ಮುಂಬೈ:ಕುಡಿದ ಮತ್ತಿನಲ್ಲಿದ್ದ ಪ್ರಯಾಣಿಕನಿಂದ ವಿಮಾನ ಸಂಚಾರದ ಮಾರ್ಗವನ್ನೇ ಬದಲಿಸಿದ ಘಟನೆ ನಿನ್ನೆ ತಡರಾತ್ರಿ ನಡೆದಿದೆ.
ಬೆಂಗಳೂರಿನಿಂದ ಕತಾರ್​ಗೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಯಾಣಿಕನೊಬ್ಬ ಅತಿಯಾಗಿ ಕುಡಿದು, ಗಗನಸಖಿ ಜತೆ ಅಸಭ್ಯವಾಗಿ ವರ್ತಿಸಿದ್ದಲ್ಲದೇ, ಇನ್ನೂ ಮದ್ಯ ಕೊಡುವಂತೆ ಒತ್ತಾಯಿಸಿದ್ದಾನೆ. ಸಹ ಪ್ರಯಾಣಿಕರು ಎಷ್ಟೇ ಪ್ರಯತ್ನಿಸಿದರೂ, ಆತನ ವರ್ತನೆ ಅತಿಯಾಗಿದ್ದ ಕಾರಣ ಕೂಡಲೇ ವಿಮಾನವನ್ನೇ ನಿಲ್ಲಿಸಬೇಕಾಯಿತು.
ಇವನ ವರ್ತನೆಯಿಂದ ಬೇಸತ್ತ ವಿಮಾನ ಸಿಬ್ಬಂದಿ ಕೊನೆಗೂ ನೇರವಾಗಿ ಕತಾರ್​ನ ದೋಹಾಗೆ ತಲುಪಬೇಕಿದ್ದ ವಿಮಾನ ಸಂಚಾರವನ್ನು ಬದಲಿಸಿ ಮುಂಬೈ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ನಿಲ್ಲಿಸಬೇಕಾಯಿತು.
ಪ್ರಯಾಣಿಕನನ್ನು ಮೊಹಮ್ಮದ್​ ಸರ್ಫೂದ್ದೀನ್​ ಎಂದು ಗುರುತಿಸಲಾಗಿದ್ದು, ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನ ನಿಲ್ಲುತ್ತಿದ್ದಂತೆ ಈತನನ್ನು ಬಂಧಿಸಲಾಗಿದ್ದು, ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.(ಏಜೆನ್ಸೀಸ್​)
8ನೇ ಮಹಡಿಯಲ್ಲಿ ನೇತಾಡುತ್ತಿದ್ದ ಮಗುವಿನ ರಕ್ಷಣೆ ಮಾಡಿದ ಯುವಕನ ಧೈರ್ಯಕ್ಕೆ ಭಾರೀ ಮೆಚ್ಚುಗೆ: ವಿಡಿಯೋ ವೈರಲ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 + 9 =
Remember me
