ತಮಿಳುನಾಡು:ಕಳೆದ ಒಂದೆರೆಡು ದಿನಗಳಿಂದ ಬಂಗಾಳಕೊಲ್ಲಿಯಲ್ಲಿ ತೀವ್ರಗೊಂಡ ಮೈಚಾಂಗ್ ಚಂಡಮಾರುತದ ಹಿನ್ನೆಲೆ ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಹೈ ಅಲರ್ಟ್​ ಘೋಷಿಸಲಾಗಿತ್ತು. ಅದರೊಟ್ಟಿಗೆ ಸೆಕ್ಷನ್ 144 ಕೂಡ ಜಾರಿ ಮಾಡಲಾಗಿತ್ತು. ಚಂಡಮಾರುತದ ಪರಿಣಾಮ ತಮಿಳುನಾಡಿನ ಚೆನ್ನೈನಲ್ಲಿ ಸುರಿದ ನಿರಂತರ ಮಳೆಗೆ ನಗರ ಪ್ರದೇಶಗಳು ಜಲಾವೃತಗೊಂಡು, ಜನಜೀವನ ಅಸ್ತವ್ಯಸ್ತವಾಗಿತ್ತು. ಇದೀಗ ಭಾರತೀಯ ಹವಾಮಾನ ಇಲಾಖೆ ಹೊಸ ಪ್ರಕಟಣೆ ಹೊರಡಿಸಿದ್ದು, ಡಿಸೆಂಬರ್ 08 ಹಾಗೂ 09 ರಂದು ಎರಡು ರಾಜ್ಯಗಳಿಗೆ ಭಾರೀ ಮಳೆಯ ಮುನ್ಸೂಚನೆಯನ್ನು ನೀಡಿದೆ.
ಇದನ್ನೂ ಓದಿ:​ಮದುವೆ ಆಗಿದ್ಯಾ? ಹೆಂಡ್ತಿ ಯಾರು? ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಕೊಟ್ಟೆ ಬಿಟ್ರು ವಿನೋದ್ ರಾಜ್
ಮೈಚಾಂಗ್ ಚಂಡಮಾರುತದ ಹೊಡೆತಕ್ಕೆ ತಮಿಳುನಾಡು ಈಗಾಗಲೇ ಸಿಲುಕಿದ್ದು, ಸದ್ಯ ಮುಂದಿನ ಎರಡು ದಿನಗಳ ಕಾಲ ಕೇರಳದಲ್ಲಿಯೂ ಸಹ ಮಳೆಯಾಗಲಿದೆ ಎಂದು ವರದಿ ತಿಳಿಸಿದೆ. ಡಿಸೆಂಬರ್ 08 ಮತ್ತು 09 ರಂದು ಮೇಲ್ಕಂಡ ಎರಡು ರಾಜ್ಯಗಳಲ್ಲಿ ಭಾರಿ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಸೂಚಿಸಿದೆ.
ಇದನ್ನೂ ಓದಿ:‘ಪೊಮ್ಮಾಲೆ ಕೊಡಗ್‌’ಗೆ ಮತ್ತೊಂದು ಪ್ರಶಸ್ತಿ
ಈಗಾಗಲೇ ಚಂಡಮಾರುತದ ಎಫೆಕ್ಟ್​ಗೆ ತತ್ತರಿಸಿರುವ ಚೆನ್ನೈ ನಿವಾಸಿಗಳು, ಅದರಿಂದ ಉಂಟಾದ ತೊಂದರೆಗಳಿಂದ ಇನ್ನೂ ಹೊರಬಂದಿಲ್ಲ. ಈ ಮಧ್ಯೆ ಮುಂದಿನ ಎರಡು ದಿನಗಳು ಭಾರೀ ಮಳೆಯಾಗಲಿದೆ ಎಂಬ ಹವಾಮಾನ ಇಲಾಖೆಯ ಎಚ್ಚರಿಕೆ ಮತ್ತಷ್ಟು ಚಿಂತೆಗೆ ದೂಡಿದೆ! ಸದ್ಯದ ವರದಿಯ ಪ್ರಕಾರ, ನಗರದ ಜನರು ತೀವ್ರ ಜಲಕ್ಷಾಮ, ವಿದ್ಯುತ್ ಬಿಕ್ಕಟ್ಟು ಮತ್ತು ಹಾಲಿನ ಕೊರತೆಯಿಂದ ಪರದಾಡುತ್ತಿದ್ದಾರೆ,(ಏಜೆನ್ಸೀಸ್).
ಟ್ರೇಲರ್​ ಪೈಫೋಟಿ! ‘ಸಲಾರ್’​ನ ಹಿಂದಿಕ್ಕಲಿದ್ಯಾ ‘ಡಂಕಿ’, ಎರಡೇ ದಿನಕ್ಕೆ ಶಾರುಖ್ ಚಿತ್ರ ಮುಂದು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 4 =
Remember me
