ಲಖನೌ:ಜನರು ಕುಸಿದು ಬಿದ್ದು ಸಾವಿಗೀಡಾಗುತ್ತಿರುವ ಪ್ರಕರಣಗಳು ದೇಶಾದ್ಯಂತ ಹೆಚ್ಚಾಗುತ್ತಿರುವುದರಿಂದ ಕಳೆದ ಕೆಲ ದಿನಗಳಿಂದ ಟ್ವಿಟರ್​ನಲ್ಲಿ ಹಾರ್ಟ್​ ಅಟ್ಯಾಕ್ ಟ್ರೆಂಡಿಂಗ್​ನಲ್ಲಿತ್ತು. ಇದೀಗ ಅಂಥದ್ದೇ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ. ಯುವಕನೊಬ್ಬ ಸ್ನೇಹಿತರೊಂದಿಗೆ ನಡೆದುಕೊಂಡು ಹೋಗುತ್ತಿರುವಾಗಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಉತ್ತರ ಪ್ರದೇಶದ ಮೀರತ್​ನಲ್ಲಿ ಈ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದ ದೃಶ್ಯ ಸಿಸಿಟಿವಿ ಕ್ಯಾಮರೆಯಾದಲ್ಲಿ ಸೆರೆಯಾಗಿದ್ದು, ಅದರ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ವಿಡಿಯೋದಲ್ಲಿ ಏನಿದೆ?ನಾಲ್ವರು ಯುವಕರು ರಾತ್ರಿ ಸಮಯದಲ್ಲಿ ಒಟ್ಟಿಗೆ ನಡೆದುಕೊಂಡು ಹೋಗುತ್ತಿರುತ್ತಾರೆ. ನೋಡಲು ಆರೋಗ್ಯಯುತವಾಗಿ ಕಾಣುವ ಓರ್ವ ಯುವಕ ಮೊದಲು ಸೀನುತ್ತಾನೆ. ಇದಾದ ಕೆಲವೇ ಕ್ಷಣಗಳಲ್ಲಿ ಆತ ಎದೆ ನೋವಿನಿಂದ ಸ್ನೇಹಿತನ ಭುಜಕ್ಕೆ ಒರಗಿ, ನಿಲ್ಲಲಾಗದೇ ದಿಢೀರ್​ ಕುಸಿದು ಕೆಳಗೆ ಬೀಳುತ್ತಾನೆ. ಕ್ಷಣಾರ್ಧದಲ್ಲಿ ಇದಿಷ್ಟು ಘಟನೆ ನಡೆದು ಹೋಗುತ್ತದೆ. ಏನಾಯಿತು ಎಂದು ಸ್ನೇಹಿತರು ಗಾಬರಿಯಿಂದ ನೋಡುವಷ್ಟರಲ್ಲಿ ಯುವಕನ ಪ್ರಾಣ ಪಕ್ಷಿ ಹಾರಿ ಹೋಗಿರುತ್ತದೆ.
Four friends went out for a walk in#Meerut. A 25-year-old man sneezed and died on the spot. From#heartattackHeart attack is very common way of death now a days, and it increasing day by day please careful about your health and avoid bad habitpic.twitter.com/IeYjdovEOG
— pratiksha (@Pratikshashrii)December 5, 2022

ಈ ಘಟನೆ ಮೀರತ್​ನಲ್ಲಿ ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ನಡೆದಿದೆ. ಕುಸಿದು ಬಿದ್ದ ಸ್ನೇಹಿತನನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿದಾದರೂ ಅಷ್ಟರಲ್ಲಾಗಲೇ ಆತನ ಪ್ರಾಣ ಹೋಗಿತ್ತು. ಈ ಘಟನೆಗೆ ಸಂಬಂಧಿಸಿದ ದೃಶ್ಯಗಳು ರಸ್ತೆಯಲ್ಲಿರುವ ಮನೆಯೊಂದರಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ನಂತರ ವೈರಲ್ ಆಗಿದೆ. ಸಾವು ಯಾವಾಗ ಬೇಕಾದರೂ ಬರಬಹುದು. ಕುಳಿತು ಟಿವಿ ನೋಡುವಾಗ ನೀವು ಕುಸಿಯಬಹುದು. ನೃತ್ಯ ಮಾಡುವಾಗ ಕುಸಿದು ಸಾಯಬಹುದು. ಸ್ನೇಹಿತರೊಂದಿಗೆ ಚಾಟ್ ಮಾಡುವಾಗ ಸಾಯಬಹುದು ಎಂದು ವೀಡಿಯೋ ನೋಡಿದವರು ಪ್ರತಿಕ್ರಿಯಿಸಿದ್ದಾರೆ.(ಏಜೆನ್ಸೀಸ್​)
ಹೋದ ಸಂದರ್ಶನದಲ್ಲಿ ಏಟು ತಿಂದಿದ್ದ ಕೆನ್ನೆಗೆ ಈ ಬಾರಿ ಸಿಹಿ ಮುತ್ತು! ಆಶು ರೆಡ್ಡಿ ಪಾದಕ್ಕೆ ಆರ್​ಜಿವಿ ಕಿಸ್​

ಕುಷ್ಟಗಿಯ ರೈತ ಸಂಪರ್ಕ ಅಧಿಕಾರಿ ನಾಪತ್ತೆ: ಗಂಡನನ್ನು ಹುಡುಕಿಕೊಡಿ ಎಂದು ಠಾಣೆ ಮೆಟ್ಟಿಲೇರಿದ ಪತ್ನಿ

ಪಬ್ಲಿಕ್​ನಲ್ಲಿ ಹೊಗೆ ಬಿಡೋ ಮುನ್ನ ಎಚ್ಚರ! ಸ್ಥಳಕ್ಕೇ ಬಂದು ದಂಡ ವಿಧಿಸ್ತಾರೆ… ಜನರೇ ಫೋಟೋ ತೆಗೆದು ಆಪ್​ಗೆ ಅಪ್​ಲೋಡ್ ಮಾಡಬಹುದು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen − twelve =
Remember me
