ದಕ್ಷಿಣ ಕೊರಿಯಾದ ಜಾಗತಿಕ ಕಂಪನಿ ಸ್ಯಾಮ್ಂಗ್ ಇತ್ತೀಚೆಗೆ ಗ್ರೇಟರ್ ನೋಯ್ಡಾದಲ್ಲಿ ಲ್ಯಾಪ್​ಟಾಪ್ ಉತ್ಪಾದನಾ ಘಟಕ ಸ್ಥಾಪಿಸುವುದಾಗಿ ಘೊಷಿಸಿದೆ. ದೇಶೀಯ ಉತ್ಪಾದನೆ ಉತ್ತೇಜಿಸಲು ಮತ್ತು ಲ್ಯಾಪ್​ಟಾಪ್ ಆಮದು ಕಡಿಮೆ ಮಾಡಲು ಭಾರತ ಸರ್ಕಾರ ಕ್ರಮ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಕಂಡುಬಂದಿದೆ.
ಭಾರತ ಪ್ರಸ್ತುತ ವಾರ್ಷಿಕ 3 ಬಿಲಿಯನ್ ಡಾಲರ್ (ಅಂದಾಜು 25 ಸಾವಿರ ಕೋಟಿ ರೂಪಾಯಿ) ಮೊತ್ತದ ಲ್ಯಾಪ್​ಟಾಪ್ ಮತ್ತು ಟ್ಯಾಬ್ಲೆಟ್ ತಯಾರಿಸುವ ಗುರಿ ಹೊಂದಿದೆ. ಆದರೆ, ಕಳೆದ ಏಪ್ರಿಲ್-ಜೂನ್ ತ್ರೖೆಮಾಸಿಕದಲ್ಲಿ 7 ಬಿಲಿಯನ್ ಡಾಲರ್ (ಅಂದಾಜು 58 ಸಾವಿರ ಕೋಟಿ ರೂಪಾಯಿ) ಮೊತ್ತದಷ್ಟು ಈ ವಸ್ತುಗಳ ಆಮದು ಮಾಡಿಕೊಳ್ಳಲಾಗಿದೆ ಎಂಬುದು ಗಮನಾರ್ಹ. ಅಂದರೆ, ಈ ಗುರಿಯು ಒಂದು ತ್ರೖೆಮಾಸಿಕದಲ್ಲಿ ಮಾಡಿಕೊಳ್ಳಲಾಗುವ ಆಮದು ಪ್ರಮಾಣದ ಅರ್ಧಕ್ಕಿಂತಲೂ ಕಡಿಮೆ. ಇದಲ್ಲದೆ, ಭಾರತವು ಶೇಕಡಾ 70-80ರಷ್ಟು ಲ್ಯಾಪ್​ಟಾಪ್ ಮತ್ತು ಟ್ಯಾಬ್ಲೆಟ್​ಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಿದೆ.
