ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಮತ್ತು ಹೊಸ ಸಮ್ಮಿಶ್ರ ಸರ್ಕಾರದ 71 ಸಚಿವರು ಪ್ರಮಾಣ ವಚನ ಸ್ವೀಕರಿಸಿದ ಒಂದು ದಿನದ ನಂತರ ಸಚಿವ ಖಾತೆಗಳ ಹಂಚಿಕೆಯಾಗಿದೆ. ಜೆಡಿಎಸ್​ ಮುಖ್ಯಸ್ಥ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆಗಳ ಉಸ್ತುವಾರಿ ವಹಿಸಲಾಗಿದೆ. ಪ್ರಲ್ಹಾದ ಜೋಶಿ ಅವರಿಗೆ ಆಹಾರ, ಗ್ರಾಹಕ ವ್ಯವಹಾರಗಳು ಮತ್ತು ನವೀಕರಿಸಬಹುದಾದ ಇಂಧನ ಇಲಾಖೆಗೆ ವರ್ಗಾಯಿಸಲಾಗಿದೆ.
ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರಿಗೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ, ಹಾಗೂ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಖಾತೆ ನೀಡಲಾಗಿದೆ. ಇನ್ನೊಬ್ಬ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಜಲ ಶಕ್ತಿ ಮತ್ತು ರೈಲ್ವೆ ಸಚಿವಾಲಯದ ಖಾತೆ ನೀಡಲಾಗಿದೆ.
ತಮ್ಮ ಐತಿಹಾಸಿಕ ಮೂರನೇ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟವು ದೊಡ್ಡ ನಾಲ್ಕು ಸಚಿವಾಲಯಗಳಲ್ಲಿ ಪರಿಚಿತ ಮುಖಗಳನ್ನು ಉಳಿಸಿಕೊಳ್ಳಲಿದೆ. ಅಮಿತ್ ಶಾ ಅವರು ಗೃಹ ಖಾತೆ, ರಾಜನಾಥ್ ಸಿಂಗ್ ರಕ್ಷಣೆ, ವಿದೇಶಾಂಗ ಖಾತೆ ಎಸ್ ಜೈಶಂಕರ್ ಮತ್ತು ಹಣಕಾಸು ಖಾತೆಯನ್ನು ನಿರ್ಮಲಾ ಸೀತಾರಾಮನ್ ಅವರು ಉಳಿಸಿಕೊಳ್ಳಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಸರ್ಕಾರದ 71 ಸಚಿವರೊಂದಿಗೆ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು. ಇವರಲ್ಲಿ ಮೂವತ್ತು ಮಂದಿ ಕ್ಯಾಬಿನೆಟ್ ಮಂತ್ರಿಗಳಾಗಿ, ಐವರು ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಸಚಿವರಾಗಿ ಮತ್ತು 36 ಮಂದಿ ರಾಜ್ಯ ಸಚಿವರಾಗಿ ಸೇರ್ಪಡೆಗೊಂಡಿದ್ದಾರೆ..
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳನ್ನು ನಿತಿನ್ ಗಡ್ಕರಿ ಅವರು ಉಳಿಸಿಕೊಳ್ಳುತ್ತಾರೆ, ಅವರ ಅಡಿಯಲ್ಲಿ ಇಬ್ಬರು ಕಿರಿಯರು — ಅಜಯ್ ತಮ್ತಾ ಮತ್ತು ಹರ್ಷ್ ಮಲ್ಹೋತ್ರಾ ಇರಲಿದ್ದಾರೆ. ಪಿಯೂಷ್ ಗೋಯಲ್ ಅವರು ವಾಣಿಜ್ಯ ಖಾತೆಯನ್ನು ಉಳಿಸಿಕೊಂಡಿದ್ದಾರೆ.
