ಭುವನೇಶ್ವರ್​: ಒಬ್ಬ ಮಹಿಳೆ ಎಷ್ಟೇ ಕ್ರೂರಿಯಾಗಿದ್ದರೂ ಕೂಡ ತನ್ನ ಮಕ್ಕಳ ವಿಚಾರದಲ್ಲಿ ಹಾಗಿರುವುದಿಲ್ಲ. ಆದರೆ ಇಲ್ಲೋರ್ವ ಮಹಿಳೆ ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿದ್ದಾಳೆ. ಅಷ್ಟೇ ಅಲ್ಲ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.ಈ ಮಹಿಳೆ ತನ್ನ 15 ತಿಂಗಳಗಂಡು ಮಗು ಹಾಗೂ ಅತ್ತೆಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್​ ಕೂಡ ಆಗಿದೆ.
ರೋಜಾಲಿನ್ ನಾಯಾಕ್​ ಎಂಬುದು ಈಕೆಯ ಹೆಸರು. ತನ್ನ ಪುಟ್ಟ ಮಗು ಮತ್ತು ಅತ್ತೆಯ ಮೇಲೆ ಹಲ್ಲೆ ನಡೆಸಿದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅದೇ ವಿಡಿಯೋ ಸೋಷಿಯಲ್​ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.
ತನ್ನದೇ ಸ್ವಂತ ಮಗುವಿಗೆ ಕೈ-ಕಾಲು ಕಟ್ಟಿ ಒದೆಯುವುದನ್ನು ವಿಡಿಯೋದಲ್ಲಿ ನೋಡಬಹುದು. ರೋಜಾಲಿನ್​​ಳ ಪತಿ ಚಕ್ರಧರ್​ ನಾಯಕ್ ತಮ್ಮ ಮನೆಯಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದರು. ತಾವು ಮನೆಯಲ್ಲಿ ಇಲ್ಲದ ಹೊತ್ತಲ್ಲಿ ಪತ್ನಿ ಮಗು ಹಾಗೂ ತನ್ನ ತಂದೆ- ತಾಯಿಗೆ ಹಿಂಸೆ ನೀಡುತ್ತಾಳೆ ಎಂಬುದನ್ನು ಅಕ್ಕಪಕ್ಕದ ಮನೆಯವರಿಂದ ಕೇಳಿದ್ದ ಅವರು, ಅದನ್ನು ಕಂಡುಹಿಡಿಯಲು ಈ ಉಪಾಯ ಕಂಡುಕೊಂಡಿದ್ದರು.
ನಾನು ಚಿಕ್ಕದೊಂದು ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದೇನೆ. ನಾನು ಅಂಗಡಿಗೆ ಬರುತ್ತಿದ್ದಂತೆ ಅಲ್ಲಿ ನನ್ನ ಹೆಂಡತಿ ನನ್ನ ತಂದೆ ತಾಯಿಗೆ ಹೊಡೆಯುತ್ತಾಳೆ ಎಂಬ ವಿಚಾರವನ್ನು ಕೆಲವರಿಂದ ಕೇಳಿದ್ದೆ ಹಾಗಾಗಿಯೇ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ:ಈ ಶಾಸಕಿ ಭಾರತದ ನಕ್ಷೆ ಕಾಪಿ-ಪೇಸ್ಟ್‌ ಮಾಡುವಾಗ ಕಾಶ್ಮೀರ ಬಿಟ್ಟುಹೋಯಿತಂತೆ!
ಈ ಬಗ್ಗೆ ಮಹಿಳೆ ಬೇರೆಯದೇ ಆರೋಪ ಮಾಡಿದ್ದಾರೆ. ನನ್ನನ್ನು ನನ್ನ ಗಂಡ ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ. ತಿನ್ನಲು ಆಹಾರವನ್ನೂ ಕೊಡುತ್ತಿಲ್ಲ ಎಂದು ಹೇಳಿದ್ದಾರೆ.
ಇದೀಗ ಪುರಿ ಮಕ್ಕಳ ಕಲ್ಯಾಣ ಸಮಿತಿ ಸ್ವಯಂ ಪ್ರೇರಿತವಾಗಿ ಕ್ರಮ ಕೈಗೊಂಡಿದೆ. ರೋಜಾಲಿನ್​ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಶೀಘ್ರವೇ ಬಂಧಿಸುವುದಾಗಿ ಹೇಳಿದ್ದಾರೆ. (ಏಜೆನ್ಸೀಸ್​)
ಡಿಜೆಹಳ್ಳಿ ವಿವಾದ: ಕಂ‌ಪ್ಲೇಂಟ್‌ನಲ್ಲಿ ಯೂ ಟರ್ನ್-‌ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಪಾಷಾ ದೂರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