ಭಾರತ 2026ರ ವೇಳೆಗೆ ವಾರ್ಷಿಕ 300 ಬಿಲಿಯನ್ ಡಾಲರ್ (ಅಂದಾಜು 25 ಲಕ್ಷ ಕೋಟಿ ರೂಪಾಯಿ) ಎಲೆಕ್ಟ್ರಾನಿಕ್ಸ್ ವಸ್ತುಗಳ ಉತ್ಪಾದನೆ ಗುರಿ ಇಟ್ಟುಕೊಂಡಿದೆ. ಈ ಪೈಕಿ ಲ್ಯಾಪ್​ಟಾಪ್ ಮತ್ತು ಟ್ಯಾಬ್ಲೆಟ್ ಉತ್ಪಾದನೆ ಗುರಿಯನ್ನು 2026ರ ವೇಳೆಗೆ 25 ಬಿಲಿಯನ್ ಡಾಲರ್ (ಅಂದಾಜು 2 ಲಕ್ಷ ಕೋಟಿ ರೂಪಾಯಿ) ಮೊತ್ತಕ್ಕೆ ನಿಗದಿಪಡಿಸಲಾಗಿದೆ. ಭಾರತದ ದೇಶೀಯ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯು ಮುಂದಿನ ಐದು ವರ್ಷಗಳಲ್ಲಿ 65 ಬಿಲಿಯನ್ ಡಾಲರ್​ನಿಂದ (5.4 ಲಕ್ಷ ಕೋಟಿ ರೂಪಾಯಿ) 180 ಬಿಲಿಯನ್ ಡಾಲರ್​ಗೆ (15 ಲಕ್ಷ ಕೋಟಿ ರೂಪಾಯಿ) ಬೆಳೆಯುವ ನಿರೀಕ್ಷೆಯಿದೆ. 2026ರ ವೇಳೆಗೆ ಭಾರತದ 2-3 ಅಗ್ರ ರಫ್ತು ಉತ್ಪನ್ನಗಳಲ್ಲಿ ಎಲೆಕ್ಟ್ರಾನಿಕ್ಸ್ ವಸ್ತುಗಳು ಇರುವಂತೆ ನೋಡಿಕೊಳ್ಳಲು ಉದ್ದೇಶಿ ಸಲಾಗಿದೆ. 2021-22 ರಲ್ಲಿ ಅಂದಾಜು 15 ಬಿಲಿಯನ್ ಡಾಲರ್​ನಿಂದ (ಅಂದಾಜು 1.25 ಲಕ್ಷ ಕೋಟಿ ರೂಪಾಯಿ) 2026ರ ವೇಳೆಗೆ 120 ಬಿಲಿಯನ್ ಡಾಲರ್​ಗೆ (ಅಂದಾಜು 10 ಲಕ್ಷ ಕೋಟಿ ರೂಪಾಯಿ) ರಫ್ತು ಹೆಚ್ಚಳವಾಗುವ ನಿರೀಕ್ಷೆ ಇದೆ.
ಯಶಸ್ಸಾಗದ ಮೊದಲ ಪಿಎಲ್​ಐ:ಲ್ಯಾಪ್​ಟಾಪ್ ಮತ್ತು ಟ್ಯಾಬ್ಲೆಟ್​ಗಳ ತಯಾರಿಕಾ ವಲಯದಲ್ಲಿ ಉತ್ಪಾದನೆ ಹೆಚ್ಚಿಸಲು ಭಾರತ ವ್ಯಾಪಕ ಪ್ರಮಾಣದಲ್ಲಿ ಪ್ರೋತ್ಸಾಹ ನೀಡಲು ಮುಂದಾಗಿದೆ. 2021ರಲ್ಲಿ ಪ್ರಾರಂಭಿಸಲಾದ ಪಿಎಲ್​ಐ (ಪ್ರೊಡಕ್ಷನ್ ಲಿಂಕ್​ಡ್ ಇನ್ಸೆಂಟಿವ್- ಉತ್ಪಾದನೆ ಆಧಾರಿತ ಪ್ರೋತ್ಸಾಹಕ) ಯೋಜನೆಯ ಮೊದಲ ಆವೃತ್ತಿಯು ಆಪಲ್, ಎಸರ್, ಎಚ್​ಪಿ ಮುಂತಾದ ಪ್ರಮುಖ ಕಂಪನಿಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಲಿಲ್ಲ.
ಪಿಎಲ್​ಐ 2.0 ಯೋಜನೆಯು ಹೆಚ್ಚಿನ ಭರವಸೆಯೊಂದಿಗೆ 2023ರಲ್ಲಿ ಜಾರಿಗೊಂಡಿದೆ. 2021ರಲ್ಲಿ ಈ ಯೋಜನೆಗೆ 7,350 ಕೋಟಿ ರೂ. ನಿಗದಿಪಡಿಸಲಾಗಿತ್ತು. ಆದರೆ, ಈಗ ಪಿಎಲ್​ಐ 2.0 ಯೋಜನೆಯಡಿ 17,000 ಕೋಟಿ ರೂಪಾಯಿ ವೆಚ್ಚದೊಂದಿಗೆ ಆರು ವರ್ಷಗಳ ಅವಧಿಗೆ ಉತ್ತಮ ಸಬ್ಸಿಡಿ ಮತ್ತು ಇತರ ಆರ್ಥಿಕ ಪೋ›ತ್ಸಾಹಕಗಳನ್ನು ನೀಡಲು ಸರ್ಕಾರ ಮುಂದಾಗಿದೆ. ಹೀಗಿದ್ದರೂ ಸರ್ಕಾರವು ಈ ಉದ್ಯಮಕ್ಕೆ ಗಂಭೀರ ಸಂದೇಶ ರವಾನಿಸುವವರೆಗೂ ಈ ಪ್ರೋತ್ಸಾಹಕ ಯೋಜನೆಗೆ ಪ್ರತಿಕ್ರಿಯೆಯು ನೀರಸವಾಗಿಯೇ ಇತ್ತು.
