ಗುವಾಹಟಿ:ಹಿಂದೂ ಧರ್ಮದಲ್ಲಿ ಹಸುವನ್ನು ದೇವರಿಗೆ ಹೋಲಿಸಲಾಗುತ್ತದೆ. ಗೋಮಾತೆಯನ್ನು ಪೂಜಿಸಲಾಗುತ್ತದೆ. ಆದರೆ ಕೆಲವೆಡೆ ದನದ ಮಾಂಸ ತಿನ್ನುವವರ ಸಂಖ್ಯೆಯೂ ನಮ್ಮಲ್ಲಿದೆ.
ಸದ್ಯಕ್ಕೆ ದನದ ಮಾಂಸ ಮಾರಾಟ ಹಾಗೂ ತಿನ್ನುವುದು ಕೂಡ ಕೆಲವು ರಾಜ್ಯಗಳಲ್ಲಿ ಕಾನೂನು ಬಾಹಿರವಾಗಿದೆ. ವಿಶೇಷವಾಗಿ ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಈ ಕಾನೂನಿಗೆ ಮಾನ್ಯತೆ ಇದೆ.
ಇದೀಗ ದನದ ಮಾಂಸವನ್ನು ಟಿಫನ್​ ಭಾಕ್ಸ್​​ನಲ್ಲಿ ತಂದು ಅಸ್ಸಾಂನ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿಯೊಬ್ಬಳು ಸಂಕಷ್ಟ ತಂದುಕೊಂಡಿದ್ದಾರೆ. ಅಸ್ಸಾಂ ನಲ್ಲೂ ಸಹ ದನದ ಮಾಂಸ ಮಾರಾಟ ಕಾನೂನು ಬಾಹಿರ. ಇದನ್ನು ಅರಿತಿದ್ದರು ಈ ಮುಖ್ಯ ಶಿಕ್ಷಕಿ ಶಾಲೆಗೆ ಮಾಂಸವನ್ನು ತಂದಿದ್ದಾರೆ.
ದಲಿಮಾ ನೆಸ್ಸಾ(56) ಎಂಬ ಮುಖ್ಯ ಶಿಕ್ಷಕಿ ಗೊಲ್ಪರಾ ಜಿಲ್ಲೆಯ ಲಖಿಂಪುರ್​​ನಲ್ಲಿರುವ ಶಾಲೆಗೆ ದನದ ಮಾಂಸ ತಂದು ಮಧ್ಯಾಹ್ನದ ಊಟದ ವೇಳೆ ಇತರೆ ಸಹೋದ್ಯೋಗಿಗಳಿಗೂ ಹಂಚಿದ್ದಾರೆ. ಆದರೆ ಇಲ್ಲೇ ಇದ್ದ ಕೆಲ ಸಸ್ಯಹಾರಿ ಶಿಕ್ಷಕರು ಇದನ್ನು ಸಹಿಸಿಲ್ಲ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಬಂದು ತಪಾಸಣೆ ನಡೆಸಿದ ವೇಳೆ ದನದ ಮಾಂಸ ಪತ್ತೆಯಾಗಿದೆ. ಈಕೆಯ ವಿರುದ್ಧ 153ಎ ಮತ್ತು 295ಎ ಧಾರ್ಮಿಕ ಭಾವನೆಯನ್ನು ಅವಮಾನಿಸಿದ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. ಇನ್ನು ಸದ್ಯ ಈಕೆಯನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.(ಏಜೆನ್ಸೀಸ್​)
ಕಾಂಗ್ರೆಸ್​ ನಾಯಕ ನವಜೋತ್​ ಸಿಂಗ್​ ಸಿಧುಗೆ 1 ವರ್ಷ ಜೈಲು ಶಿಕ್ಷೆ ವಿಧಿಸಿದ ಸುಪ್ರೀಂಕೋರ್ಟ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fourteen − seven =
Remember me
