ನವದೆಹಲಿ:ಯಾವುದೇ ದೇಶದ ಆರೋಗ್ಯ ಕ್ಷೇತ್ರ ಎಷ್ಟು ಪ್ರಾಮುಖ್ಯತೆ ಪಡೆದಿದೆ ಎನ್ನುವುದು ಈ ಸಂದರ್ಭದಲ್ಲಿ ಎಲ್ಲರಿಗೂ ಮನದಟ್ಟಾಗುತ್ತಿದೆ. ಆದರೆ, ದೇಶದ ಸ್ಮಾರ್ಟ್​ ಸಿಟಿ ಯೋಜನೆಗಳಲ್ಲಿ ಈ ಕ್ಷೇತ್ರ ಲೆಕ್ಕಕ್ಕೆ ಇಲ್ಲದಂತಾಗಿದೆ.
ದೇಶಾದ್ಯಂತ 100 ಸ್ಮಾರ್ಟ್​ ಸಿಟಿಗಳನ್ನು ನಿರ್ಮಿಸಲಾಗುತ್ತಿದೆ. ಇದಕ್ಕಾಗಿ 2,05,018 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ಆದರೆ, ಇದರಲ್ಲಿ ಆರೋಗ್ಯ ಕ್ಷೇತ್ರ ಹಾಗೂ ಅದಕ್ಕೆ ಸಂಬಂಧಿಸಿದ ಸಾಮರ್ಥ್ಯವೃದ್ಧಿಗಾಗಿ ಖರ್ಚಾಗುತ್ತಿರೋದು ಕೇವಲ 2112 ಕೋಟಿ ರೂ.ಗಳಷ್ಟೇ. ಅಂದರೆ ಒಟ್ಟಾರೆ ಮೊತ್ತದ ಶೇ.1ರಷ್ಟು ಮೊತ್ತ ಮಾತ್ರ ಇದಕ್ಕಾಗಿ ವೆಚ್ಚವಾಗುತ್ತಿದೆ. ಇದೊಂದು ಆಘಾತಕಾರಿ ಸಂಗತಿ ಎಂದೇ ವಿಶ್ಲೇಷಿಸಲಾಗುತ್ತಿದೆ.
ಸ್ಮಾರ್ಟ್​ ಸಿಟಿ ಯೋಜನೆಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ರಸ್ತೆ, ಸಾರಿಗೆ ವಿದ್ಯುತ್​, ನೀರು ಪೂರೈಕೆ, ಚರಂಡಿ, ಬೀದಿದೀಪ ಪಾರ್ಕಿಂಗ್​, ತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಮೊದಲಾದವುಗಳನ್ನು ಕಲ್ಪಿಸಲಾಗುತ್ತಿದೆ. ಆದರೆ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಕಾಮಗಾರಿ ಅಥವಾ ಯೋಜನೆಗಳು ನಗಣ್ಯ ಎನ್ನುವಂತಾಗಿದೆ.
ಇದನ್ನೂ ಓದಿ;ಸಂಬಳ ನೀಡಲು ಟಿಟಿಡಿ ಆಸ್ತಿ ಮಾರಾಟ ವಿರೋಧಿಸಿ ಆನ್​ಲೈನ್​ ಅಭಿಯಾನ
ಎಲ್ಲಕ್ಕೂ ಮುಖ್ಯವಾಗಿ 100 ಸ್ಮಾರ್ಟ್​ ಸಿಟಿಗಳ ಪೈಕಿ 45 ನಗರಗಳಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಯೋಜನೆಗಳೇ ಇಲ್ಲ. ಇನ್ನು, 55 ಸ್ಥಳಗಳಲ್ಲಿ ನಡೆಯುತ್ತಿರುವ ಯೋಜನೆಗಳಲ್ಲಿ 69 ಕಾಮಗಾರಿಗಳಲ್ಲಷ್ಟೇ ಆರೋಗ್ಯ ವಲಯಕ್ಕೆ ಸಂಬಂಧಿಸಿವೆ. ಇನ್ನೂ ವಿವರಿಸಿ ಹೇಳುವುದಾದರೆ, ಒಟ್ಟಾರೆ 5,861 ರ ಪೈಕಿ 69 ಕಾಮಗಾರಿಗಳು ಮಾತ್ರ ಆರೋಗ್ಯ ಕ್ಷೇತ್ರದವು. ಸಾರ್ವಜನಿಕವಾಗಿ ಲಭ್ಯವಿರುವ ಯೋಜನೆಯ ಮಾಹಿತಿ ಆಧರಿಸಿ ಈ ಅಂಕಿ-ಅಂಶ ಪಡೆಯಲಾಗಿದೆ.
