ನವದೆಹಲಿ:ಬ್ರಿಟನ್​ನಲ್ಲಿ ಹೊಸ ಮಾದರಿಯ ಕೋವಿಡ್ 19 ಸೋಂಕು ಕಾಣಿಸಿಕೊಂಡ ಕಾರಣ ಕೇಂದ್ರ ಸರ್ಕಾರ ಇಂದು ಆರೋಗ್ಯ ಸಚಿವಾಲಯದ ಜಾಯಿಂಟ್ ಮಾನಿಟರಿಂಗ್​ ಗ್ರೂಪ್​ನ ಸದಸ್ಯರ ತುರ್ತುಸಭೆ ಕರೆದಿದೆ. ಬ್ರಿಟನ್​ನಲ್ಲಿ ರೂಪಾಂತರಗೊಂಡಿರುವ ಕರೊನಾ ವೈರಸ್ ಹರಡುತ್ತಿರುವ ಕೋವಿಡ್ 19 ಕಾಣಿಸಿಕೊಂಡಿದ್ದು, ಅದು ಶೇಕಡ 70 ಹೆಚ್ಚು ಅಪಾಯಕಾರಿ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಈ ತುರ್ತು ಸಭೆಯನ್ನು ಆಯೋಜಿಸಿದೆ.
ಆರೋಗ್ಯ ಸೇವೆಗಳ ಮಹಾನಿರ್ದೇಶಕ (ಡಿಜಿಎಚ್​ಎಸ್​) ಈ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಸಭೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಭಾರತದ ಪ್ರತಿನಿಧಿ ಡಾ.ರೊಡೆರಿಕೋ ಎಚ್​ ಓಫ್ರಿನ್​ ಅವರು ಭಾಗವಹಿಸಲಿದ್ದಾರೆ. ಇವರು ಕೂಡ ಜಾಯಿಂಟ್ ಮಾನಿಟರಿಂಗ್ ಗ್ರೂಪಿನ ಸದಸ್ಯರಾಗಿರುತ್ತಾರೆ. ಸಭೆಯಲ್ಲಿ ಬ್ರಿಟನ್​ನಲ್ಲಿ ಉದ್ಭವಿಸಿರುವ ಹೊಸ ಮಾದರಿ ಕೋವಿಡ್ 19 ಸೋಂಕಿನ ವಿಚಾರ ಚರ್ಚಿಸಲ್ಪಡಲಿದೆ.
ಇದನ್ನೂ ಓದಿ:ವೋಟ್ ಹಾಕೋಕೆ ಬಂದ್ರೆ ನೆಟ್ಟಗಿರಲ್ಲ ಅಂದ್ರು, ಪರಿಣಾಮ ನಾಳೆಯ ಚುನಾವಣೆ ಬಹಿಷ್ಕರಿಸಿದ ಗ್ರಾಮಸ್ಥರು
ಬ್ರಿಟನ್​ನಲ್ಲಿ ಹೊಸ ಮಾದರಿಯ ಕೋವಿಡ್ 19 ಸೋಂಕು ತೀವ್ರ ಸ್ವರೂಪದಲ್ಲಿ ಹರಡುತ್ತಿರುವ ಕಾರಣ ಕಠಿಣ ನಿರ್ಬಂಧಗಳನ್ನು ಅಲ್ಲಿನ ಸರ್ಕಾರ ಈಗಾಗಲೇ ಹೇರಿದೆ. ಲಂಡನ್​ ಮತ್ತು ಸದರ್ನ್​ ಇಂಗ್ಲೆಂಡ್ ಪ್ರದೇಶಗಳಲ್ಲಿ ಮತ್ತೊಂದು ಆವೃತ್ತಿ ಬಹುತೇಕ ಲಾಕ್​ಡೌನ್ ಸ್ಥಿತಿ ನಿರ್ಮಾಣವಾಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. (ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ರೂಪಾಂತರಗೊಂಡ ಕರೊನಾ ವೈರಸ್​: ಭಾನುವಾರ ಒಂದೇ ದಿನ 35,928 ಕೇಸ್, 326 ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
