ಭೋಪಾಲ್​:ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರೊಬ್ಬರು ಮಕ್ಕಳಿಗೆ ಪಾಠ ಮಾಡದೆ ಅವರ ಬ್ಯಾಗನ್ನು ತಲೆ ದಿಂಬು ಮಾಡಿಕೊಂಡು ನಿದ್ರಿಸುತ್ತಿರುವ ಘಟನೆ ಮಧ್ಯಪ್ರದೇಶದ ಛತ್ತರ್​ಪುರ ಜಿಲ್ಲೆಯ ಲವಕುಶ ನಗರದಲ್ಲಿ ನಡೆದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಮುಖ್ಯೋಪಾಧ್ಯಾಯ ಕ್ಲಾಸ್​ ರೂಮಿನಲ್ಲಿ ಮಲಗಿರುವುದು ಕಂಡು ಬಂದರೆ ಇತ್ತ ವಿದ್ಯಾರ್ಥಿಗಳು ಶಾಲೆಯ ಸ್ವಚತೆಯಲ್ಲಿ ತೊಡಗಿರುವುದು ಕಂಡು ಬರುತ್ತದೆ.
मध्यप्रदेश छतरपुर@ChouhanShivrajआप की भांजीया झाड़ू लगा रही हैं व मारसब भांजियो के बस्ते से को तकिया बना कर सो रहे हैं,,,,#वीडियोवायरल,जिला शिक्षा अधिकारी ने दिए जांच के निर्देश,,@ABPNews@brajeshabpnews@INCMP@schooledumppic.twitter.com/JP8nHFz0PM
ಇದನ್ನೂ ಓದಿ:ಕಾರು ಕೊಡಲಿಲ್ಲವೆಂದು ಮದುವೆಯಾದ ಎರಡೇ ಘಂಟೆಗಳಲ್ಲಿ ತಲಾಖ್​
ಛತ್ತರ್​ಪುರ ಜಿಲ್ಲೆಯ ಲವಕುಶನಗರದಲ್ಲಿರುವ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯ ರಾಜೇಶ್​ ಕುಮಾರ್​ ಅಡ್ಜಾರಿಯಾ ತರಗತಿಗಳನ್ನು ಸರಿಯಾಗಿ ತೆಗೆದುಕೊಳ್ಳುತ್ತಿಲ್ಲ ಎಂದು ವಿದ್ಯಾರ್ಥಿಗಳು ತಮ್ಮ ಪೋಷಕರ ಬಳಿ ದೂರಿದ್ದರು. ಈ ಬಗ್ಗೆ ವಿಚಾರಿಸಲೆಂದು ಶಾಲೆಗೆ ಬಂದಾಗ ಶಿಕ್ಕಷನ ನಿಜ ಬಣ್ಣ ಬಯಲಾಗಿದ್ದು, ಪೋಷಕರು ಘಟನೆಯನ್ನು ತಮ್ಮ ಮೊಬೈಲ್ ಪೋನಿನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಇತ್ತ ವಿಡಿಯೋ ವೈರಲ್​ ಆಗುತ್ತಿದ್ದಂತೆ ಮುಖೋಪಾಧ್ಯಾಯನ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹ ಕೇಳಿ ಬಂದಿದ್ದು, ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ತಪ್ಪಿತಸ್ಥನನ್ನು ಅಮಾನತ್ತಿನಲ್ಲಿರಿಸಿ ವಿಸ್ತೃತ ತನಿಖೆಗೆ ಆದೇಶಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 11 =
Remember me