ಈ ಯೋಜನೆಯಡಿ 100 ಕೋಟಿ ರೂ.ಗೂ ಅಧಿಕ ಮೊತ್ತದ 491 ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ ಮೂರು ಮಾತ್ರ ಆರೋಗ್ಯ ಮೂಲ ಸೌಕರ್ಯಕ್ಕೆ ಸಂಬಂಧಿಸಿದೆ. ಕರ್ನಾಟಕದ ಬೆಳಗಾವಿ, ತುಮಕೂರು (ತಲಾ 350 ಕೋಟಿ ರೂ.) ಹಾಗೂ ತಮಿಳುನಾಡಿನ ಈರೋಡ್​ನಲ್ಲಿ 370 ಕೋಟಿ ರೂ. ವೆಚ್ಚದ ಯೋಜನೆ ನಡೆಸಲಾಗುತ್ತಿದೆ.
ಕೇಂದ್ರ ಸರ್ಕಾರವು 2015ರಲ್ಲಿ ಐದು ವರ್ಷದ ಈ ಯೋಜನೆಯನ್ನು ಆರಂಭಿಸಿತ್ತು. ನೂರು ನಗರಗಳನ್ನು ನಾಲ್ಕು ಹಂತದಲ್ಲಿ ಆಯ್ಕೆ ಮಾಡಲಾಗಿತ್ತು. ಶಿಕ್ಷಣ ಮತ್ತು ಆರೋಗ್ಯ ವಲಯವು ಈ ಯೋಜನೆಯ ಪ್ರಮುಖ ಹತ್ತು ಮೂಲಸೌಕರ್ಯ ಆದ್ಯತೆಗಳಲ್ಲಿ ಸೇರಿದ್ದವು. ಆದರೆ ಈವರೆಗ ಖರ್ಚಾಗಿರುವ ಮೊತ್ತವನ್ನು ಪರಿಗಣಿಸಿದರೆ ಆರೋಗ್ಯ ಕ್ಷೇತ್ರವೂ ಕಡೆಗಣನೆಗೆ ಒಳಗಾಗಿರುವುದು ಗೊತ್ತಾಗುತ್ತದೆ.
ಇದನ್ನೂ ಓದಿ;ಭಾರತವನ್ನು ಕೆಣಕಿದವನ ವಿರುದ್ಧ ಸಮರಕ್ಕೆ ನಿಂತ ಸುಬ್ರಮಣಿಯನ್​ ಸ್ವಾಮಿ
ಇನ್ನು ಕೋವಿಡ್​ ಲೆಕ್ಕಾಚಾರಕ್ಕೆ ಬರುವುದಾದರೆ, ಸರ್ಕಾರ ಲೆಕ್ಕಹಾಕಿರುವ ಪ್ರಕಾರ 39 ಸ್ಥಳೀಯಾಡಳಿತ ಪ್ರದೇಶಗಳ ವ್ಯಾಪ್ತಿಯಲ್ಲಿ ಶೇ.79 ಕರೊನಾ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಅದರಲ್ಲಿ 17 ಸ್ಥಳಗಳಲ್ಲಿ ಸ್ಮಾರ್ಟ್​ ಸಿಟಿ ಯೋಜನೆಗಳು ನಡೆಯುತ್ತಿವೆ. ಈ ಪೈಕಿ ಏಳರಲ್ಲಿ ಮಾತ್ರ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಯೋಜನೆಗಳಿವೆ. ಇನ್ನಷ್ಟು ವಿವರಿಸಿ ಹೇಳುವುದಾದರೆ, ಈ 17 ನಗರಗಳಲ್ಲಿ ನಡೆಯುತ್ತಿರುವ ಒಟ್ಟಾರೆ 674 ಪ್ರಾಜೆಕ್ಟ್​ಗಳಲ್ಲಿ 11 ಪ್ರಾಜೆಕ್ಟ್​ಗಳು ಮಾತ್ರ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿವೆ.
ಭೋಪಾಲ್​, ಥಾಣೆ, ಸೂರತ್​, ಚೆನ್ನೈ, ಜೈಪುರ ಕರೊನಾದ ಹಾಟ್​ಸ್ಪಾಟ್​ಗಳಾಗಿವೆ. ಆದರೆ, ಇಲ್ಲಿನ ಸ್ಮಾರ್ಟ್​ ಸಿಟಿ ಯೋಜನೆಗಳಲ್ಲಿ ಈ ನಗರಗಳು ಆರೋಗ್ಯಕ್ಕೆ ಸಂಬಂಧಿಸಿದ ಪ್ರಾಜೆಕ್ಟ್​ಗಳನ್ನು ಕೈಗೊಂಡಿಲ್ಲ. ಇನ್ನು ಮುಂದೆ ಆಯಾ ನಗರಗಳ ಆದ್ಯತೆಗಳು ಬದಲಾಗಲಿರುವುದಂತೂ ಖಚಿತ.
ವುಹಾನ್​ ವೈರಸ್ ಕರೊನಾ​ಗೆ ಚೀನಿಯರಿಂದಲೇ ಮದ್ದು, ಲಸಿಕೆ ಯಶಸ್ವಿ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 4 =
Remember me