ಐಟಿ ಹಾರ್ಡ್​ವೇರ್ ಉತ್ಪಾದನೆಗಾಗಿ ಪಿಎಲ್​ಐ 2.0 ಯೋಜನೆಯಡಿ ಸಹಿ ಮಾಡಲು ಮಾಡಲು ಆಗಸ್ಟ್ 30 ಅಂತಿಮ ಗಡುವು ನೀಡಲಾಗಿತ್ತು. ಇದಾದ ಮರುದಿನ ಆಗಸ್ಟ್ 31ರಿಂದ ಪ್ರತಿ ಉತ್ಪನ್ನದ ಮೇಲೆ ಪರವಾನಗಿ ಅಗತ್ಯವನ್ನು ವಿಧಿಸುವ ಮೂಲಕ ಟ್ಯಾಬ್ಲೆಟ್ ಮತ್ತು ಲ್ಯಾಪ್​ಟಾಪ್ ಆಮದು ಮೇಲೆ ನಿರ್ಬಂಧ ಹೇರಲಾಯಿತು. ದೇಶೀಯ ಉತ್ಪಾದನೆ ಉತ್ತೇಜಿಸುವುದು, ಜಾಗತಿಕ ಎಲೆಕ್ಟ್ರಾನಿಕ್ಸ್ ಪೂರೈಕೆ ಸರಪಳಿಯಲ್ಲಿ ಭಾರತದ ಪಾಲನ್ನು ಹೆಚ್ಚಿಸುವುದು ಮತ್ತು ಚೀನಾದಲ್ಲಿ ತಯಾರಿಸಿದ ಉತ್ಪನ್ನಗಳಿಗೆ ಸಂಬಂಧಿಸಿದ ಭದ್ರತಾ ಅಪಾಯಗಳ ಬಗ್ಗೆ ದೀರ್ಘಕಾಲದ ಆತಂಕವನ್ನು ಪರಿಹರಿಸುವುದು ಈ ಕ್ರಮದ ಉದ್ದೇಶವೆಂದು ಸರ್ಕಾರ ಹೇಳಿತು. ಆಮದು ನಿರ್ಬಂಧಿಸಲು ಸರ್ಕಾರ ಕೈಗೊಂಡ ಈ ಬಿಗಿ ಹಾಗೂ ಏಕಾಏಕಿ ಕ್ರಮವು ಉದ್ಯಮವನ್ನು ಬೆಚ್ಚಿಬೀಳಿಸಿತು. ಈಗ ಈ ಆಮದು ನಿರ್ಬಂಧದ ಅನುಷ್ಠಾನದ ದಿನಾಂಕವನ್ನು ಆಗಸ್ಟ್ 31ರ ಬದಲಾಗಿ ಅಕ್ಟೋಬರ್ 31ಕ್ಕೆ ವಿಸ್ತರಿಸಲಾಗಿದೆ. ಸರ್ಕಾರದ ಈ ಕಟ್ಟುನಿಟ್ಟಿನ ಕ್ರಮದ ನಂತರ ಉದ್ಯಮವು ಪಿಎಲ್​ಐ 2.0 ಯೋಜನೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಬಹುತೇಕ ಪ್ರಮುಖ ಉತ್ಪಾದಕರು ಯೋಜನೆಗೆ ಸಹಿ ಹಾಕಿದ್ದಾರೆ. ಆಗಸ್ಟ್ ಅಂತ್ಯದ ವೇಳೆಗೆ ಪ್ರಮುಖ ಜಾಗತಿಕ ಉತ್ಪಾದಕರು ಸೇರಿ 58 ಕಂಪನಿಗಳು ಐಟಿ ಹಾರ್ಡ್​ವೇರ್​ಗಾಗಿ 