ನವದೆಹಲಿ:ಮಾರ್ಚ್​ನಿಂದ ಮೇ ವರೆಗೆ ದೇಶಾದ್ಯಂತ ಸುಮಾರು 25ಸಾವಿರ ಶಂಕಿತ ಶಾಖದ ಹೊಡೆತ ಪ್ರಕರಣಗಳು ದಾಖಲಾಗಿದ್ದು, 56 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸರ್ಕಾರಿ ಅಂಕಿ ಅಂಶಗಳೇ ದೃಢಪಡಿಸಿವೆ.
ಇದನ್ನೂ ಓದಿ:ಶುಭಮಾನ್ ಗಿಲ್ ಜೊತೆ ಮದುವೆಯ ವದಂತಿ ನಿರಾಕರಿಸಿದ ನಂತರ ರಿಧಿಮಾ ಪಂಡಿತ್ ರಹಸ್ಯ ಪೋಸ್ಟ್!
ರಾಜಧಾನಿ ದೆಹಲಿ ಮತ್ತು ರಾಜಸ್ಥಾನದಲ್ಲಿ ತಾಪಮಾನವು 50 ಡಿಗ್ರಿ ಸೆಲ್ಸಿಯಸ್ (122 ಡಿಗ್ರಿ ಫ್ಯಾರನ್‌ಹೀಟ್) ಮುಟ್ಟುವುದರೊಂದಿಗೆ ಈ ಪ್ರದೇಶಕ್ಕೆ ಮೇ ಕೆಟ್ಟ ತಿಂಗಳಾಗಿ ಕಾಡಿದೆ.
ಇದಕ್ಕೆ ವ್ಯತಿರಿಕ್ತವಾಗಿ ಪೂರ್ವ ಭಾರತದ ಭಾಗಗಳು ರೆಮಲ್ ಚಂಡಮಾರುತದ ಪ್ರಭಾವದಿಂದ ತತ್ತರಿಸುತ್ತಿವೆ. ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಭಾರೀ ಮಳೆಗೆ 14 ಜನರು ಮೃತಪಟ್ಟಿದ್ದಾರೆ.
ದೇಶದಲ್ಲಿ ಈಗಷ್ಟೇ ಮುಕ್ತಾಯಗೊಂಡ ಸಾರ್ವತ್ರಿಕ ಚುನಾವಣೆಯಲ್ಲಿ ಕರ್ತವ್ಯದಲ್ಲಿದ್ದ ಚುನಾವಣಾಧಿಕಾರಿಗಳು ಸೇರಿದಂತೆ ಕನಿಷ್ಠ 33 ಜನರು ಶುಕ್ರವಾರ(ಮೇ.31) ಉತ್ತರ ಪ್ರದೇಶ, ಬಿಹಾರ ಮತ್ತು ಒಡಿಶಾ ದಲ್ಲಿ ಶಂಕಿತ ಶಾಖದ ಹೊಡೆತದಿಂದ ಮೃತಪಟ್ಟಿದ್ದರು.
ಮಧ್ಯಪ್ರದೇಶವೊಂದರಲ್ಲೇ 5,000ಕ್ಕೂ ಹೆಚ್ಚು ಶಾಖಾಘಾತ ಪ್ರಕರಣಗಳು ಪತ್ತೆಯಾಗಿವೆ.
ಹವಾಮಾನ ಇಲಾಖೆ ಪ್ರಕಾರ ಬುಧವಾರ(ಜೂನ್​ 5)ರವರೆಗೆ ಶಾಖದ ಅಲೆಯ ಪರಿಸ್ಥಿತಿ ತೀವ್ರವಾಗಿರುತ್ತದೆ. ಮುಂದಿನ ದಿನಗಳಲ್ಲಿ ಮುಂಗಾರು ಆಗಮನದಿಂದ ವಾತಾವರಣ ತಂಪಾಗುವ ನಿರೀಕ್ಷೆಯಿದೆ.
ಆಫ್-ಶೋಲ್ಡರ್ ಡ್ರೆಸ್‌ನಲ್ಲಿ ಮಿಂಚಿದ ಕರೀನಾ..ಅಭಿಮಾನಿಗಳು ಫಿದಾ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × three =
Remember me
