ಲಖನೌ: ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಜಿಲ್ಲೆಯ ಸೋನ್​ಪಹಾಡಿ ಮತ್ತು ಹರ್ಡಿ ಎಂಬ ಎರಡು ಕಡೆ ಸುಮಾರು 3,350 ಟನ್ ಚಿನ್ನದ ನಿಕ್ಷೇಪವಿರುವುದು ಸಮೀಕ್ಷೆಯಿಂದ ಗೊತ್ತಾಗಿದೆ.
ಭಾರತ ಭೂಗರ್ಭ ಸರ್ವೆಕ್ಷಣೆ (ಜಿಎಸ್​ಐ) ಮತ್ತು ಭೂಗರ್ಭ ಹಾಗೂ ಗಣಿ ನಿರ್ದೇಶನಾಲಯ ಸಮೀಕ್ಷೆ ನಡೆಸಿದ್ದವು. ರಾಜ್ಯದ ಗಣಿ ಇಲಾಖೆ ಏಳು ಸದಸ್ಯರ ಸಮಿತಿಯೊಂದನ್ನು ರಚಿಸಿದ್ದು ಸಮಿತಿ ಸದಸ್ಯರು ನಿಕ್ಷೇಪವಿರುವ ಪ್ರದೇಶಗಳಿಗೆ ಭೇಟಿ ನೀಡಿದ್ದರು ಎಂದು ಜಿಲ್ಲಾ ಗಣಿ ಅಧಿಕಾರಿ ಕೆ.ಕೆ. ರಾಯ್ ತಿಳಿಸಿದ್ದಾರೆ. ಗಣಿಗಳು ಹೆಚ್ಚಾಗಿ ಬೆಟ್ಟ ಪ್ರದೇಶಗಳಲ್ಲಿ ಇರುವುದರಿಂದ ಗಣಿಗಾರಿಕೆ ನಡೆಸುವುದು ಸುಲಭ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಪ್ರದೇಶದಲ್ಲಿ ಚಿನ್ನವಲ್ಲದೆ ಅಪರೂಪದ ಯುರೇನಿಯಂ ಖನಿಜ ದೊರಕುವ ಸಾಧ್ಯತೆಯನ್ನೂ ಪರಿಶೀಲಿಸಲಾಗುತ್ತಿದೆ.
ಉತ್ತರ ಪ್ರದೇಶದ ಬುಂದೇಲ್​ಖಂಡ ಮತ್ತು ವಿದ್ಯಾನಂದನ್ ಜಿಲ್ಲೆಗಳಲ್ಲಿ ಚಿನ್ನ, ವಜ್ರ, ಪ್ಲಾಟಿನಂ, ಗ್ರಾನೈಟ್, ಪಾಸ್ಪೇಟ್, ಕ್ವಾರ್ಟ್ಜ್ ಮತ್ತು ಚೈನಾ ಮಣ್ಣು ಹೇರಳವಾಗಿದೆ. ಅಪಾರ ಪ್ರಮಾಣ ಚಿನ್ನ ಹಾಗೂ ಇತರ ಖನಿಜಗಳ ನಿಕ್ಷೇಪ ಪತ್ತೆಯಾಗಿರುವುದರಿಂದ ರಾಜ್ಯದ ಆದಾಯಕ್ಕೆ ಉತ್ತಮ ಕೊಡುಗೆಯಾಗಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 12 =
Remember me
