ಲಖನೌ:ಕಾರ್ಯಕ್ರಮ ಒಂದರ ಶಂಕುಸ್ಥಾಪನೆಯಲ್ಲಿ ‘ಭಾರತ್​​ ಮಾತಾ ಕಿ ಜೈ’ ಎನ್ನುವ ವಿಚಾರವಾಗಿ ಜನಪ್ರತಿನಿಧಿಗಳಿಬ್ಬರ ನಡುವೆ ವಾಗ್ವಾದವಾಗಿರುವ ಘಟನೆ ಉತ್ತರಪ್ರದೇಶದ ಅಮ್ರೋಹ ಜಿಲ್ಲೆಯಲ್ಲಿ ನಡೆದಿದೆ.
ಅಮ್ರೋಹ ಲೋಕಸಭೆ ಕ್ಷೇತ್ರದ ಬಿಎಸ್​ಪಿ ಸಂಸದ ಕುನ್ವರ್​ ಡ್ಯಾನಿಶ್​ ಅಲಿ ಹಾಗೂ ಬಿಜೆಪಿಯಿಂದ ಆಯ್ಕೆಯಾಗಿರುವ ವಿಧಾನಪರಿಷತ್​ ಸದಸ್ಯ ಹರಿಸಿಂಗ್​ ದಿಲ್ಲೋನ್​​ ನಡುವೆ ವಾಗ್ವಾದ ನಡೆದಿದೆ. ಇಬ್ಬರ ನಡುವಿನ ವಾಗ್ವಾದದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
ಉತ್ತರಪ್ರದೇಶದ ಅಮ್ರೋಹ ಜಿಲ್ಲೆಯಲ್ಲಿ ಭಾನುವಾರ ಅಮೃತ್​ ಭಾರತ ನಿಲ್ದಾಣದ ಯೋಜನೆಯ ಶಂಕುಸ್ಥಾಪನೆಯನ್ನೂ ಹಮ್ಮಿಕೊಳ್ಳಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಏಕಕಾಲದಲ್ಲಿ ಶಂಕುಸ್ಥಾಪನೆ ಕಾರ್ಯಕ್ರಮವನ್ನೂ ನೆರವೇರಿಸಿದ್ಧಾರೆ.
#WATCH| UP: Heated argument ensued between BSP MP Danish Ali and BJP MLC Hari Singh Dhillon during an event in Amroha.pic.twitter.com/4gWVSweUGf
ಶಂಕುಸ್ಥಾಪನೆ ಬಳಿಕ ಕಾರ್ಯಕ್ರಮವನ್ನೂ ಉದ್ದೇಶಿಸಿ ಮಾತನಾಡಿದ ವಿಧಾನಪರಿಷತ್​ ಸದಸ್ಯ ಹರಿಸಿಂಗ್​ ದಿಲ್ಲೋನ್​​ ಮೊದಲಿಗೆ ‘ಭಾರತ್​​ ಮಾತಾ ಕಿ ಜೈ’ ಎಂದು ಹೇಳುವ ಮೂಲಕ ತಮ್ಮ ಭಾಷಣವನ್ನೂ ಆರಂಭಿಸಿದ್ದಾರೆ. ಈ ವೇಳೆ ಇದಕ್ಕೆ ಆಕ್ಷೇಪಿಸಿದ ಸಂಸದ ಕುನ್ವರ್​ ಡ್ಯಾನಿಶ್​ ಅಲಿ ಸರ್ಕಾರಿ ಕಾರ್ಯಕ್ರಮವನ್ನೂ ನಿಮ್ಮ ಪಕ್ಷದ ವೇದಿಕೆಯನ್ನಾಗಿ ಬಳಸಿಕೊಳ್ಳಬೇಡಿ ಎಂದಿದ್ದಾರೆ. ಈ ವಿಚಾರವಾಗಿ ಇಬ್ಬರೂ ನಾಯಕರ ನಡುವಿನ ವಾಗ್ವಾದಕ್ಕೆ ಕಾರಣವಾಗಿದ್ದೂ, ಕಾರ್ಯಕ್ರಮವನ್ನೂ ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ.
ಇದನ್ನೂ ಓದಿ:ಕೌಟುಂಬಿಕ ಕಲಹ; ವಿಷಸೇವಿಸಿ ಪ್ರಾಣಬಿಟ್ಟ ಹೆಡ್​ಕಾನ್ಸ್​ಟೇಬಲ್​
ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿಯ ಹರಿಸಿಂಗ್​ ದಿಲ್ಲೋನ್​ ಕಾರ್ಯಕ್ರಮವನ್ನೂ ಉದ್ದೇಶಿಸಿ ಭಾಷಣ ಆರಂಭಿಸುವ ವೇಳೆ ಭಾರತ್​ ಮಾತಾ ಕಿ ಜೈ ಎಂದು ಹೇಳುವ ಮೂಲಕ ನಾವು ನಮ್ಮ ಮಾತನ್ನೂ ಆರಂಭಿಸುತ್ತೇವೆ. ಆದರೆ, ನಾನೂ ಏನೋ ತಪ್ಪು ಮಾಡಿನಾಡಿದ್ಧೇನೆ ಎನ್ನುವ ಹಾಗೆ ಸಂಸದ ಡ್ಯಾನಿಶ್​ ಅಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಹರಿಸಿಂಗ್​ ದಿಲ್ಲೋನ್​ ಕಿಡಿಕಾರಿದ್ಧಾರೆ.
ದಿಲ್ಲೋನ್​ ಆರೋಪಕ್ಕೆ ಪ್ರತಿಕ್ರಿಯಿಸಿದ ಸಂಸದ ಡ್ಯಾನಿಶ್​ ಅಲಿ ಬಿಜೆಪಿಯವರು ಪ್ರತಿಯೊಂದು ಸರ್ಕಾರಿ ಕಾರ್ಯಕ್ರವನ್ನೂ ತಮ್ಮ ಪಕ್ಷದ ವೇದಿಕೆಯನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ನಾವು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದೇವೆ. ಆದರೆ, ಈ ವಿಚಾರವನ್ನೂ ಬಿಜೆಪಿಯವರೂ ತಿರುಚುವ ಮೂಲಕ ಜನತೆಗೆ ಬೇರೊಂದು ಸಂದೇಶವನ್ನೂ ರವಾನಿಸಲು ಪ್ರಯತ್ನಿಸುತ್ತಿದ್ಧಾರೆ ಎಂದು ಸಂಸದ ಡ್ಯಾನಿಶ್​ ಅಲಿ ಆರೋಪಿಸಿದ್ದಾರೆ.
#WATCH| UP: "BJP always convert every event into their party event. We raised our voice over this because it was not a party event. They tried to twist this but the public has understood this," says BSP MP Danish Ali on his heated argument with BJP MLC Hari Singh Dhillon during…pic.twitter.com/S6aYqSp626

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 15 =
Remember me
