ಮುಂಬೈ:ಸತ್ತು ಬಿದ್ದಿದ್ದ ಮಗನಿಗೆ ರಾತ್ರಯಿಡೀ ಶುಶ್ರೂಷೆ ಮಾಡಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. ಬೆಳಗ್ಗೆ ಎಷ್ಟೊತ್ತಾದರೂ ಮಗ ಏಳದಿದ್ದನ್ನು ಕಂಡ ಮೇಲೆ ಅಕ್ಕ ಪಕ್ಕದವರಿಂದ ಆಕೆಗ ತನ್ನ ಮಗ ಸತ್ತಿದ್ದಾಗಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅದು ಮೇಘಾಲಯ ಮೂಲದ ಕುಟುಂಬ. ಇಬ್ಬರು ಗಂಡು ಮಕ್ಕಳು ಮತ್ತು ತಾಯಿ. ಒಬ್ಬ ಮಗನಿಗೆ ಕೈ ಕಾಲಿನಲ್ಲಿ ಸ್ವಾಧೀನವಿಲ್ಲ. ಕುಟುಂಬಕ್ಕೆ ಆಧಾರ ಸ್ಥಂಬವಾಗಿದ್ದೇ ಆ ಮಗ. ಲಾಕ್​ಡೌನ್​ ಸಮಯದಲ್ಲಿ ಆತನೂ ಕೆಲಸ ಕಳೆದುಕೊಂಡು, ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಇತ್ತೀಚೆಗೆ ರಾತ್ರಿ ಬಾತ್​ರೂಂಗೆ ಹೋದ ಮಗ ಕಾಲುಜಾರಿ ಬಿದ್ದಿದ್ದಾನೆ. ಅಲ್ಲಿಯೇ ಆತನ ಪ್ರಾಣ ಪಕ್ಷಿಯೂ ಹಾರಿ ಹೋಗಿದೆ.
ಸ್ವಲ್ಪ ಹೊತ್ತು ಬಿಟ್ಟು ಬಾತ್​ರೂಂಗೆ ತೆರಳಿದ ತಾಯಿಗೆ ಮಗ ಬಿದ್ದಿದ್ದು ಕಂಡಿದೆ. ಆತನನ್ನು ಕಷ್ಟ ಪಟ್ಟು ಹಾಲ್​ಗೆ ಎಳೆದು ತಂದಿದ್ದಾಳೆ. ಮಗನ ದೇಹದ ಮೇಲಾಗಿದ್ದ ಗಾಯಕ್ಕೆ ರಾತ್ರಿ ಪೂರ್ತಿ ಅರಿಶಿಣ ಹಾಕಿ ಬಟ್ಟೆ ಕಟ್ಟಿ ಶುಶ್ರೂಷೆ ಮಾಡಿದ್ದಾಳೆ. ಹಾಗೆಯೇ ಬೆಳಗ್ಗೆಯಾಗಿದೆ. ಬೆಳಗ್ಗೆ ಎಷ್ಟೊತ್ತಾದರೂ ಮಗ ಎದ್ದಿಲ್ಲ. ಚೂರು ಅಲುಗಾಡದೇ ಇದ್ದದ್ದನ್ನು ಕಂಡ ತಾಯಿ ಅಕ್ಕ ಪಕ್ಕದವರನ್ನು ಮತ್ತು ಸಂಬಂಧಿಗಳನ್ನು ಕರೆದಿದ್ದಾಳೆ. ಅವರು ಬಂದು ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಆತ ಸತ್ತು ಕೆಲ ಗಂಟೆಗಳಾಗಿರುವುದಾಗಿ ತಿಳಿಸಿದ್ದಾರೆ. (ಏಜೆನ್ಸೀಸ್​)
ಅಂಗವಿಕಲರನ್ನು ಮದುವೆಯಾದರೆ 2.5 ಲಕ್ಷ ರೂಪಾಯಿ ಪ್ರೋತ್ಸಾಹ ಧನ!

ಅತ್ತೆ ಮಾವನ ಜವಾಬ್ದಾರಿ ಅಳಿಯನಿಗೂ ಸೇರಿದ್ದು; ಅಳಿಯನಿಂದಲೂ ಜೀವನಾಂಶ ಪಡೆಯಬಹುದು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:17 − six =
Remember me