17,000 ಕೋಟಿ ರೂಪಾಯಿ ಮೊತ್ತದ ಪಿಎಲ್​ಐ ಯೋಜನೆಗಾಗಿ ನೋಂದಾಯಿಸಿಕೊಂಡಿವೆ ಎಂದು ಸರ್ಕಾರ ಹೇಳಿದೆ. ಈ ಯೋಜನೆಯ ಅವಧಿಯಲ್ಲಿ ಅಂದಾಜು 55 ಬಿಲಿಯನ್ ಡಾಲರ್ (ಅಂದಾಜು 4.5 ಲಕ್ಷ ಕೋಟಿ ರೂಪಾಯಿ) ಮೊತ್ತದ ವಸ್ತುಗಳ ಉತ್ಪಾದನೆ ಆಗಬಹುದಾಗಿದೆ.
ಲ್ಯಾಪ್​ಟಾಪ್ ತಯಾರಿಕೆಯ ಕ್ಷೇತ್ರದಲ್ಲಿ ತುಲನಾತ್ಮಕವಾಗಿ ಚಿಕ್ಕ ಕಂಪನಿಯಾಗಿರುವ ಸ್ಯಾಮ್ಂಗ್, ಪಿಎಲ್​ಐ ಯೋಜನೆಗೆ ಸಹಿ ಮಾಡಿಲ್ಲದಿದ್ದರೂ ನೋಯ್ಡಾದಲ್ಲಿ ಲ್ಯಾಪ್​ಟಾಪ್​ಗಳ ಉತ್ಪಾದನೆಗಾಗಿ 100-200 ಕೋಟಿ ರೂಪಾಯಿಗಳ ಹೂಡಿಕೆಯನ್ನು ಘೊಷಿಸಿದೆ. ಆದರೆ, ತೈವಾನ್​ನ ಆಸುಸ್ ಮತ್ತು ಏಸರ್, ಅಮೆರಿಕದ ಎಚ್​ಪಿ ಮತ್ತು ಡೆಲ್, ಚೀನಾದ ಲೆನೊವೊ (ಸ್ಥಳೀಯ ತಯಾರಕರೊಂದಿಗೆ ಜತೆಗೂಡಿ) ರೀತಿಯ ದೊಡ್ಡ ಕಂಪನಿಗಳು ಬೃಹತ್ ಉತ್ಪಾದನೆ ಯೋಜನೆಗಳನ್ನು ಘೊಷಿಸಿವೆ. ಆಸುಸ್ ಕಂಪನಿಯು ಪ್ರಮುಖ ಬಿಡಿಭಾಗಗಳ ಪೂರೈಕೆದಾರರನ್ನು ಚೀನಾದಿಂದ ಭಾರತಕ್ಕೆ ಸ್ಥಳಾಂತರಿಸಲು ಮುಂದಾಗಿದೆ. ಈ ಕಂಪನಿಯು ಗುತ್ತಿಗೆ ತಯಾರಕ ಫ್ಲೆಕ್ಸ್ ಕಂಪನಿ ಜತೆಗೆ ಚೆನ್ನೈನಲ್ಲಿ ಕಾರ್ಖಾನೆ ಸ್ಥಾಪಿಸಲು ಸಹಕರಿಸುತ್ತಿದೆ. ಭಾರತದಲ್ಲಿ ಲ್ಯಾಪ್​ಟಾಪ್ ಮಾರುಕಟ್ಟೆ ಅಗಾಧವಾಗಿ ಬೆಳೆಯುವ ಸಾಮರ್ಥ್ಯ ಹೊಂದಿರುವ ಕಾರಣ ಆಸುಸ್ ತನ್ನ ಉತ್ಪಾದನಾ ಕಾರ್ಯಾಚರಣೆಗಳನ್ನು ಭಾರತದಲ್ಲಿ ವಿಸ್ತರಿಸುವ ಗುರಿ ಹೊಂದಿದೆ.
ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ, ಭಾರತದಲ್ಲಿ ಕೈಗೆಟಕುವ ದರದಲ್ಲಿ ಕ್ರೋಮ್ುಕ್ಸ್ ತಯಾರಿಸಲು ಎಚ್​ಪಿ ಮತ್ತು ಗೂಗಲ್ ಪಾಲುದಾರಿಕೆ ಮಾಡಿಕೊಂಡಿವೆ. ಈ ಸಹಯೋಗವು ಭಾರತೀಯ ಮಾರುಕಟ್ಟೆಯಲ್ಲಿ ಕಡಿಮೆ ವೆಚ್ಚದ ಲ್ಯಾಪ್​ಟಾಪ್ ಆಯ್ಕೆಗಳನ್ನು ಒದಗಿಸುವ ಗುರಿ ಹೊಂದಿದೆ. ಫಾಕ್ಸ್​ಕಾನ್ ಮತ್ತು ದೇಶೀಯ ಕಂಪನಿಗಳಾದ ಡಿಕ್ಸನ್ ಟೆಕ್ನಾಲಜೀಸ್, ವಿವಿಡಿಎನ್ ಟೆಕ್ನಾಲಜೀಸ್ ಮತ್ತು ನೆಟ್​ವೆಬ್ ಟೆಕ್ನಾಲಜೀಸ್ ಕೂಡ ಪಿಎಲ್​ಐ ಯೋಜನೆಗೆ ಸಹಿ ಹಾಕಿವೆ. ಏಕೆಂದರೆ, ಸ್ಥಳೀಯ ಉತ್ಪಾದನೆಯನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ನಿರ್ದಿಷ್ಟ ಘಟಕಗಳ ತಯಾರಕರನ್ನು ಕೂಡ ಈ ಯೋಜನೆ ಒಳಗೊಂಡಿದೆ.
ಪಿಎಲ್​ಐ 2.0 ಅದರ ಪೂರ್ವವರ್ತಿಯನ್ನು ಮೀರಿಸಿ ಯಶಸ್ಸಿನತ್ತ ದಾಪುಗಾಲು ಹಾಕಲು ಸಜ್ಜಾಗಿದೆ. ಪಿಎಲ್​ಐ 1.0 ಯೋಜನೆಯನ್ನು 2021 ರಲ್ಲಿ ಪರಿಚಯಿಸಲಾಗಿತ್ತು. ಆದರೆ, ಇದು ಅನೇಕ ಜಾಗತಿಕ ಉತ್ಪಾದಕರನ್ನು ಆಕರ್ಷಿಸಲು ವಿಫಲವಾಯಿತು. ಈ ವರ್ಷದ ಮೇ ತಿಂಗಳಲ್ಲಿ ಸರ್ಕಾರವು ಐಟಿ ಹಾರ್ಡ್​ವೇರ್ ಪಿಎಲ್​ಐ 2.0 ಯೋಜನೆಗೆ ಬಜೆಟ್ ಅನ್ನು ಗಮನಾರ್ಹವಾಗಿ ಹೆಚ್ಚಿಸಿತು, 2021 ರಲ್ಲಿ ಒದಗಿಸಲಾಗಿದ್ದ 7,350 ಕೋಟಿ ರೂ.ಗಳಿಂದ 17,000 ಕೋಟಿ ರೂಪಾಯಿಗೆ ಬಜೆಟನ್ನು ಈ ಬಾರಿ ಹೆಚ್ಚಿಸಲಾಗಿದೆ. ಪಿಎಲ್​ಐ ಮೊದಲ ಆವೃತ್ತಿಯಲ್ಲಿ ಡೆಲ್ ಮತ್ತು ಭಗವತಿ ಉತ್ಪನ್ನಗಳು ಮಾತ್ರ ಮೊದಲ ವರ್ಷದಲ್ಲಿ ತಮ್ಮ ಗುರಿಗಳನ್ನು ಪೂರೈಸಿದವು. ಪಿಎಲ್​ಐ 2.0 