ಮುಂಬೈ:ಗುರುವಾರ ರಾತ್ರಿ ಮತ್ತು ಇಂದು ಬೆಳಗ್ಗೆ ಮುಂಬೈನ ಹಲವು ಏರಿಯಾಗಳಲ್ಲಿ ಸುರಿದ ಭಾರಿ ಮಳೆಗೆ ವಾಣಿಜ್ಯ ನಗರಿಯ ರಸ್ತೆಗಳಲ್ಲಿ ಪ್ರವಾಹ ಸೃಷ್ಟಿಯಾಗಿದ್ದು, ನಗರ ಸಾರಿಗೆ ಜತೆಗೆ ಸ್ಥಳೀಯ ರೈಲು ಕೂಡ ವಿಳಂಬವಾಗಿದೆ. ಗಾಂಧಿ ಮಾರ್ಕೆಟ್​ ಏರಿಯಾ, ಹಿಂದ್​ಮಟ ಜಂಕ್ಷನ್​ ಮತ್ತು ದಹಿಸರ್​ ಸಬ್​ವೇ ಸೇರಿದಂತೆ ಅನೇಕ ಪ್ರದೇಶಗಳು ಜಲಾವೃತಗೊಂಡಿವೆ.
ಸಿಯಾನ್​, ಬಾಂದ್ರಾ, ಅಂಧೇರಿ ಮತ್ತು ಸ್ಯಾಂತಕ್ರುಸ್​ ಏರಿಯಾಗಳು ಸಹ ಜಲಾವೃತಗೊಂಡಿವೆ. ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ವಿಡಿಯೋದಲ್ಲಿ ರೈಲು ಹಳಿಗಳು ಕಾಣದಂತೆ ಸಿಯಾನ್​ ರೈಲು ನಿಲ್ದಾಣವು ಮಳೆ ನೀರಿನಿಂದ ತುಂಬಿದೆ. ನೂರಾರು ಪ್ರಯಾಣಿಕರು ಪ್ಲಾಟ್​ಫಾರ್ಮ್​ನಲ್ಲಿ ಆಶ್ರಯ ಪಡೆದುಕೊಂಡಿದ್ದು, ಕರೊನಾ ಸಂದರ್ಭದಲ್ಲಿ ಇದು ಒಳ್ಳೆಯದಲ್ಲ.
#WATCH| Mumbai: Daily commuters' movement affected as railway track waterlogged in Sion following heavy rainfall.
Regional Meteorological Centre, Mumbai predicts "light to moderate rain in city & suburbs with possibility of heavy rainfall at isolated places" for next 24 hourspic.twitter.com/s6qq03tuIr
— ANI (@ANI)July 16, 2021

ಇನ್ನು ಮುಂಬೈ ನಗರದಲ್ಲಿ ಬೆಳಿಗ್ಗೆ 8.30ಕ್ಕೆ ಅಂತ್ಯವಾಗುವಂತೆ 24 ಗಂಟೆಯಲ್ಲಿ 64.45 ಎಂಎಂ ಮಳೆಯಾಗಿದೆ. ಅದರಲ್ಲೂ ಪೂರ್ವ ಉಪನಗರಗಳಲ್ಲಿ 120.67 ಎಂಎಂ ಮತ್ತು ಪಶ್ಚಿಮ ಉಪನಗರಗಳಲ್ಲಿ 127.16 ಎಂಎಂ ಮಳೆಯಾಗಿದೆ. 4.08 ಮೀಟರ್​​ ಹೆಚ್ಚಿನ ಉಬ್ಬರವಿಳಿತ ನಿನ್ನೆ ಸಂಜೆ 4.26ಕ್ಕೆ ಮತ್ತು 1.43 ಮೀಟರ್​ ಕಡಿಮೆ ಉಬ್ಬರವಿಳಿತ ರಾತ್ರಿ 10.37ಕ್ಕೆ ದಾಖಲಾಗಿದೆ ಎಂದು ನಗರದ ನಾಗರಿಕ ಸಂಸ್ಥೆ ಹೇಳಿದೆ. ಮುಂದಿನ ಮೂರು ಗಂಟೆಗಳಲ್ಲಿ ಮುಂಬೈನಲ್ಲಿ ಮಧ್ಯಮ ತೀವ್ರತೆಯ ಮಳೆಯಾಗಲಿದೆ ಎಂದು ಭಾರತದ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
#WATCH| Maharashtra: Dahisar area of Mumbai waterlogged following heavy rainfall in the city this morning.pic.twitter.com/OdA7YAa14l
— ANI (@ANI)July 16, 2021

ಮಳೆಯಿಂದಾಗಿ ಸಾಕಷ್ಟು ಅವಘಡಗಳು ಸಂಭವಿಸಿವೆ. 20 ಟನ್​ ಟೊಮ್ಯಾಟೋ ಸಾಗಿಸುತ್ತಿದ್ದ ಟ್ರಕ್​ ಪೂರ್ವ ಎಕ್ಸ್​ಪ್ರೆಸ್​ ಹೆದ್ದಾರಿಯಲ್ಲಿ ಉರುಳಿಬಿದ್ದಿದೆ. ಇದಕ್ಕೆ ಸಂಬಂಧಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಘಟನೆಯಲ್ಲಿ ಓರ್ವ ವ್ಯಕ್ತಿಗೆ ಗಾಯವೂ ಆಗಿದೆ. ತಡರಾತ್ರಿ 2 ಗಂಟೆ ಸುಮಾರಿ ಥಾಣೆ ಹತ್ತಿರದ ಕೊಪಾರಿಯಲ್ಲಿ ನಡೆದಿದೆ.
ಭಾರೀ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗಳು ಜಲಾವೃತಗೊಂಡು ಸಂಚಾರಕ್ಕೆ ಅಡಚಣೆ ಉಂಟಾಗಿದೆ ಮತ್ತು ಹಲವೆಡೆ ವಿದ್ಯುತ್​ ಸಮಸ್ಯೆ ಎದುರಾಗಿದೆ.(ಏಜೆನ್ಸೀಸ್​)
ಎಚ್​ಡಿಕೆ-ಇಂದ್ರಜಿತ್ ಲಂಕೇಶ್ ಭೇಟಿ ಫೋಟೋ ವೈರಲ್: ಮಾಜಿ ಸಿಎಂ ಹೇಳಿದ್ದು ಹೀಗೆ… ​

ಮೀನು ಮಾರಾಟ ಮಾಡಿ ಕುಟಂಬಕ್ಕೆ ನೆರವು: ಓದಿನಲ್ಲೂ ಮುಂದಿರುವ ಬಾಲಕನ ಗುಣಕ್ಕೆ ಪೊಲೀಸ್​ ಅಧಿಕಾರಿ ಫಿದಾ!

ಮುಖಕ್ಕೆ ಧರಿಸಬೇಕಿದ್ದ ಮಾಸ್ಕನ್ನು ಸಚಿವರು ಎಲ್ಲಿ ಹಾಕಿಕೊಂಡಿದ್ದಾರೆ ನೋಡಿ- ಜಾಲತಾಣದಲ್ಲಿ ಟ್ರೋಲ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × one =
Remember me
