಎತ್ತರದ ಈ ಪ್ರತಿಮೆಯನ್ನು 1979ರಲ್ಲಿ ಅನಾವರಣಗೊಳಿಸಲಾಗಿತ್ತು. ಕೆಲ ದಿನಗಳ ಹಿಂದಷ್ಟೇ ಪ್ರತಿಭಟನಾಕಾರರು ಅಮೆರಿಕ ರಾಜಧಾನಿಯಾಗಿರುವ ವಾಷಿಂಗ್ಟನ್ ಡಿಸಿಯ ಭಾರತೀಯ ರಾಯಭಾರ ಕಚೇರಿಯ ಆವರಣದಲ್ಲಿ ಇರುವ ಗಾಂಧಿ ಪ್ರತಿಮೆಯನ್ನು ಭಗ್ನಗೊಳಿಸಿದ್ದರು.
ಜಾರ್ಜ್‌ ಫ್ಲಾಯ್ಡ ಹತ್ಯೆ ಹಾಗೂ ವರ್ಣಭೇದ ನೀತಿ ವಿರೋಧಿಸಿ ಅಮೆರಿಕದಲ್ಲಿ ಕೆಲ ದಿನಗಳಿಂದ ಭಾರಿ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನಾಕಾರರು ಕೊಲಂಬಸ್​ ಸ್ಮರಣಾರ್ಥ ದೇಶಾದ್ಯಂತ ನಿರ್ಮಿಸುವ ಪ್ರತಿಮೆಗಳನ್ನು ತೆರವುಗೊಳಿಸಿ ಎಂದು ಹೋರಾಟ ಮಾಡಿದ್ದರು. ಇದರ ಬೆನ್ನಲ್ಲೇ ಈ ಕೃತ್ಯ ಎಸಗಲಾಗಿದೆ.
ವಾರದ ಹಿಂದೆ ವರ್ಜೀನಿಯಾದಲ್ಲಿದ್ದ ಪ್ರತಿಮೆಯೊಂದನ್ನು ಕೆರೆಗೆ ಹಾಕಲಾಗಿತ್ತು. ಈ ಪ್ರತಿಮೆಗಳು ವರ್ಣಭೇದ ನೀತಿಯ ಸಂಕೇತವಾಗಿದೆ ಎನ್ನುವುದು ಪ್ರತಿಭಟನಾಕಾರರ ಹೇಳಿಕೆ. ಕಪ್ಪುವರ್ಣೀಯರು ಮಾತ್ರವಲ್ಲದೇ ಕೆಲವು ಅಮೆರಿಕನ್ನರೂ ಕೊಲಂಬಸ್​ ಪ್ರತಿಮೆ ವಿಘ್ನಕ್ಕೆ ಕೈಜೋಡಿಸಿದ್ದಾರೆ. ಈತ ಸಮುದ್ರಮಾರ್ಗದ ಅನ್ವೇಷಕ ಎನ್ನುವುದು ಕೆಲವು ಅಮೆರಿಕರನ್ನರೂ ಒಪ್ಪುತ್ತಿಲ್ಲ. ಆದ್ದರಿಂದ ಅವರು ಪ್ರತಿಮೆ ಧ್ವಂಸಕ್ಕೆ ಸಹಾಯ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಜನಾಂಗೀಯ ದ್ವೇಷದ ನಡುವೆ ಭಗ್ನವಾಯ್ತು ಗಾಂಧಿ ಪ್ರತಿಮೆ
ಕೊಲಂಬಸ್​ ಅಮೆರಿಕ ಯಾನ ಕೈಗೊಂಡ ಬಳಿಕ ಅಲ್ಲಿ ಐರೋಪ್ಯ ರಾಷ್ಟ್ರಗಳು ದೊಡ್ಡ ಪ್ರಮಾಣದಲ್ಲಿ ವಸಾಹತು ಆರಂಭಿಸಿದ್ದರು. ಈ ಪ್ರತಿಮೆಯನ್ನು ಅದೇ ಸ್ಥಳದಲ್ಲಿ ಮರುಸ್ಥಾಪನೆ ಮಾಡಲಾಗುವುದು, ಕೃತ್ಯದ ವಿರುದ್ಧ ದೂರು ದಾಖಲು ಮಾಡಿಕೊಳ್ಳಲಾಗಿದೆ ಎಂದು ಬೋಸ್ಟನ್​ ಮೇಯರ್​ ಮಾರ್ಟಿ ವಾಲ್​ಶ್​ ಹೇಳಿದ್ದಾರೆ.
ಕಳೆದ ಮಂಗಳವಾರ ಕೂಡ ರಿಚ್ಮಂಡ್​ನ ಬರ್ಡ್​ಪಾರ್ಕ್​ನಲ್ಲಿರುವ ಕೊಲಂಬಸ್​ ಪ್ರತಿಮೆಯನ್ನು ಕೆಡವಿ ಸರೋವರಕ್ಕೆ ಎಸೆಯಲಾಗಿತ್ತು. ಇದು ಅಮೆರಿದಲ್ಲಿ ಸ್ಥಾಪಿಸಲಾಗಿರುವ ಮೊದಲ ಕೊಲಂಬಸ್​ ಪ್ರತಿಮೆ 1927ರಲ್ಲಿ ಇದನ್ನು ಸ್ಥಾಪಿಸಲಾಗಿತ್ತು.
ಭಾರತದ ಆರ್ಥಿಕತೆ ಸದೃಢ ಮಾಡಲು ಧನಸಹಾಯ ಮಾಡ್ತಾರಂತೆ ಪಾಕ್​ ಪ್ರಧಾನಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × 4 =
Remember me