ಯೋಜನೆಯಡಿಯಲ್ಲಿ, ಕಂಪನಿಗಳಿಗೆ ಆರು ವರ್ಷಗಳ ಅವಧಿಯಲ್ಲಿ ತಮ್ಮ ನಿವ್ವಳ ಹೆಚ್ಚಳದ ಮಾರಾಟದ ಅಂದಾಜು 5ರಷ್ಟು ಸರಾಸರಿ ಪೋ›ತ್ಸಾಹವನ್ನು ನೀಡಲಾಗುತ್ತದೆ. ಮೊದಲ ಆವೃತ್ತಿಯಲ್ಲಿ ನಾಲ್ಕು ವರ್ಷಗಳಲ್ಲಿ ಶೇಕಡಾ 2ರಷ್ಟು ನೆರವನ್ನು ನೀಡಲಾಗಿತ್ತು. ಇದಲ್ಲದೆ, ಮೆಮೊರಿ ಮಾಡ್ಯೂಲ್, ಘನ-ಸ್ಥಿತಿಯ ಡ್ರೖೆವ್​ಗಳು ಮತ್ತು ಡಿಸ್​ಪ್ಲೇ ಪ್ಯಾನೆಲ್​ಗಳಂತಹ ನಿರ್ದಿಷ್ಟ ಘಟಕಗಳನ್ನು ಸ್ಥಳೀಯವಾಗಿ ತಯಾರಿಸುವ ಕಂಪನಿಗಳು ಪರಿಷ್ಕೃತ ಯೋಜನೆಯ ಅಡಿಯಲ್ಲಿ ಹೆಚ್ಚುವರಿ ಪೋ›ತ್ಸಾಹವನ್ನು ಪಡೆಯುತ್ತವೆ. ಉತ್ಪಾದನಾ ಗುರಿಗಳಿಗಿಂತ ಕಡಿಮೆ ಸಾಧಿಸುವ ಕಂಪನಿಗಳಿಗೆ ಸಬ್ಸಿಡಿಯಲ್ಲಿ ಶೇಕಡಾ 10ರವರೆಗೆ ಕಡಿತ ಮಾಡುವ ಮೂಲಕ ದಂಡವನ್ನು ವಿಧಿಸುವುದು ಕೂಡ ಈ ಯೋಜನೆಯಲ್ಲಿ ಸೇರಿದೆ.
75 ಸಾವಿರ ನೇರ ಉದ್ಯೋಗ:ಐಟಿ ಹಾರ್ಡ್​ವೇರ್ ಪಿಎಲ್​ಐ ಯೋಜನೆಯಡಿ ಲ್ಯಾಪ್​ಟಾಪ್ ಮತ್ತು ಪರ್ಸನಲ್ ಕಂಪ್ಯೂಟರ್​ಗಳ ಉತ್ಪಾದನೆಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರಿಂದಾಗಿ ಸೃಷ್ಟಿಯಾಗುವ ನಿರೀಕ್ಷಿತ ನೇರ ಉದ್ಯೋಗಗಳ ಸಂಖ್ಯೆ ಅಂದಾಜು 75,000 ಆಗಲಿದೆ ಎಂದು ಸಂವಹನ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಸಾಹಸಸಿಂಹ ಡಾ.ವಿಷ್ಣುವರ್ಧನ್ ಪುಣ್ಯಭೂಮಿ ವಿವಾದ; ಇದೀಗ ಇನ್ನೊಂದು ಮಹತ್ವದ ಬೆಳವಣಿಗೆ

ಹಮಾಸ್​ ದಾಳಿ: ಐವರು ಹಂತಕರನ್ನು ಸ್ವತಃ ಕೊಂದ ಎದೆಗಾತಿ; 20 ಉಗ್ರರ ಹತ್ಯೆಗೆ ನೇತೃತ್ವ ವಹಿಸಿದ ದಿಟ್ಟ ಯುವತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