ಮನೋಹರ್ ಲಾಲ್ ಖಟ್ಟರ್ ಅವರು ಎರಡು ಪ್ರಮುಖ ಸಚಿವಾಲಯಗಳನ್ನು ನಿರ್ವಹಿಸಲಿದ್ದಾರೆ — ವಿದ್ಯುತ್ ಮತ್ತು ವಸತಿ ಮತ್ತು ನಗರ ವ್ಯವಹಾರಗಳು. ಮೊದಲನೆಯದಕ್ಕೆ, ಅವರು ಕಿರಿಯ ಸಚಿವ ಶ್ರೀಪಾದ್ ನಾಯಕ್, ಎರಡನೆಯದಕ್ಕೆ, ಛತ್ತೀಸ್​ಗಢದಿಂದ ಮೊದಲ ಬಾರಿಗೆ ಸಚಿವರಾದ ತೋಖಾನ್ ಸಾಹು ಅವರ ಸಹಾಯವನ್ನು ಪಡೆಯುತ್ತಾರೆ.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಪ್ರಮುಖ ಕೃಷಿ ಸಚಿವಾಲಯವನ್ನು ನಿಭಾಯಿಸಲಿದ್ದಾರೆ. ಕಿರಣ್ ರಿಜಿಜು ಅವರನ್ನು ಸಂಸದೀಯ ವ್ಯವಹಾರಗಳ ಉಸ್ತುವಾರಿ ವಹಿಸಲಾಗಿದ್ದು, ಈ ಹಿಂದೆ ಪ್ರಲ್ಹಾದ ಜೋಶಿ ಅವರು ಇದನ್ನು ನಿರ್ವಹಿಸುತ್ತಿದ್ದರು. ಜೋಶಿ ಅವರನ್ನು ಆಹಾರ, ಗ್ರಾಹಕ ವ್ಯವಹಾರಗಳು ಮತ್ತು ನವೀಕರಿಸಬಹುದಾದ ಇಂಧನ ಇಲಾಖೆಗೆ ವರ್ಗಾಯಿಸಲಾಗಿದೆ.
ಸಿಆರ್ ಪಾಟೀಲ್ ಅವರು ಜಲಶಕ್ತಿ ಸಚಿವಾಲಯ ಮತ್ತು ಭೂಪೇಂದ್ರ ಯಾದವ್ ಅವರು ಪರಿಸರ ಖಾತೆಯನ್ನು ನಿರ್ವಹಿಸಲಿದ್ದಾರೆ. ಗಿರಿರಾಜ್ ಸಿಂಗ್ ಅವರನ್ನು ಸ್ಮೃತಿ ಇರಾನಿ ನಿರ್ವಹಿಸುತ್ತಿದ್ದ ಜವಳಿ ಇಲಾಖೆಗೆ ವರ್ಗಾಯಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯನ್ನು ಇರಾನಿ ಅವರು ನಿರ್ವಹಿಸುತ್ತಿದ್ದರು. ಇದರ ಉಸ್ತುವಾರಿಯನ್ನು ಅನ್ನಪೂರ್ಣ ದೇವಿ ನಿರ್ವಹಿಸುತ್ತಾರೆ. ಮನ್ಸುಖ್ ಮಾಂಡವಿಯಾ ಅವರನ್ನು ಕಾರ್ಮಿಕ ಮತ್ತು ಉದ್ಯೋಗದ ಉಸ್ತುವಾರಿ ವಹಿಸಲಾಗಿದೆ.
ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಎಚ್‌ಎಎಂ ಮುಖ್ಯಸ್ಥ ಜಿತನ್ ರಾಮ್ ಮಾಂಝಿ ಅವರು ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಉಸ್ತುವಾರಿಯನ್ನು ಹೊಂದಿದ್ದು, ಶೋಭಾ ಕರಂದ್ಲಾಜೆ ರಾಜ್ಯ ಸಚಿವರಾಗಿದ್ದಾರೆ.
ಮಾಹಿತಿ ಮತ್ತು ಪ್ರಸಾರ ಹಾಗೂ ರೈಲ್ವೆ ಖಾತೆಯನ್ನು ಅಶ್ವಿನಿ ವೈಷ್ಣವ್ ನಿರ್ವಹಿಸುತ್ತಾರೆ. ನಾಗರಿಕ ವಿಮಾನಯಾನ ಸಚಿವಾಲಯವು ಜ್ಯೋತಿರಾದಿತ್ಯ ಸಿಂಧಿಯಾ ಅವರ ಕೈಯಿಂದ ಟಿಡಿಪಿಯ ರಾಮ್ ಮೋಹನ್ ನಾಯ್ಡು (ಸಂಪುಟದ ಅತ್ಯಂತ ಕಿರಿಯ ಸಚಿವ) ಅವರಿಗೆ ಬದಲಾಗಿದೆ. ಸಿಂಧಿಯಾ ಅವರಿಗೆ ದೂರಸಂಪರ್ಕ ಸಚಿವಾಲಯದ ಉಸ್ತುವಾರಿ ವಹಿಸಲಾಗಿದೆ.
ಬಿಹಾರದ ಪ್ರಮುಖ ಮಿತ್ರ ಮತ್ತು ಎಲ್‌ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅವರಿಗೆ ಎರಡು ಸಚಿವಾಲಯಗಳನ್ನು ಬಹುಮಾನ ನೀಡಲಾಗಿದೆ. ಇವು ಕ್ರೀಡೆ ಮತ್ತು ಆಹಾರ ಸಂಸ್ಕರಣೆ.
ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿದರೂ ಅಂತಿಮವಾಗಿ ಕುಸಿದ ಸೂಚ್ಯಂಕ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:eighteen − 2 =
Remember me
