ಭುವನೇಶ್ವರ್​:​ಮುಖ್ಯಶಿಕ್ಷಕಿಯ ಅನುಪಸ್ಥಿತಿಯಲ್ಲಿ ಅವರ ಮಗ ಶಾಲೆಗೆ ಆಗಮಿಸಿ ತರಗತಿ ನಡೆಸಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಆಕ್ರೋಶಕ್ಕೆ ಗುರಿಯಾಗಿದೆ.
ಈ ಘಟನೆ ಒಡಿಶಾದ ಭದ್ರಕ್​ ಜಿಲ್ಲೆಯ ಗೋಪಾಲಪುರ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಮುಖ್ಯಶಿಕ್ಷಕಿಯ ಹೆಸರನ್ನು ಮಮತಾ ದಾಸ್​ ಎಂದು ಗುರುತಿಸಲಾಗಿದೆ. ಅವರ ಗೈರು ಹಾಜರಿಯ ವೇಳೆ ಅವರ ಬದಲಾಗಿ ಪುತ್ರ ತರಗತಿ ನಡೆಸಿದ್ದಾರೆ. ಈ ಪ್ರಕರಣ ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿದೆ.
ಇದನ್ನೂ ಓದಿ:ಮೊಬೈಲ್​​ ಚಾರ್ಜ್​​ಗೆ ಹಾಕಿ ಮಾತನಾಡುವಾಗ ಸ್ಫೋಟ: ಸ್ಥಳದಲ್ಲೇ ಪ್ರಾಣ ಬಿಟ್ಟ ವೃದ್ಧ
ತರಗತಿಯಲ್ಲಿನ ಅವ್ಯವಸ್ಥೆಯ ಬಗ್ಗೆ ಕೇಳಿ ನಾನು ಶಾಲೆಗೆ ಹೋದೆ. ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯಿನಿಯ ಮಗ ತರಗತಿ ತೆಗೆದುಕೊಳ್ಳುತ್ತಿದ್ದನು. ನಾನು ವಿಚಾರಿಸಿದಾಗ ಶಿಕ್ಷಕಿಯೊಬ್ಬರು ರಜೆಯಲ್ಲಿರುವುದು ಕಂಡು ಬಂದಿದ್ದು, ಮುಖ್ಯೋಪಾಧ್ಯಾಯಿನಿಯು ಸಹ ಹಾಜರಿರಲಿಲ್ಲ ಎಂದು ಗ್ರಾಮಸ್ಥ ರಮಾಕಾಂತ್​ ಬ್ಯಾರಿಕ್ ತಿಳಿಸಿದರು.
ಮುಖ್ಯಶಿಕ್ಷಕಿ ಏಕೆ ಬಂದಿಲ್ಲ ಎಂದು ನಾನು ಪ್ರಶ್ನೆ ಮಾಡಿದಾಗ ಅವರಿಗೆ ಬೇರೆ ಕೆಲಸ ಇರುವುದರಿಂದ ಬರಲು ಆಗಿಲ್ಲ ಎಂದು ಆಕೆಯ ಪುತ್ರ ಸಮಜಾಯಿಷಿ ನೀಡಿದರು ಎಂದು ಬ್ಯಾರಿಕ್​ ಹೇಳಿದರು.
ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿರುವ ಮುಖ್ಯೋಪಾಧ್ಯಾಯಿನಿ, ಅಪಘಾತಕ್ಕೀಡಾದ ನಂತರ ಚಿಕಿತ್ಸೆ ಪಡೆಯುತ್ತಿರುವ ತನ್ನ ಇನ್ನೊಬ್ಬ ಮಗನ ಜೊತೆಯಲ್ಲಿದ್ದ ಕಾರಣ ತನ್ನ ಮಗನನ್ನು ಶಾಲೆ ತೆರೆಯಲು ಕಳುಹಿಸಿದ್ದೆ ಎಂದು ಹೇಳಿದರು.
ನನ್ನು ಹಿರಿಯ ಮಗ ಅಪಘಾತದಿಂದ ಗಾಯಗೊಂಡು ಭದ್ರಕ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನಾನು ಆತನೊಂದಿಗೆ ಇದ್ದೆ. ನಾನು ಶಾಲೆಗೆ ಹೋಗುವುದು ತಡವಾಗಬಹುದು ಅಂತ ನನ್ನ ಇನ್ನೊಬ್ಬ ಮಗನ ಕೈಯಲ್ಲಿ ಶಾಲೆ ತೆರೆಯಲೆಂದು ಬೀಗ ಕೊಟ್ಟು ಕಳುಹಿಸಿದ್ದೆ. ನನ್ನ ಮಗ ಯಾವುದೇ ತರಗತಿಯನ್ನು ತೆಗೆದುಕೊಂಡಿಲ್ಲ ಎಂದು ಮುಖ್ಯಶಿಕ್ಷಕಿ ಮಮತಾ ದಾಸ್​ ಸಮರ್ಥನೆ ನೀಡಿದರು.
ಇದನ್ನೂ ಓದಿ:ಬಸ್​ ನಿಲ್ದಾಣದಲ್ಲಿ ನಿಂತಿದ್ದ ಯುವತಿ ಕೆನ್ನೆಗೆ ಬಾರಿಸಿದ ಯುವಕ! ನಂತರ ನಡೆದಿದ್ದು ಮತ್ತೊಂದು ಎಡವಟ್ಟು
ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಪ್ರಣಯ್​ ನಾಯಕ್​ ಮಾತನಾಡಿ, ತಪ್ಪು ಎಸಗಿರುವುದು ಸಾಬೀತಾದರೆ ಕಠಿಣ ಕ್ರಮ ಜರುಗಿಸುವುದಾಗಿ ತಿಳಿಸಿದರು. ಅಲ್ಲದೆ, ಆರೋಪದ ಸತ್ಯಾಸತ್ಯತೆ ಅರಿಯಲು ತನಿಖೆ ನಡೆಸುವುದಾಗಿ ಹೇಳಿದರು.(ಏಜೆನ್ಸೀಸ್​)
ಸರ್ಕಾರಿ ನೌಕರರಿಗೆ 17% ವೇತನ ಹೆಚ್ಚಳ; ಬೊಕ್ಕಸಕ್ಕೆ ಬೀಳುವ ಹೊರೆಯೆಷ್ಟು? ಇಲ್ಲಿದೆ ಮಾಹಿತಿ…

17% ವೇತನ ಹೆಚ್ಚಳಕ್ಕೆ ಒಪ್ಪಿಗೆ; ಮುಷ್ಕರ ವಾಪಸ್ ಪಡೆದ ಸರ್ಕಾರಿ ನೌಕರರು

ಯಡಿಯೂರಪ್ಪ ಜೈಲಿಗೆ ಹೋಗಲು ಕಾಂಗ್ರೆಸ್ ಕಾರಣ: ಆರ್.ಅಶೋಕ್ ವಾಗ್ದಾಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 7 =
Remember me
