ಕಾಶ್ಮೀರ:ಕಣಿವೆ ರಾಜ್ಯ ಕಾಶ್ಮೀರ ಅಂದರೆ ಮೊದಲಿಗೆ ನೆನಪಿಗೆ ಬರುವುದು ಹಿಮ. ಸದಾ ತಂಪಿನಿಂದ ಕೂಡಿರುವ ಕಾಶ್ಮೀರ ಇದೀಗ ನಿಗಿನಿಗಿ ಕೆಂಡದಂತಾಗಿದೆ. ಪ್ರಕೃತಿ ವೈಪರೀತ್ಯದಿಂದಾಗಿ ದೇಶದಲ್ಲಿ ಜನರ ಜೀವನ ಅಸ್ತವ್ಯಸ್ತಗೊಂಡಿದೆ. ದೇಶದ ಕೆಲವೆಡೆ ನಿರಂತರ ಮಳೆಯಿಂದಾಗಿ ಜನರು ಪ್ರವಾಹದ ಭೀತಿಯಲ್ಲಿದ್ದರೆ, ಇನ್ನೊಂದೆಡೆ ತಣ್ಣನೆಯ ಕಾಶ್ಮೀರದದಲ್ಲಿ ಸೂರ್ಯನ ಶಾಖದಿಂದ ಜನರು ಬೇಸತ್ತು ಹೋಗಿದ್ದಾರೆ.
ಕಾಶ್ಮೀರ ಕಣಿವೆಯಲ್ಲಿ ದಿನದಿಂದ ದಿನಕ್ಕೆ ಸೂರ್ಯನ ಶಾಖ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜುಲೈ 29 ಮತ್ತು 30 ರಂದು ಪ್ರಾಥಮಿಕ ಹಂತದ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಈ ಕುರಿತು ಕಾಶ್ಮೀರ ಆಡಳಿತ ವಿಭಾಗದ ಆಯುಕ್ತರಾದ ವಿ.ಕೆ.ಬಿಧುರಿ ಅವರು ಆದೇಶ ಹೊರಡಿಸಿದ್ದಾರೆ. ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುವ ಅಗತ್ಯವಿಲ್ಲದಿದ್ದರೂ, ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ತಮ್ಮ ಕರ್ತವ್ಯಕ್ಕೆ ಹಾಜರಾಗಬೇಕು ಮತ್ತು ತಮ್ಮ ಕರ್ತವ್ಯಗಳಿಗೆ ವರದಿ ಮಾಡಿಕೊಳ್ಳಬೇಕೆಂದು ಆದೇಶವನ್ನು ಹೊರಡಿಸಿದ್ದಾರೆ.
ಸೂರ್ಯನ ತಾಪಮಾನ ಹೆಚ್ಚುತ್ತಿರುವ ಹಿನ್ನಲೆ ಅನಂತನಾಗ್‌ನ ನಿವಾಸಿಯೊಬ್ಬರು ಮಾತನಾಡಿ, ಇದಕ್ಕೆ ಕಾರಣ ಜಾಗಿತಿಕ ತಾಪಮಾನ ಏರಿಕೆ ಎಂದಿದ್ದಾರೆ. ಅಲ್ಲದೆ, ಈ ವರ್ಷ ಸೂರ್ಯ ಉಷ್ಣಾಂಶ ಹೆಚ್ಚಾಗಿದ್ದು, ಬಿಸಿಲಿನ ಬೇಗೆಯನ್ನು ತಾಳಲಾರದೆ ಜನರು ಜೀವನ ನಡೆಸಲು ಸಹ ಪರದಾಡುತ್ತಿದ್ದಾರೆ. ಮಕ್ಕಳು ಮತ್ತು ಹೆಂಗಸರು ಬಿಸಿಲಿನಿಂದಾಗಿ ಮನೆಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಪ್ರಸ್ತುತ ಸ್ಥಿತಿಯನ್ನು ನೋಡಿದರೆ ಇದು ಮತ್ತೊಂದು ಬೇಸಿಗೆ ರಜೆ ಇರಬೇಕು ಎಂದು ನಾನು ಭಾವಿಸುತ್ತೇನೆ ಎಂದು ಎಎನ್‌ಐಗೆ ತಿಳಿಸಿದರು.(ಏಜೇನ್ಸೀಸ್)
ದುಬಾರಿಯಾಯ್ತು ಬೆಂಗಳೂರು ದುನಿಯಾ! ಮನೆ ಬಾಡಿಗೆಗಿಂತಲೂ ಹೆಚ್ಚಾಯ್ತು ಉಬರ್ ಬಿಲ್, ಮಹಿಳೆಯ ಪೋಸ್ಟ್​ ವೈರಲ್​

ನ್ಯಾಯ ಸಿಗದಿದ್ರೆ ವಿಧಾನಸೌಧ ಬ್ಲಾಸ್ಟ್​ ಮಾಡ್ತೀನಿ! ನನ್ನನ್ನು ಬಂಧಿಸಿದ್ರೆ ದರ್ಶನ್​ ಪಕ್ಕದ ಸೆಲ್​ಗೆ​ ಹಾಕಿ ಎಂದ ಯುವಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + seven =
Remember me
