ನವದೆಹಲಿ:ಹಲವಾರು ಕೇಂದ್ರ ಮತ್ತು ನಗರ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಕಾರ್ಯಕರ್ತರು ಕೋವಿಡ್- 19 ರೋಗಿಗಳ ಚಿಕಿತ್ಸೆ ನೀಡುವ ಕರ್ತವ್ಯ ಮುಗಿದ ನಂತರ ತಮ್ಮ ಕ್ವಾರಂಟೈನ್ ಅವಧಿ ಮುಗಿಸಬೇಕೆಂಬ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಶುಕ್ರವಾರ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.ಹಲವು ಆಸ್ಪತ್ರೆಗಳು ಕ್ವಾರಂಟೈನ್ ಅವಧಿಯಲ್ಲಿ ಹೊಟೆಲ್​​ಗಳಲ್ಲಿ ಉಳಿದುಕೊಂಡಿರುವ ಆರೋಗ್ಯ ಕಾರ್ಯಕರ್ತರಿಗೆ ಶೀಘ್ರವೇ ಕೊಠಡಿ ಖಾಲಿ ಮಾಡಲು ತಿಳಿಸುತ್ತಿದ್ದು, ತಪ್ಪಿದಲ್ಲಿ ಅವರ ಸಂಬಳದಲ್ಲಿ ಕಡಿತಗೊಳಿಸಲಾಗುತ್ತದೆ ಎಂದು ತಿಳಿಸಿವೆ.
ಇದನ್ನೂ ಓದಿ:Video ] ಮಣ್ಣಿನ ಸ್ನಾನದಲ್ಲಿ ಬಿಜಿಯಾಗಿರುವ ಗಜರಾಜ
ಮೇ 15 ರಂದು ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ಕೋವಿಡ್ -19 ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಆರೋಗ್ಯ ಕಾರ್ಯಕರ್ತರು ಪಿಪಿಇ ಕೊರತೆ ಅಥವಾ ಇತರ ಯಾವುದೇ ಹೆಚ್ಚಿನ ಅಪಾಯ ಇಲ್ಲದಿದ್ದಲ್ಲಿ ಕ್ವಾರಂಟೈನ್​​ನಲ್ಲಿರಬೇಕಾದ ಅಗತ್ಯವಿಲ್ಲ.ಈ ಹಿನ್ನೆಲೆ ಕೋವಿಡ್-19 ಚಿಕಿತ್ಸೆಯಲ್ಲಿ ಪ್ರಮುಖವಾಗಿರುವ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಹೊಸ ಮಾರ್ಗಸೂಚಿಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಕೋವಿಡ್-19 ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿರುವ ಎಲ್ಲ ಆರೋಗ್ಯ ಕಾರ್ಯಕರ್ತರಿಗೆ ಸೂಕ್ತ ಕ್ವಾರಂಟೈನ್ ಹಾಗೂ ಪರೀಕ್ಷಾ ವಿಧಾನ ಸೇರಿ ಮತ್ತಿತರ ಬೇಡಿಕೆಗಳಿಗೆ ಒತ್ತಾಯಿಸಿ ರೆಸಿಡೆಂಟ್ ವೈದ್ಯರ ಸಂಘ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಗೆ ಕರೆ ನೀಡಿತ್ತು.  ‘
ಇದನ್ನೂ ಓದಿ:VIDEO ] ಮಾತೃಶಕ್ತಿಗೆ ಸೋತ ನಾಗರಹಾವು
ಕರೊನಾ ವೈರಸ್ ಸುಮಾರು 2-14 ದಿನಗಳವರೆಗೆ ಜೀವಂತವಾಗಿರಲಿದ್ದು, ಕೋವಿಡ್- 19 ಚಿಕಿತ್ಸೆಯಲ್ಲಿ ನಿರತರಾಗಿರುವ ವೈದ್ಯರಿಗೆ ಎರಡನೇ ಪರೀಕ್ಷೆ ಹಾಗೂ ಅದರ ನಂತರದ ಪರೀಕ್ಷೆಯಲ್ಲಿ ಕೂಡ ಸೋಂಕು ಪತ್ತೆಯಾದ ಹಲವು ಉದಾಹರಣೆಗಳಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಪರಿಷ್ಕರಿಸಬೇಕೆಂದು ಒಕ್ಕೂಟ ಆರೋಗ್ಯ ಸಚಿವ ಹರ್ಷವರ್ಧನ್ ಅವರಿಗೆ ತಿಳಿಸಿದೆ.ಸದ್ಯದ ಪರಿಸ್ಥಿತಿಯಲ್ಲಿ ಕೋವಿಡ್ -19 ಚಿಕಿತ್ಸೆ ನೀಡುತ್ತಿರುವ ಎಲ್ಲ ವೈದ್ಯರು ಕುಟುಂಬ ವರ್ಗದವರಲ್ಲಿ ಕರೊನಾ ವೈರಸ್ ಹರಡುವುದನ್ನು ತಡೆಗಟ್ಟಲು, ವೈದ್ಯರು ತಮ್ಮ ಕರ್ತವ್ಯ ಮುಗಿದ ನಂತರ ಸೂಕ್ತ ಪರೀಕ್ಷೆಯ ಜತೆಗೆ 7 ದಿನ ಕ್ವಾರಂಟೈನ್ ನಲ್ಲಿರಬೇಕಾದುದು ಅವಶ್ಯವಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಡಾ. ಶಿವಾಜಿ ದೇವ್ ಬರ್ಮನ್ ತಿಳಿಸಿದ್ದಾರೆ.
ಕಲೆಗೆ ಧರ್ಮದ ಹಂಗಿಲ್ಲ ಎಂದು ಸಾಬೀತುಪಡಿಸಿದ ಮುಸ್ಲಿಂ ಮಹಿಳೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
