ಕೊಚ್ಚಿ:ಕೆಲಸದ ಹೊರೆ ತಾಳಲಾರದೆ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಸಾವಿನ ಹಾದಿ ಹಿಡಿದಿರುವ ಘಟನೆ ಕೇರಳದ ವಯಕೋಮ್​ನಲ್ಲಿ ನಡೆದಿದೆ.
ಮೃತಳನ್ನು ಕೆ ಶ್ರೀಜಾ (48) ಎಂದು ಗುರುತಿಸಲಾಗಿದೆ. ಈಕೆ ವಯಕೋಮ್​ನ ಪೊಲಸ್ಸೆರಿ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಶುಕ್ರವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲಸದ ಹೊರೆ ತಾಳಲಾರದೆ ಬಡ್ತಿ ರದ್ದುಗೊಳಿಸುವಂತೆ ಶಿಕ್ಷಣ ಸಚಿವರಿಗೆ ಶ್ರೀಜಾ ಅವರು ಮನವಿ ಮಾಡಿದ್ದರು. ಆದರೆ, ಮನವಿಯನ್ನು ತಿರಸ್ಕರಿಸಿದ ಪರಿಣಾಮ ಆಕೆ ಖಿನ್ನತೆಗೆ ಒಳಗಾಗಿದ್ದಳು ಎಂದು ಸಂಬಂಧಿಕರು ದೂರಿದ್ದಾರೆ.
ವೈಯಕಂ ಬಾಲಕಿಯರ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಶ್ರೀಜಾ ಅವರು ಜೂ.1ರಂದು ಕೀಜೂರು ಜಿಎಲ್‌ಪಿಎಸ್‌ ಮುಖ್ಯೋಪಾಧ್ಯಾಯಿನಿಯಾಗಿ ಬಡ್ತಿ ಹೊಂದಿದ್ದರು. ಮರುದಿನವೇ ಕೆಲಸಕ್ಕೆ ಸೇರಿದ್ದರು. ಹೆಚ್ಚಿನ ಜವಾಬ್ದಾರಿಯುತ ಕೆಲಸದ ಒತ್ತಡ ತಾಳಲಾರದೆ ರಜೆ ತೆಗೆದುಕೊಂಡಿದ್ದರು. ಇದಾದ ಬಳಿಕ ಜುಲೈ 7 ರಂದು ಶಿಕ್ಷಣ ಸಚಿವರಿಗೆ ಅರ್ಜಿಯನ್ನು ಸಲ್ಲಿಸಿ ತನ್ನ ಪತಿಯ ಆರೋಗ್ಯ ಸಮಸ್ಯೆಗಳನ್ನು ಉಲ್ಲೇಖಿಸಿ ಬಡ್ತಿಯನ್ನು ರದ್ದುಗೊಳಿಸುವಂತೆ ಕೇಳಿದ್ದರು. ಆಕೆ ಹಿಂದೆ ವೈಯಕಂನಲ್ಲಿ ಕೆಲಸ ಮಾಡುತ್ತಿದ್ದ ಶಾಲೆಯಲ್ಲಿ ಶಿಕ್ಷಕಿಯಾಗಿ ನೇಮಿಸಬೇಕೆಂಬುದು ಆಕೆಯ ಬೇಡಿಕೆಯಾಗಿತ್ತು. ಆದರೆ, ಅರ್ಜಿಯನ್ನು ಪರಿಗಣಿಸಲು ನಿಯಮದಲ್ಲಿ ಅವಕಾಶವಿಲ್ಲ ಎಂದು ಕುರವಿಲಂಗಾಡ್ ಉಪಜಿಲ್ಲಾ ಶಿಕ್ಷಣಾಧಿಕಾರಿ ಶ್ರೀಜಾ ಅವರಿಗೆ ಉತ್ತರಿಸಿದ್ದರು.
ಮನವಿ ತಿರಸ್ಕರಿಸಿದ್ದರಿಂದ ತೀವ್ರವಾಗಿ ಮನನೊಂದಿದ್ದ ಶ್ರೀಜಾ ಕೆಲವು ದಿನಗಳವರೆಗೆ ಸರಿ ಹೋಗಬಹುದು ಅಂತಾ ಹೇಗೋ ಕೆಲಸ ಮಾಡಿಕೊಂಡು ಬಂದಿದ್ದರು. ಆದರೆ, ಕೆಲಸದ ಹೊರೆ ಕಡಿಮೆಯಾಗದ ಕಾರಣ, ತೀವ್ರವಾಗಿ ಮನನೊಂದು ಶುಕ್ರವಾರ ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ವಯಕಂ ಮುನ್ಸಿಫ್ ನ್ಯಾಯಾಲಯದ ಉದ್ಯೋಗಿಯಾಗಿರುವ ತಮ್ಮ ಪತಿ ರಮೇಶ್ ಕುಮಾರ್ ಹಾಗೂ ಮಗ ಕಾರ್ತಿಕ್ ಅವರನ್ನು ಅಗಲಿದ್ದಾರೆ.(ಏಜೆನ್ಸೀಸ್​)
ಈ ಗ್ರಾಮದಲ್ಲಿ ಯಾರೊಬ್ಬರು ನಾನ್​ ವೆಜ್​ ಸೇವಿಸುವುದಿಲ್ಲ! ಒಂದು ವೇಳೆ ಸೇವಿಸಿದ್ರೆ ಇದು ನಡೆದೇ ನಡೆಯುತ್ತಂತೆ

ರಾಜ್ಯದ ಗುಪ್ತಚರ ವಿಭಾಗ ಮತ್ತು ಗೃಹ ಇಲಾಖೆ ವೈಫಲ್ಯ ಮತ್ತೊಮ್ಮೆ ಸಾಬೀತು: ಸಿದ್ದರಾಮಯ್ಯ

ಹಳ್ಳಿಹಳ್ಳಿಗಳಲ್ಲೂ ನವೋದ್ಯಮ: ವಿವೇಕಾನಂದ ಯುವ ಸಂಘಗಳ ಮೂಲಕ ಜಾರಿ; 7 ಲಕ್ಷ ಉದ್ಯೋಗ ಸೃಷ್ಟಿ

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
Sign in to your account
Please enter an answer in digits:one × 2 =
Remember me
