ನವದೆಹಲಿ:ಭಾರತದ ಆರ್ಥಿಕ ರಾಜಧಾನಿ ಹೀಟ್ ವೇವ್ (heat wave) ಕಾರಣದಿಂದಾಗಿ ಬಿಸಿಲಿನ ತಾಪದಿಂದ ತತ್ತರಿಸುತ್ತಿದ್ದು, ಆ ನಗರದಲ್ಲಿ ಭಾನುವಾರ 39.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಇದು ದೇಶದಲ್ಲೇ ಬೇಸಿಗೆ ಋತುವಿನ ಗರಿಷ್ಠ ದಿನದ ತಾಪಮಾನವಾಗಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರದಿಂದ ಭಾನುವಾರದವರೆಗೆ ಮುಂಬೈನಲ್ಲಿ ಹೀಟ್​ ವೇವ್​ ಉಂಟಾಗಬಹುದು ಎಂದು ಎಚ್ಚರಿಕೆ ನೀಡಿದೆ.
ನಗರದ ಸಾಂಟಾಕ್ರೂಜ್ ವೀಕ್ಷಣಾಲಯ, 24 ಗಂಟೆಗಳಲ್ಲಿ 39.4 ಡಿಗ್ರಿ ಸೆಲ್ಸಿಯಸ್‌ನಲ್ಲಿ ಗರಿಷ್ಠ ತಾಪಮಾನವನ್ನು ದಾಖಲಿಸಿದೆ. ಇದು ಸಾಮಾನ್ಯಕ್ಕಿಂತ ಆರು ಡಿಗ್ರಿಗಳಷ್ಟು ಹೆಚ್ಚಾಗಿದೆ. ಹವಾಮಾನ ಇಲಾಖೆ ಅಡಿಯಲ್ಲಿರುವ ಕೊಲಾಬಾದ ವೀಕ್ಷಣಾಲಯದಲ್ಲಿ 35.8 ಸೆಲ್ಸಿಯಸ್​ ತಾಪಮನಾನ ದಾಖಲಾಗಿದ್ದು ಇದು ಸಾಮಾನ್ಯಕ್ಕಿಂತ ನಾಲ್ಕು ಡಿಗ್ರಿಗಳಷ್ಟು ಹೆಚ್ಚಾಗಿದೆ.
ಇತ್ತೀಚಿನ ದಿನಗಳಲ್ಲಿ ಮುಂಬೈನ ಗರಿಷ್ಠ ತಾಪಮಾನವು ರಾಜಸ್ಥಾನದ ಥಾರ್ ಮರುಭೂಮಿಯಲ್ಲಿರುವ ಶ್ರೀ ಗಂಗಾನಗರಕ್ಕಿಂತ ಹೆಚ್ಚಾಗಿದೆ. ಇದನ್ನು ಭಾರತದ ಅತೀ ಹೆಚ್ಚು ತಾಪಮಾನ ಇರುವ ತಾಣವೆಂದು ಗುರುತಿಸಲಾಗಿದೆ. ಗಂಗಾನಗರದಲ್ಲಿ ಈಗ ಗರಿಷ್ಠ ತಾಪಮಾನವು 34-36 ಡಿಗ್ರಿ ಸೆಲ್ಸಿಯಸ್ ಆಗಿದೆ. ಆದರೆ, ಆದರೆ ಇನ್ನೂ ಬೇಸಿಗೆ ಆರಂಭವಾಗಿಲ್ಲ.
ಹೀಟ್‌ವೇವ್ (heat wave) ಮುಖ್ಯವಾಗಿ ಪೂರ್ವ ದಿಕ್ಕಿನ ಗಾಳಿಯ ಉಪಸ್ಥಿತಿಯಿಂದಾಗಿ ಉಂಟಾಗುತ್ತಿದೆ. ಇದು ಸಮುದ್ರದಿಂದ ಬರುವ ಗಾಳಿಯನ್ನು ತಡೆಯುತ್ತಿದೆ. ಪೂರ್ವದ ಗಾಳಿ ತಾಪಮಾನವನ್ನು ಹೆಚ್ಚಿಸುವ ಕೆಲಸ ಮಾಡುತ್ತಿದ್ದು ಇದರಿಂದಾಗಿ ಹವಾಮಾನ ಬಿಸಿಯಾಗುತ್ತಿದ್ದು ಹೆಚ್ಚು ಆರ್ದ್ರವಾಗುತ್ತದೆ ಎಂದು ಹವಾಮಾನ ತಜ್ಞರು ವಿವರಿಸುತ್ತಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − sixteen =
Remember me
