ನವದೆಹಲಿ:ಉತ್ತರ ಭಾರತದಲ್ಲಿ ಕರೊನಾ ಜತೆಗೆ ಮಳೆಯ ಆರ್ಭಟವೂ ಹೆಚ್ಚಾಗಿದೆ. ಕಳೆದ ಕೆಲ ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿದ್ದು, ಹಲವು ರಾಜ್ಯಗಳಲ್ಲಿ ಪ್ರವಾಹವುಂಟಾಗಿದೆ. ಭಾರತೀಯ ವಾಯು ಪಡೆಯು ಜನರ ರಕ್ಷಣೆಗೆ ಸಿದ್ಧವಿರುವುದಾಗಿ ತಿಳಿಸಿದ್ದು, ಮಿಗ್ 17 ವಿಮಾನವನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿರುವುದಾಗಿ ಹೇಳಿದೆ.
ಪಶ್ಚಿಮ ಬಂಗಾಳ, ಸಿಕ್ಕಿಂ, ಅಸ್ಸಾಂ, ಮೇಘಾಲಯ ಮತ್ತು ಬಿಹಾರದ ಕೆಲ ಭಾಗಗಳಲ್ಲಿ ಮುಂದಿನ ಕೆಲ ದಿನಗಳ ಕಾಲ ಭಾರಿ ಪ್ರಮಾಣದ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ರೆಡ್ ಅಲರ್ಟ್ ಘೊಷಿಸಲಾಗಿದೆ. ಹೆಚ್ಚಿನ ಹಾನಿ ಸಂಭವಿಸುವ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಮೇಘಾಲಯದ ಮುಖ್ಯಮಂತ್ರಿ ಸಂಗ್ಮಾ ಕೊರ್ನಾಡ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ರಾಜ್ಯಕ್ಕೆ ಎಲ್ಲ ರೀತಿಯ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ.
ದೆಹಲಿಯಲ್ಲೂ ನಿಲ್ಲದ ಮಳೆ: ದೆಹಲಿಯಲ್ಲಿಯೂ ಮಂಗಳವಾರ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ಜತೆಗೆ ಗಂಟೆಗೆ 25-55 ಕಿ.ಮೀ ವೇಗದ ಗಾಳಿಯೂ ಬೀಸಿದ್ದು, ಜನ ಜೀವನ ಅಸ್ಥವ್ಯಸ್ಥವಾಗಿದೆ.
ಭಾರತಕ್ಕೆ ನೆರವು
ಪ್ರವಾಹಕ್ಕೆ ಸಿಲುಕಿರುವ ಭಾರತಕ್ಕೆ ನೆರವು ನೀಡಲು ಸಿದ್ಧವೆಂದು ವಿಶ್ವಸಂಸ್ಥೆ ತಿಳಿಸಿದೆ. ಅಸ್ಸಾಂ ರಾಜ್ಯದಲ್ಲಿ 40 ಲಕ್ಷದಷ್ಟು ಜನರ ಜೀವನ ಅಸ್ಥವ್ಯಸ್ಥವಾಗಿದ್ದು, ಭಾರತ ಬಯಸುವುದಾದರೆ ನಾವು ನೆರವು ನೀಡಲು ಧಾವಿಸುವುದಾಗಿ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಯವರ ವಕ್ತಾರ ಫಾನೆ ಡುಜಾರಿಕ್ ತಿಳಿಸಿದ್ದಾರೆ.
ಲಾಕ್​ಡೌನ್​ ತೆರವು; ಕರೊನಾ ವಿರುದ್ಧ ಹೋರಾಟಕ್ಕೆ ಏನಿದು 5 T ಸೂತ್ರ? ಜನರ ಸಹಕಾರಕ್ಕೆ ಸಿಎಂ ಮನವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 17 =
Remember me
