ನವದೆಹಲಿ:ಭಾರತದ ಷೇರು ಮಾರುಕಟ್ಟೆ ಬುಧವಾರ ಭಾರಿ ಕುಸಿತ ಅನುಭವಿಸಿದ್ದು, ಹೂಡಿಕೆದಾರರು 13.47 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದ್ದಾರೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಜತೆಗೆ ಸ್ಮಾಲ್​ಕ್ಯಾಪ್ ಮತ್ತು ಮಿಡ್​ಕ್ಯಾಪ್ ಸೂಚ್ಯಂಕಗಳಲ್ಲಿನ ತೀವ್ರ ಕುಸಿತ ದಾಖಲಾಗಿದ್ದು, ಹೂಡಿಕೆದಾರರು ಕಂಗಾಲಾಗಿದ್ದಾರೆ. ಸೆನ್ಸೆಕ್ಸ್ 906.07 ಪಾಯಿಂಟ್ ಅಥವಾ ಶೇ. 1.23 ಕುಸಿದು 72,761.89ಕ್ಕೆ ಸ್ಥಿರವಾಯಿತು. ದಿನದ ಅವಧಿಯಲ್ಲಿ ಇದು 1,152.25 ಪಾಯಿಂಟ್ (ಶೇ. 1.56) ಕುಸಿತ ಕಂಡು 72,515.71 ಕ್ಕೆ ತಲುಪಿತ್ತು.
ಬಿಎಸ್​ಇಯಲ್ಲಿ ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಬಂಡವಾಳ (ಎಂಕ್ಯಾಪ್) 13,47,822.84 ಕೋಟಿ ರೂ.ಗೆ ಕುಸಿದಿದೆ. ಬಹುತೇಕ ಸೂಚ್ಯಂಕಗಳು ಆರಂಭಿಕ ಲಾಭ ಕಂಡರೂ ನಂತರ ತೀವ್ರ ಇಳಿಕೆ ದಾಖಲಿಸಿದವು. ಬಿಎಸ್​ಇ ಸ್ಮಾಲ್​ಕ್ಯಾಪ್ ಸೂಚ್ಯಂಕ ಶೇ. 5.11ರಷ್ಟು ಕುಸಿದಿದ್ದರೆ, ಮಿಡ್​ಕ್ಯಾಪ್ ಸೂಚ್ಯಂಕ ಶೇ. 4.20ರಷ್ಟು ಕುಸಿದಿದೆ. ಸೆನ್ಸೆಕ್ಸ್ನಲ್ಲಿ ಪವರ್ ಗ್ರಿಡ್ ಶೇ. 7 ಕುಸಿದು ಅತಿ ಹೆಚ್ಚು ನಷ್ಟವನ್ನು ಅನುಭವಿಸಿತು. ಎನ್​ಟಿಪಿಸಿ, ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್, ಟೈಟಾನ್, ಜೆಎಸ್​ಡಬ್ಲೂ್ಯ ಸ್ಟೀಲ್, ಭಾರ್ತಿ ಏರ್​ಟೆಲ್, ರಿಲಯನ್ಸ್ಇಂಡಸ್ಟ್ರೀಸ್ ಮತ್ತು ಹಿಂದೂಸ್ತಾನ್ ಯೂನಿಲಿವರ್ ಇಳಿಕೆ ಕಂಡವು. ಇದಕ್ಕೆ ವ್ಯತಿರಿಕ್ತವಾಗಿ ಐಟಿಸಿ, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಬಜಾಜ್ ಫೈನಾನ್ಸ್ ಮತ್ತು ಎಚ್​ಡಿಎಫ್​ಸಿ ಬ್ಯಾಂಕ್ ಲಾಭ ಗಳಿಸಿದವು.
ಅದಾನಿ 1.12 ಲಕ್ಷ ಕೋಟಿ ರೂಪಾಯಿ ಕುಸಿತ:ಅದಾನಿ ಸಮೂಹದ ಎಲ್ಲ ಹತ್ತು ಷೇರುಗಳು ಬುಧವಾರ ಭಾರಿ ಕುಸಿತ ಕಂಡಿದ್ದು, ಮಾರುಕಟ್ಟೆ ಮೌಲ್ಯ 1.12 ಲಕ್ಷ ಕೋಟಿ ರೂ. ಇಳಿಕೆ ಆಗಿದೆ. ಅದಾನಿ ಟೋಟಲ್ ಗ್ಯಾಸ್ ಶೇ. 9.50, ಅದಾನಿ ಗ್ರೀನ್ ಎನರ್ಜಿ ಶೇ. 9.07, ಅದಾನಿ ಎನರ್ಜಿ ಸಲ್ಯೂಷನ್ಸ್ ಶೇ. 8.54, ಎನ್​ಡಿಟಿವಿ ಶೇ. 7.92, ಅದಾನಿ ಪೋರ್ಟ್ಸ್ ಶೇ. 6.97ರಷ್ಟು ಕುಸಿದಿದೆ. ಅದಾನಿ ಎಂಟರ್​ಪ್ರೖೆಸಸ್ ಶೇ. 6.91, ಎಸಿಸಿ ಶೇ. 6.87, ಅದಾನಿ ಪವರ್ ಶೇ. 4.99, ಅಂಬುಜಾ ಸಿಮೆಂಟ್ ಶೇ. 4.58 ಮತ್ತು ಅದಾನಿ ವಿಲ್ಮರ್ ಶೇ. 4.25ರಷ್ಟು ಕುಸಿದವು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
