ತಮಿಳುನಾಡು:ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ತಮಿಳುನಾಡಿನ 8 ಜಿಲ್ಲೆಗಳ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮಳೆಯ ಅಬ್ಬರ ಮುಂದುವರಿಯುಲಿದೆ.
ಇದನ್ನೂ ಓದಿ:ಬರ ಪರಿಹಾರಕ್ಕೆ ಕೇಂದ್ರ ಕೊಟ್ಟ ಹಣ ಗ್ಯಾರಂಟಿಗೇ ಸಾಕಾಗುತ್ತಿಲ್ಲ!
ತಮಿಳುನಾಡು, ಪುದುಚೇರಿ ಸೇರಿದಂತೆ ಕೇರಳದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಈ ಪ್ರದೇಶಗಳ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುತ್ತಿದೆ. ತಮಿಳುನಾಡಿನ ಥೇಣಿ ಜಿಲ್ಲಾಡಳಿತವು ಈಗಾಗಲೇ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದ್ದು, ತಿರುನೆಲ್ವೇಲಿ, ಕನ್ಯಾಕುಮಾರಿ, ತೆಂಕಶಿ, ಪುದುಕೊಟ್ಟೈ, ತುತ್ತುಕುಡಿ, ವಿರುದುನಗರ ಮತ್ತು ನೀಲಗಿರಿ ಸೇರಿದಂತೆ ಏಳು ಜಿಲ್ಲೆಗಳಲ್ಲಿ ಗುರುವಾರ ಭಾರೀ ಮಳೆಯ ಮುನ್ಸೂಚನೆಯಿಂದಾಗಿ ಶಾಲೆಗಳಿಗೆ ರಜೆ ಘೋಷಿಸಿದೆ.
ಭಾರೀ ಮಳೆಗೆ ಚೆನ್ನೈನಲ್ಲಿ ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್ (MTC) ಬಸ್ ನೀರಿನಿಂದ ತುಂಬಿದ ತಗ್ಗು ಪ್ರದೇಶದ ಸುರಂಗಮಾರ್ಗದಲ್ಲಿ ಸಿಲುಕಿಕೊಂಡಿದ್ದು, ಜನರ ಸಂಚಾರ ಅಸ್ತವ್ಯಸ್ತಗೊಂಡಿದೆ. ಬುಧವಾರ (ನ.22) ಭಾರೀ ಮಳೆಯಿಂದಾಗಿ ಕೇರಳದ ಪತ್ತನಂತಿಟ್ಟ ಜಿಲ್ಲೆಯ ಹಲವು ಭಾಗಗಳು ತೀವ್ರ ಜಲಾವೃತಗೊಂಡಿವೆ. ಪತ್ತನಂತಿಟ್ಟ ಮತ್ತು ರಾಜ್ಯದ ಇತರ ಎರಡು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಇದನ್ನೂ ಓದಿ:BBKS10: ವರ್ತೂರ್​ ಸಂತೋಷ್ ಪ್ರಕಾರ ಮನೆಯೊಳಗೆ ‘ಕೋಗಿಲೆ-ಕಾಗೆ’ ಯಾರು?
ಜಿಲ್ಲೆಯಲ್ಲಿ ಬುಧವಾರ ಕೇವಲ ಎರಡು ಗಂಟೆಗಳಲ್ಲಿ 210 ಮಿಮೀ ಮಳೆಯಾಗಿದ್ದು, ಭೂಕುಸಿತ ಉಂಟಾಗಿ ಶಬರಿಮಲೆ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ ಎಂದು ವರದಿಯೊಂದು ಉಲ್ಲೇಖಿಸಿದೆ,(ಏಜೆನ್ಸೀಸ್).
ಬೆಂಗಳೂರು ಕಂಬಳಕ್ಕೆ ದಿನಗಣನೆ; ಇಲ್ಲಿವೆ ಕುತೂಹಲಕಾರಿ ಸಂಗತಿಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − seven =
Remember me
